ಎರಡು ದಿನಗಳ ಹಿಂದಷ್ಟೇ ಕೊನೆಗೊಂಡ 2017-18ರ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಸಂಗ್ರಹ ಮುಂಗಡಪತ್ರದಲ್ಲಿ ನಿಗದಿಪಡಿಸಿದ್ದ 9.8 ಲಕ್ಷ ಕೋಟಿ ರೂಪಾಯಿಯ ಗುರಿ ಮೀರಿ 9.95 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಹಣಕಾಸು ಕಾರ್ಯದರ್ಶಿ ಹಸ್ಮುಖ್ ಅಧಿಯಾ ತಿಳಿಸಿದ್ದಾರೆ.
ಸದರಿ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ದಾಖಲೆಯ 6.84 ಕೋಟಿ ತಲುಪಿದೆ. ಹಿಂದಿನ ವರ್ಷ ಇದು 5.43 ಕೋಟಿ ಆಗಿತ್ತು. ಒಟ್ಟಾರೆಯಾಗಿ 99.5 ಲಕ್ಷ ಹೊಸ ತೆರಿಗೆದಾರರು ತೆರಿಗೆ ಜಾಲಕ್ಕೆ ಸೇರ್ಪಡೆಯಾದಂತಾಗಿದೆ. ಕಾರ್ಪೆರೇಟ್ ತೆರಿಗೆ ಶೇಕಡ 17.1 ಮತ್ತು ವ್ಯಕ್ತಿಗತ ಆದಾಯ ತೆರಿಗೆ ವಿಭಾಗದಲ್ಲ ಶೇಕಡ 19.9 ಬೆಳವಣಿಗೆ ದಾಖಲಾಗಿದೆ.
ಜಿಎಸ್ಟಿ ತೆರಿಗೆ ಸಂಗ್ರಹ: ಫೆಬ್ರವರಿ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಸಂಗ್ರಹ ಏರಿಕೆಯಾಗಿದ್ದು -ಠಿ;89,260 ಕೋಟಿ ಸಂಗ್ರಹವಾಗಿದೆ. ಇದುವರೆಗೆ 17,616 ಕೋಟಿ ರೂಪಾಯಿ ತೆರಿಗೆದಾರರಿಗೆ ಹಿಂತಿರುಗಿಸಲಾಗಿದೆ.
ಇ-ವೇ ಬಿಲ್: ದೇಶಾದ್ಯಂತ ಇ-ವೇ ಬಿಲ್ ವ್ಯವಸ್ಥೆಯನ್ನು ಏಪ್ರಿಲ್ ಒಂದರಿಂದ ವ್ಯವಸ್ಥಿತವಾಗಿ ಜಾರಿಗೊಳಿಸಿಲಾಗಿದೆ. ಮೊದಲ ದಿನ 2.59 ಲಕ್ಷ ಇ-ವೇ ಬಿಲ್ ನೀಡಲಾಗಿದ್ದು, ಎರಡನೇ ದಿನ ಇದು 2.89 ಲಕ್ಷ ತಲುಪಿದೆ. 11 ಲಕ್ಷ ಡೀಲರ್ಗಳು ಇ-ವೇ ಬಿಲ್ಗಾಗಿ ಹೆಸರು ನೋಂದಾಯಿಸಿದ್ದಾರೆ. -ಏಜೆನ್ಸೀಸ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ