ಗೋಲ್ಡ್ ಕೋಸ್ಟ್ : ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯರ ಪದಕ ಬೇಟೆ ಮುಂದುವರಿದಿದ್ದು ಐದನೇ ದಿನ ಪುರುಷರ ವಿಭಾಗದ ಟೇಬಲ್ ಟೆನ್ನಿಸ್ನಲ್ಲಿ ಚಿನ್ನ ಸಿಕ್ಕಿದ್ದು, ಜತೆಗೆ ಬ್ಯಾಡ್ಮಿಂಟನ್ನಲ್ಲಿ ಸೈನಾ,ಶೂಟಿಂಗ್ನಲ್ಲಿ ಜಿತು ರೈ ಚಿನ್ನದ ಪದಕ ಗಳಿಸಿದ್ದಾರೆ.
ಶರತ್ ಕಮಲ್, ಸತೀಯಾನ್ ಜಿ, ಹರ್ಮೀತ್ ದೇಸಾಯಿ, ಸನಿಲ್ ಶೆಟ್ಟಿ ಮತ್ತು ಅಮಲ್ರಾಜ್ ಆಂಥೋನಿ ಅವರನ್ನು ಒಳಗೊಂಡ ಭಾರತದ ತಂಡ ಫೈನಲ್ನಲ್ಲಿ ನೈಜೀರಿಯಾವನ್ನು 3-0 ಅಂತರದಲ್ಲಿ ಸೋಲಿಸಿ ಚಿನ್ನವನ್ನು ಗಳಿಸಿದ್ದಾರೆ.
ಅನುಭವಿ ಆಟಗಾರ್ತಿ ಸೈನಾ ನೇಹವಾಲ್ ಆಕ್ರಮಣಕಾರಿ ಆಟವಾಡಿ ಮಲೇಷ್ಯಾ ವಿರುದ್ಧ ಜಯಗಳಿಸುವ ಮೂಲಕ ಭಾರತಕ್ಕೆ ಚಿನ್ನದ ಪದಕ ಸಂಪಾದಿಸಿಕೊಟ್ಟಿದ್ದಾರೆ.
ಜಿತು ರೈ ಅವರು ಶೂಟಿಂಗ್ನಲ್ಲಿ ಎರಡನೇ ಬಾರಿಗೆ ಚಿನ್ನದ ಪದಕ ವಿಜೇತರಾದರು. 235.1 ಸ್ಕೋರ್ ಮಾಡುವ ಮೂಲಕ ಶೂಟರ್ ಓಂ ಮಿಥರ್ವಾಲ್ ಟಿ ಅವರ ದಾಖಲೆಯನ್ನು ಹಿಂದಿಕ್ಕಿ ಹೊಸ ಸಿಡಬ್ಲ್ಯೂಜಿ ದಾಖಲೆ ಸೃಷ್ಟಿಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ