ಖಂಡಾಂತರ
ಬ್ಯಾಲಿಸ್ಟಿಕ್ ಕ್ಷಿಪಣಿ ಆರ್ಎಸ್-28 ಸಾರ್ವಟ್ ಎರಡನೆಯ
ಪರೀಕ್ಷೆಯನ್ನು ರಷ್ಯಾ ಯಶಸ್ವಿಯಾಗಿ ನಡೆಸಿದೆ. ಸೋವಿಯತ್ ಕಾಲದ ಸಟಾನ್ ಕ್ಷಿಪಣಿಯ ಸ್ಥಾನವನ್ನು
ಈ ನೂತನ ಕ್ಷಿಪಣಿ ತುಂಬಲಿದೆ. ಈ ಕ್ಷಿಪಣಿಯನ್ನು ಭೂಮಿಯ ಉತ್ತರದಿಂದ ದಕ್ಷಿಣ ದ್ರುವಕ್ಕೆ
ಉಡಾಯಿಸಬಹುದಾಗಿದೆ. ಅಲ್ಲದೆ ಇದನ್ನು ಆಂಟಿ ಬ್ಯಾಲಿಸ್ಟಿಕ್ ಕ್ಷಿಪಣಿಯಿಂದ ತಡೆಯಲು ಸಾಧ್ಯವಿಲ್ಲ.
2017ರ ಡಿಸೆಂಬರ್ನಲ್ಲಿ ಇದರ
ಮೊದಲ ಯಶಸ್ವಿ ಪರೀಕ್ಷೆ ನಡೆಸಲಾಗಿತ್ತು. ರಷ್ಯಾ ಬಳಿ ಕ್ಷಿಪಣಿಗಳ ಸಂಗ್ರಹ ಸಾಕಷ್ಟಿದೆ. ಅಮೆರಿಕ
ಹಾಗೂ ರಷ್ಯಾ ನಡುವೆ ಶೀತಲ ಸಮರ ನಡೆಯುತ್ತಿದ್ದು, ಹೊಸ ಕ್ಷಿಪಣಿ ಪರೀಕ್ಷೆ ಆತಂಕ ಮೂಡಿಸಿದೆ. ಹೊಸ ಕ್ಷಿಪಣಿ ಕುರಿತು ರಷ್ಯಾ ಅಧ್ಯಕ್ಷ ಪುತಿನ್
ಇತ್ತೀಚೆಗೆ ಭಾಷಣವೊಂದರಲ್ಲಿ ಉಲ್ಲೇಖಿಸಿದ್ದರು.
100 ಟನ್
ಸ್ಪೋಟಕವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಇದು ಹೊಂದಿದೆ. 10 ಅಣ್ವಸ್ತ್ರಗಳನ್ನು ಒಮ್ಮೆಲೆ ಹೊತ್ತೊಯ್ದು, ದಾಳಿ ನಡೆಸಬಲ್ಲದು. 2020ರಲ್ಲಿ ಪೂರ್ಣ ಪ್ರಮಾಣದಲ್ಲಿ ಈ ಕ್ಷಿಪಣಿ ಉತ್ಪಾದನೆ
ಆರಂಭವಾಗಲಿದ್ದು, 2021ರಲ್ಲಿ ಸೇನೆಗೆ
ಸೇರ್ಪಡೆ ಮಾಡಿಕೊಳ್ಳಲು ರಷ್ಯಾ ನಿರ್ಧರಿಸಿದೆ.
1950ರ ದಶಕದಲ್ಲಿಯೇ
ಅಮೆರಿಕ ಇಂತಹ ಕ್ಷಿಪಣಿ ತಯಾರಿಕೆಯಲ್ಲಿ ತೊಡಗಿತ್ತು. ಈ ಕ್ಷಿಪಣಿಗಳು ಹಾರಾಟ ನಡೆಸುವ ಎಲ್ಲ
ಭಾಗಗಳಲ್ಲಿ ರೇಡಿಯೇಷನ್ ಹೊರಹಾಕುತ್ತಿತ್ತು. ಹೀಗಾಗಿ ಅರ್ಧದಲ್ಲಿಯೇ ಯೋಜನೆಯನ್ನು
ಮೊಟಕುಗೊಳಿಸಲಾಗಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ