ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ನಿಮಗಿದು ಗೊತ್ತೇ?::: ಮೊಬೈಲ್ ಫೋನ್ @ 45

ನಮ್ಮ, ನಿಮ್ಮ ಉಸಿರಿಗೆ ಉಸಿರಾಗಿ, ಆಗಾಗ್ಗೆ ತಲೆಕೆಡಿಸಿ, ಸ್ವಲ್ಪ ನಗು ತರಿಸಿ, ಬೇಕು, ಬೇಡದ್ದೆಲ್ಲವನ್ನೂ ತೋರಿಸಿ ಜೇಬು, ಪರ್ಸಿನಲ್ಲಿ ಶಾಶ್ವತವಾಗಿ ಪ್ರತಿಷ್ಠಾಪಿಸುವ ಜೀವಸಂಕುಲದ ಜೀವನಾಡಿಗೀಗ 45ರ ಹರೆಯ…. ಹೌದು ಮನುಷ್ಯನ ದೇಹಕ್ಕೆ ಜೀವ ತುಂಬಿರುವ ಅಂಗಾಂಗಗಳಷ್ಟೇ ಮೊಬೈಲ್ ಫೋನ್ ಕೂಡ ಈಗ ಅನಿವಾರ್ಯವಾಗಿಬಿಟ್ಟಿದೆ. ಮೊಬೈಲ್ ಪಿತಾಮಹನೆನಿಸಿಕೊಂಡ ನಿಸ್ತಂತು ಸಂವಹನ ಕ್ಷೇತ್ರದ ಇಂಜಿನಿಯರ್ ಮಾರ್ಟಿನ್ ಕೂಪರ್ 1973ರ ಏಪ್ರಿಲ್ 3ರಂದು ಮೊದಲ ಬಾರಿ ಮೋಟೋರೋಲ ಡೈನಾಟ್ಯಾಕ್ ಎಂಬ ಪುಟ್ಟ ಧ್ವನಿ ಪೆಟ್ಟಿಗೆಗೆ (ಮೊಬೈಲ್ ಫೋನ್) ಜೀವ ಕೊಟ್ಟರು. ಇದನ್ನು ಬಳಸಿಯೇ ನ್ಯೂಯಾರ್ಕ್​ನಿಂದ ಮೊದಲ ಕರೆ ಮಾಡಿದ್ದರು. ಆದರೆ, ಇದು ಜನರ ಬಳಕೆಗೆ ಬರಲು ಮತ್ತೊಂದು ದಶಕ ಬೇಕಾಯಿತು. ಹೀಗೆ 45 ವರ್ಷಗಳ ಅವಧಿಯಲ್ಲಿ ಕಾಲಕಾಲಕ್ಕೆ ಪರಿವರ್ತನೆಗೊಂಡ ಮೊಬೈಲ್ ಫೋನ್​ನ ಇತಿಹಾಸದತ್ತ ಒಂದು ಇಣುಕುನೋಟ.
ಮೊದಲ ಫೋನ್ ಮೋಟೊರೋಲ ಡೈನಾಟ್ಯಾಕ್ 10 ಇಂಚು ಉದ್ದ, 1.13 ಕಿಲೋ ತೂಕ ಇತ್ತು. ಒಮ್ಮೆ ಚಾರ್ಜ್ ಮಾಡಿದರೆ ಅರ್ಧ ಗಂಟೆ ಮಾತನಾಡಬಹುದಿತ್ತು.
1984ರಲ್ಲಿ ಮೋಟೊರೋಲ ಡೈನಾಟ್ಯಾಕ್ ಸಾರ್ವಜನಿಕ ಬಳಕೆಗೆ ಬಿಡುಗಡೆಗೊಂಡಿತು. ಆಗ ಅದರ ತೂಕ 771 ಗ್ರಾಂ. ದರ 3,995 ಡಾಲರ್(ಈಗಿನ ಮೌಲ್ಯ -ಠಿ;2.6 ಲಕ್ಷ ). ಬ್ಯಾಟರಿ ಚಾರ್ಜ್ 8 ಗಂಟೆ ಉಳಿಯುತ್ತಿತ್ತು.
1992ರಲ್ಲಿ ಮೋಟೋರೋಲ 3200 ಮಾದರಿಯಲ್ಲಿ ಮೊದಲ ಡಿಜಿಟಲ್ ಮೊಬೈಲ್ ಫೋನ್ ಬಿಡುಗಡೆ. ಇದೇ ಅವಧಿ ಯಲ್ಲಿ ನೋಕಿಯಾ 1011 – ಮೊದಲ ಜಿಎಸ್​ಎಂ ಮೊಬೈಲ್ ಬ್ರಿಟನ್​ನಲ್ಲಿ ಜನಪ್ರಿಯವಾಯಿತು. ಬೆಲೆ -ಠಿ;21,403 ಇತ್ತು.
65 ಕೋಟಿ –  ಭಾರತದಲ್ಲಿರುವ ಮೊಬೈಲ್ ಬಳಕೆದಾರರು
31.11 ಲಕ್ಷ ಕೋಟಿ – ರೂ. 2017ರಲ್ಲಿ ಜಾಗತಿಕ ಸ್ಮಾರ್ಟ್​ಫೋನ್ ಮಾರಾಟದ ಆದಾಯ
ಭಾರತ ನಂಟು
1995 ಜುಲೈ 31 – ಭಾರತದ ಅಂದಿನ ಟೆಲಿಕಾಂ ಸಚಿವ ಸುಖ್​ರಾಂ ಮತ್ತು ಪಶ್ಚಿಮ ಬಂಗಾಳ ಸಿಎಂ ಜ್ಯೋತಿ ಬಸು ನಡುವೆ ಮೊದಲ ಬಾರಿ ಮೊಬೈಲ್​ನಲ್ಲಿ ಮಾತುಕತೆ.
2000 – ‘ಸ್ಮಾರ್ಟ್​ಫೋನ್’ ಹೆಸರಿನಲ್ಲಿ ಮಾರಲ್ಪಟ್ಟ ಮೊದಲ ಮೊಬೈಲ್ ಫೋನ್ ಎರಿಕ್​ಸನ್​ಆರ್380. ಇದರಲ್ಲಿ ಸಿಂಬಿಯಾನ್ ಓಎಸ್ ಅಳವಡಿಸಲಾಗಿತ್ತು. ಸ್ಯಾಮ್ಂಗ್ ಎಸ್​ಪಿಎಚ್​ಎಂ100 ಎಂಬ ಮೊಬೈಲನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಎಂಪಿ3 ಮ್ಯೂಸಿಕ್ ಸಿಸ್ಟಂ ಕೂಡ ಇತ್ತು.
2002ರಲ್ಲಿ ಸಾನ್ಯೋ ಎಸ್​ಸಿಪಿ5300 ಕ್ಯಾಮರಾ ಹೊಂದಿದ ಮೊದಲ ಫೋನ್ ಆಗಿ ಮಾರುಕಟ್ಟೆಗೆ ಬಂತು.
2007 ಆಪಲ್ ಕಂಪನಿಯ ಮೊದಲ ಐಫೋನ್ ಮಾರುಕಟ್ಟೆಗೆ ಲಗ್ಗೆ. ಕೀಬೋರ್ಡ್, ಕೀ ಪ್ಯಾಡ್ ಇಲ್ಲದೆ ಮೊದಲ ವಾಣಿಜ್ಯ ಸ್ಮಾರ್ಟ್​ಫೋನ್ ಆಗಿ ಖ್ಯಾತಿ.
2008 ಎಚ್​ಟಿಸಿ ಡ್ರೀಮ್ ಲಿನಕ್ಸ್ ಆಧಾರಿತ ಆಂಡ್ರಾಯ್್ಡ ಆಪರೇಟಿಂಗ್ ಸಿಸ್ಟಂ ಹೊಂದಿದ ಮೊದಲ ಸ್ಮಾರ್ಟ್​ಫೋನ್.
45 ವರ್ಷದ ಅವಧಿಯಲ್ಲಿ ಸ್ಮಾರ್ಟ್​ಫೋನ್ ತೂಕ 100-200 ಗ್ರಾಂಗೆ, ದರವೂ 2.6 ಲಕ್ಷ ರೂಪಾಯಿಯಿಂದ ಕೆಲವೇ ಸಾವಿರ ರೂಪಾಯಿಗೆ ಇಳಿಕೆಯಾಗಿದೆ. ಆಪರೇಟಿಂಗ್ ಸಿಸ್ಟಂ, ತರಂಗಾಂತರ ಬಳಕೆಯಲ್ಲೂ ಸುಧಾರಣೆಯಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....