ಇಂಡಿಯಾ ಪೋಸ್ಟ್
ಪೇಮೆಂಟ್ ಬ್ಯಾಂಕ್ ಏಪ್ರಿಲ್ 1ರಿಂದ ದೇಶಾದ್ಯಂತ
ವಹಿವಾಟು ಆರಂಭಿಸಲಿದೆ. ದೇಶದ ಉದ್ದಗಲಕ್ಕೆ 1.55 ಲಕ್ಷ ಕಿರು ಶಾಖೆಗಳೊಂದಿಗೆ ಕಾರ್ಯಾಚರಣೆ ಆರಂಭಿಸಲಿರುವ ಪೋಸ್ಟ್ ಬ್ಯಾಂಕ್, 650 ಬ್ಯಾಂಕ್ ಶಾಖೆಗಳನ್ನು ಹೊಂದಲಿದೆ. ಇದರೊಂದಿಗೆ
ಗ್ರಾಹಕರಿಗೆ ಹಲವು ಉಚಿತ ಸೇವೆಗಳೂ ಲಭ್ಯವಾಗಲಿವೆ.
ಈಗಾಗಲೇ ಹಲವು
ಶಾಖೆಗಳ ಕೆಲಸ ಪೂರ್ಣಗೊಂಡಿದ್ದು, ಇನ್ನೊಂದಷ್ಟು ಶಾಖೆ
ವಿಸ್ತರಣೆ ಕೆಲಸ ಪ್ರಗತಿಯಲ್ಲಿದೆ. ಇದು ಮುಗಿಯತ್ತಲೇ ಪೂರ್ಣ ಪ್ರಮಾಣದ ವಹಿವಾಟು ಆರಂಭವಾಗಲಿದೆ.
ಅಂಚೆ ಪೇದೆಗಳು ಮತ್ತು ಗ್ರಾಮೀಣ ಅಂಚೆ ಸೇವಕರು ಮನೆ ಬಾಗಿಲಿಗೆ ಡಿಜಿಟಲ್ ಪಾವತಿ ಸೇವೆಯನ್ನು
ತಲುಪಿಸಲಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಎರಡು ವರ್ಷ ಹಿಂದೆ ಅಂಚೆ ಇಲಾಖೆ ಸೇರಿ 11 ಸಂಸ್ಥೆಗಳಿಗೆ ಪಾವತಿ ಬ್ಯಾಂಕ್ ಆರಂಭಿಸಲು ತಾತ್ತಿ್ವಕ
ಒಪ್ಪಿಗೆ ನೀಡಿತ್ತು. ಪಾವತಿ ಬ್ಯಾಂಕುಗಳಿಗೆ ಪ್ರತಿ ಖಾತೆಗೆ 1 ಲಕ್ಷ ರೂ. ತನಕ ಠೇವಣಿ ಇರಿಸಿಕೊಳ್ಳುವುದಕ್ಕಷ್ಟೇ
ಅವಕಾಶವಿದ್ದು, ಸಾಲ ವಿತರಣೆಗೆ
ಅವಕಾಶವಿಲ್ಲ.
ಗ್ರಾಹಕರಿಗೇನು
ಪ್ರಯೊಜನ: ಬ್ಯಾಂಕ್ ಖಾತೆ ಹೊಂದಿಲ್ಲದವರು, ಹಿಂದುಳಿದ ಪ್ರದೇಶದಲ್ಲಿರುವವರಿಗೆ ಹಣಕಾಸು ಸೇವೆ ಒದಗಿಸುವುದಕ್ಕಾಗಿ ಪೇಮೆಂಟ್
ಬ್ಯಾಂಕ್ಗಳಿಗೆ ಪರವಾನಗಿ ನೀಡಲಾಗುತ್ತಿದೆ. ಪ್ರಸ್ತುತ ಲಭ್ಯವಿರುವ ಮೂಲಸೌಕರ್ಯ ಹಾಗೂ
ತಂತ್ರಜ್ಞಾನವನ್ನು ಬಳಸಿಕೊಂಡು ಆಧುನಿಕ ಪೇಮೆಂಟ್ ಬ್ಯಾಂಕ್ಗಳು ಮೊಬೈಲ್ ಬ್ಯಾಂಕಿಂಗ್ ಮುಂತಾದ
ಹೊಸ ಹೊಸ ಸೌಲಭ್ಯಗಳ ಮೂಲಕ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಒದಗಿಸುತ್ತವೆ. ಕೇಂದ್ರ ಸರ್ಕಾರದ ನೇರ
ನಗದು ಯೋಜನೆ ಅಡಿ ಹಲವು ಸಾಮಾಜಿಕ ಸುರಕ್ಷಾ ಯೊಜನೆಗಳ ಪಿಂಚಣಿ ಹಣವೂ ನೇರವಾಗಿ ಫಲಾನುಭವಿ
ಖಾತೆಗೆ ಬೀಳಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ