ವಿಶ್ವದಲ್ಲೇ
ಪ್ರಮುಖ ಮಿಲಿಟರಿ ಶಕ್ತಿಯನ್ನು ರೂಪಿಸುವುದು ಮತ್ತು ಯುದ್ಧ ಸಾಮಗ್ರಿಗಳ ನವೀಕರಣ ಮುಂತಾದ ಚೀನಾದ
ಕಾರ್ಯಗಳು ಹಲವು ರಾಷ್ಟ್ರಗಳಿಗೆ ಆತಂಕ ಮೂಡಿಸಿದೆ.
ಶತ್ರುರಾಷ್ಟ್ರಗಳಿರಲಿ…..
ಸೊಳ್ಳೆಗಳ ವಿರುದ್ಧವೂ ಚೀನಾ
ಸಮರ ಸಾರಿದೆ. ಹೌದು.. ಚೀನಾ ಸೊಳ್ಳೆಗಳ ವಿರುದ್ಧ ಯುದ್ಧಕ್ಕೆ ಕರೆ ನೀಡಿದ್ದು, ಇದಕ್ಕಾಗಿ ಮಿಲಿಟರಿ ಗ್ರೇಡ್ ರಾಡಾರ್
ತಯಾರಿಸಲಾಗುತ್ತಿದೆ. ಮೂಲಗಳ ಪ್ರಕಾರ ಚೀನಾದ ರಕ್ಷಣಾ ಲ್ಯಾಬೋರೇಟರಿ ಬೀಜಿಂಗ್ ಇನ್ಸ್ಟಿಟ್ಯೂಟ್
ಆಫ್ ಟೆಕ್ನಾಲಜಿ ಇಂತಹ ರಡಾರ್ನ ಮೂಲಮಾದರಿಯನ್ನು ಸಿದ್ಧ ಪಡಿಸಿದೆ. ಈ ರಾಡಾರ್ಗಳು 2 ಕಿಮೀ ಮಿತಿ ಹೊಂದಿದ್ದು, ಈ ಅಂತರದಲ್ಲಿರುವ ಏಕೈಕ ಸೊಳ್ಳೆಯನ್ನು
ಗುರುತಿಸಬಹುದಂತೆ..! ಇದು ಎಲೆಕ್ಟ್ರೋ ಮ್ಯಾಗ್ನೆಟಿಕ್ ತರಂಗಾಂತರಗಳ ಮೂಲಕ ಕ್ಷಿಪ್ರವಾಗಿ ಮದ್ದು
ರವಾನಿಸಲಿದ್ದು, ಇದರಿಂದ ಸೊಳ್ಳೆ
ಸಾಯುತ್ತದೆ. ಹೀಗೆ ಸತ್ತ ಒಂದೊಂದು ಸೊಳ್ಳೆಯ ಜಾತಿ, ಲಿಂಗ, ಹಾರುವ ವೇಗ ಮತ್ತು ದಿಕ್ಕು ಎಲ್ಲ ಮಾಹಿತಿಗಳು ಕಚೇರಿಯಲ್ಲಿರುವ ಕಂಪ್ಯೂಟರಿಗೆ ತಲುಪಲಿದೆ.
ಸಾಮಾನ್ಯವಾಗಿ ಇಂತಹ ತಂತ್ರಜ್ಞಾನವನ್ನು ಕ್ಷಿಪಣಿ ಪತ್ತೆ ವ್ಯವಸ್ಥೆಯಲ್ಲಿ ಬಳಸಲಾಗುತ್ತದೆ.
ಈ ತಂತ್ರಜ್ಞಾನ
ಸೊಳ್ಳೆಗಳ ವಿರುದ್ಧ ಯುದ್ಧದಲ್ಲಿ ಗೇಮ್ ಚೇಂಜರ್ ಆಗಿರಲಿದೆ ಎಂದು ತಜ್ಞರು ತಿಳಿಸಿದ್ದಾರೆ.
ಸೊಳ್ಳೆಗಳು ವಿಶ್ವಾದ್ಯಂತ ಕೆಲ ಅಪಾಯಕಾರಿ ವೈರಸ್ಗಳನ್ನು ಹರಡುವುದಕ್ಕೆ ಸುದ್ದಿಯಾಗಿವೆ. ಈ
ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ಚೀನಾ ಅದಾಗಲೇ 84 ಕೋಟಿ ರೂ. ಗಳನ್ನು ವ್ಯಯಿಸಿದೆ ಯಂತೆ…!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ