ವಿಷಯಕ್ಕೆ ಹೋಗಿ

ಅಳುವ ಮದುವೆ – ಚೀನಾದಲ್ಲಿರುವ ಸಾಂಪ್ರದಾಯಿಕ ಆಚರಣೆ by ನಡೆ-ನುಡಿ – ಕೆ.ವಿ.ಶಶಿದರ.


ಅಳುವ ಮದುವೆ Crying Marriage
ಮದುವೆ ಕಾಲಾನುಕಾಲದಿಂದ ಎಲ್ಲಾ ಜಾತಿ, ದರ‍್ಮ, ಸಂಸ್ಕ್ರುತಿಗಳಲ್ಲಿ ಬೆಳೆದು ಬಂದಿರುವ ಒಂದು ಸಂಪ್ರದಾಯ. ಅವರವರ ನಿಶ್ಟೆಗೆ ಅನುಗುಣವಾಗಿ ಪ್ರದೇಶದಿಂದ ಪ್ರದೇಶಕ್ಕೆ ಮದುವೆ ನಡೆಯುವ, ನಡೆಸುವ ರೀತಿ-ರಿವಾಜುಗಳಲ್ಲಿ ಬಹಳಶ್ಟು ವ್ಯತ್ಯಾಸಗಳನ್ನು ಕಾಣಬಹುದು. ಮದುವೆ ಎಂಬುದು ಸಂಬ್ರಮದ, ಸಂತೋಶದ ಸಮಾರಂಬ. ಬಂದನಗಳ ಬೆಸುಗೆ ಇದರ ಪ್ರಮುಕ ದ್ಯೇಯ.
ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಅನೇಕ ಪ್ರದೇಶಗಳಲ್ಲಿ ಮದುವೆ ಸಂಪ್ರದಾಯ ಬೇರೆಲ್ಲೆಡೆಗಿಂತ ತೀರ ಬೇರೆಯಾಗಿದೆ. ಅದೇ 'ಅಳುವ ಮದುವೆ'.
ಇತಿಹಾಸವನ್ನು ಕೆದಕಿ ನೋಡಿದರೆ ಈ ಸಂಪ್ರದಾಯ 20ನೇ ಶತಮಾನದ ಮೊದಲ ದಶಕದಲ್ಲೂ ಆಚರಣೆಯಲ್ಲಿತ್ತು ಎಂದು ತಿಳಿದು ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಮೊದಲಿನ ಜನಪ್ರಿಯತೆಯನ್ನು ಕಳೆದುಕೊಂಡಿದೆ. ಆದರೂ 'ತುಜಿಯಾ' ಪಂಗಡದ ಜನರು ಇಂದೂ ಸಹ ಈ ಸಂಪ್ರದಾಯವನ್ನು ಮದುವೆಯ ಅಗತ್ಯ ಬಾಗವೆಂದೇ ಪರಿಗಣಿಸುವುದು ಮಾತ್ರವಲ್ಲ ಆಚರಿಸುತ್ತಾರೆ ಕೂಡ.
ಅಳುವ ಮದುವೆ ಸಂಪ್ರದಾಯ ಹಲವು ಪ್ರಾಂತ್ಯಗಳಲ್ಲಿ ಒಂದೇ ರೀತಿಯಲ್ಲಿ ಆಚರಿಸಲ್ಪಡುತ್ತದೆ. ಹಳೆ ತಲೆಮಾರಿನ ಹಿರಿಯರ ಪ್ರಕಾರ ಮದುಮಗಳು ಮದುವೆಯ ಸಮಾರಂಬದಲ್ಲಿ ಅಳುವುದು ಕಡ್ಡಾಯ. ಹಾಗೇನಾದರೂ ಅಳದಿದ್ದಲ್ಲಿ ಮದುಮಗಳನ್ನು ಬೆಳಸಿದ ರೀತಿಯ ಬಗ್ಗೆ ನೆರೆಹೊರೆಯವರು ಹಗುರವಾಗಿ ಆಡಿಕೊಳ್ಳುವುದು ಸಾಮಾನ್ಯ. ಸಂಸ್ಕ್ರುತಿ ಹೀನ ಎಂದು ಹೀಯಾಳಿಸುವುದೂ ಉಂಟು. ಅಂತಹ ಮದುಮಗಳು ನಗೆಪಾಟಲಿಗೆ ಈಡಾಗುತ್ತಿದ್ದುದು ಹೌದು. ಮದುವೆ ಸಮಾರಂಬದಲ್ಲಿ ಮದುಮಗಳು ಅಳದಿದ್ದಲ್ಲಿ ಅಳುವಂತೆ ಮಾಡಲು ಆಕೆಯ ತಾಯಿ ಮಗಳಿಗೆ ಹೊಡೆಯುವ ಪ್ರಕರಣಗಳೂ ಹೇರಳವಾಗಿದ್ದವು.
ಕ್ರಿಸ್ತ ಪೂರ‍್ವ 475-221 ಕಾಲದಲ್ಲಿನ ಐತಿಹಾಸಿಕ ದಾಕಲೆಗಳಂತೆ ಜಾವೋ ರಾಜ್ಯದ ರಾಜಕುಮಾರಿ ಯಾನ್ ರಾಜ್ಯದ ರಾಜಕುಮಾರನನ್ನು ಮದುವೆಯಾಗಿ, ಆ ರಾಜ್ಯದ ರಾಣಿಯಾಗಿ ಮುಂದಿನ ಜೀವನವನ್ನು ಸಾಗಿಸಲು ಗಂಡನ ಮನೆ ಸೇರಬೇಕಿತ್ತು. ಆಗ ರಾಜಕುಮಾರಿಯ ತಾಯಿ, ಮಗಳ ಅಗಲಿಕೆಯ ನೋವನ್ನು ತಾಳಲಾರದೆ ಆಕೆಯ ಕಾಲುಗಳನ್ನು ಹಿಡಿದು ಆಳುತ್ತಾ ಆದಶ್ಟು ಬೇಗ ಹಿಂದಿರುಗುವಂತೆ ಬೇಡಿದಳಂತೆ. ತಾಯಿ ಅತ್ತಾಗ ಆಕೆಯ ಜೊತೆ ಮಗಳೂ ಅಳುವುದು ಸಾಮಾನ್ಯ. ಹಾಗಾಗಿ ರಾಜಕುಮಾರಿ ತುಂಬಾ ಅತ್ತಳಂತೆ. ಇದೇ ಅಳುವ ಮದುವೆ ಸಂಪ್ರದಾಯದ ಮೂಲ ಎಂದು ಪ್ರಾಸಂಗಿಕವಾಗಿ ಸ್ತಳೀಯರು ಸೂಚಿಸುವುದುಂಟು.
ಮದುವೆ ಮುಂಚಿನ ಒಂದು ತಿಂಗಳ ಕಾಲ, ದಿನಕ್ಕೆ ಒಂದು ಗಂಟೆ ತಪ್ಪದೇ ಅಳುತ್ತಾರೆ!
ಈ ಸಂಪ್ರದಾಯವನ್ನು ಪಶ್ಚಿಮ ಸಿಚುವಾನ್ ಪ್ರಾಂತ್ಯದಲ್ಲಿ ‘ಜುವೊ ಟಾಂಗ್’ ಎನ್ನುತ್ತಾರೆ. ಜುವೊ ಟಾಂಗ್ ಅಂದರೆ ‘ಹಜಾರದಲ್ಲಿ ಕುಳಿತು’ ಎಂಬ ಹುರುಳು ಬರುತ್ತದೆ. ಸಾಮಾನ್ಯವಾಗಿ ಮದುವೆ ದಿನಕ್ಕೆ ಒಂದು ತಿಂಗಳ ಮೊದಲು ಅಳುವುದಕ್ಕಾಗಿಯೇ ನಿಗದಿಪಡಿಸಿದ ಹಜಾರದಲ್ಲಿ ಅಳುವ ಪ್ರಕ್ರಿಯೆಯನ್ನು ಮದುಮಗಳು ಆರಂಬಿಸುತ್ತಾಳೆ. ಮುಸ್ಸಂಜೆ ಹರಿದು ರಾತ್ರಿ ಪ್ರಾರಂಬವಾಗುತ್ತಿದ್ದಂತೆ ಹಜಾರಕ್ಕೆ ಬಂದು ಕುಳಿತು ಸಾಂಪ್ರದಾಯಿಕ ಕೆಲಸವನ್ನು ಪ್ರಾರಂಬಿಸುತ್ತಾಳೆ. ಸುಮಾರು ‘ಒಂದು ಗಂಟೆ’ ಕಾಲ ಏಕಾಂಗಿಯಾಗಿ ಅಳುತ್ತಾಳೆ. ಈ ಕಾರ‍್ಯಕ್ರಮ ತಪ್ಪದೇ ಹತ್ತು ದಿನಗಳ ಕಾಲ ಸಾಗುತ್ತದೆ.
ಹತ್ತು ದಿನಗಳ ಬಳಿಕ ಮದುಮಗಳ ಜೊತೆ ಆಕೆಯ ತಾಯಿಯೂ ಸೇರಿ ಹಜಾರದಲ್ಲಿ ಅಳುವುದರಲ್ಲಿ ಪಾಲ್ಗೊಳ್ಳುತ್ತಾಳೆ. ತಾಯಿ ಮಗಳ ಅಳುವ ಕಾರ‍್ಯಕ್ರಮವು ಮತ್ತೆ ಹತ್ತು ದಿನಗಳ ಕಾಲ ನಡೆಯುತ್ತದೆ. ಎರಡನೆಯ ಹತ್ತು ದಿನಗಳು ಕಳೆದ ಬಳಿಕ ಮದುಮಗಳು ಮತ್ತು ಆಕೆಯ ತಾಯಿಯ ಜೊತೆ ಅಜ್ಜಿಯೂ ಸಹ ಜೊತೆಗೂಡುವುದು ಸಂಪ್ರದಾಯ. ಮೂರು ತಲೆಮಾರಿನವರೂ ಜೊತೆ ಸೇರಿ ಮುಂದಿನ ಹತ್ತು ದಿನಗಳ ಕಾಲ ಅಳುವ ಕಾರ‍್ಯವನ್ನು ಮುಂದುವರೆಸುತ್ತಾರೆ. ಮದುಮಗಳಿಗೆ ಅಕ್ಕ ತಂಗಿಯರಾಗಲಿ, ದೊಡ್ಡಮ್ಮ ಚಿಕ್ಕಮ್ಮಂದಿರುಗಳಾಗಲಿ ಇದ್ದಲ್ಲಿ ಅವರುಗಳು ಅಳುವ ಕಾರ‍್ಯಕ್ರಮದಲ್ಲಿ ಪಾಲ್ಗೊಳ್ಳುವುದು ಕಡ್ಡಾಯ.
ಹೇಗೆ ಬೇಕೋ ಹಾಗೆ ಅಳಬಹುದು. ಹಾಡೂ ಹಾಡಬಬಹುದು!
ಅಳುವಿನಲ್ಲಿ ವೈವಿದ್ಯತೆಯನ್ನು ಮೆರೆಯುವುದು ಮದುಮಗಳ ಜಾಣ್ಮೆಗೆ ಹಿಡಿದ ಕನ್ನಡಿ. ಬಗೆಬಗೆಯ ಪದಗಳನ್ನು ಬಳಸಿ ವಿಬಿನ್ನ ರೀತಿಯಲ್ಲಿ ಮನಮುಟ್ಟುವಂತೆ ಅಳಲು ಈ ವೇದಿಕೆಯನ್ನು ಆಕೆ ಪೂರ‍್ಣವಾಗಿ ಬಳಸಿಕೊಳ್ಳಬಹುದು. ತನ್ನದೇ ಆದ ಶೈಲಿಯಲ್ಲಿ ಹಾಡುಗಳನ್ನು ಕಟ್ಟಿ ಹಾಡಬಹುದು. ಮದುವೆಯ ಬಗ್ಗೆ ಬೇಸರವಿದ್ದಲ್ಲಿ ಹಾಡಿನ ಮೂಲಕ ಹೊರಹಾಕಬಹುದು. ಮದುವೆ ದಳ್ಳಾಳಿಯನ್ನು ಮನಸ್ಸಿಗೆ ಬಂದಂತೆ ನಿಂದಿಸಬಹುದು. ಈ ಸಮಯದಲ್ಲಿ ಆಕೆ ಬಳಸುವ ಪದಗಳಿಗಾಗಲಿ ರೀತಿ-ರಿವಾಜಿಗಾಗಲಿ ಯಾವುದೇ ನಿರ‍್ಬಂದ ಇರುವುದಿಲ್ಲ, ಇದನ್ನು 'ಅಳುವ ಮದುವೆಯ ಹಾಡು'(Crying Marriage Song) ಎನ್ನುತ್ತಾರೆ.
ಇಂತಹ ಮದುವೆ ಸಮಾರಂಬದಲ್ಲಿ ಅತಿ ದುಕ್ಕಕರ ಪದಗಳ ಬಳಕೆ ಸಾಮಾನ್ಯ. ಮದುವೆಯ ಶುಬಸಮಾರಂಬದಲ್ಲಿ ದುಕ್ಕಕರ ಪದಗಳ ಬಳಕೆ ಮದುವೆ ಕಾರ‍್ಯಕ್ರಮದ ಸಂತೋಶವನ್ನು ಹೆಚ್ಚಿಸುವ ಹಾಗೂ ಮದುವೆಯ ಬಂದನವನ್ನು ಗಟ್ಟಿಗೊಳಿಸುವ ಬಗೆ ಎಂದು ಆ ಪಂಗಡದ ಹಿರಿಯ ಸಂಪ್ರದಾಯವಾದಿಗಳ ನಂಬಿಕೆ!
ಚೀನಾದ ಈ ಸಮಾಜದವರು ಹೆಣ್ಣುಮಕ್ಕಳನ್ನು ಬೆಳಸುವಾಗ ಮುಂದಿನ ಜೀವನಕ್ಕೆ ಅವಶ್ಯವಿರುವ ಸದ್ಗುಣ ಹಾಗೂ ವಿದೇಯತೆಗಳನ್ನು ಬಹಳವಾಗಿ ಮನಸ್ಸಿಗೆ ತುಂಬುವುದು ಪದ್ದತಿ. ಈ ವಿದೇಯತೆಯೇ ಹೆಣ್ಣುಮಕ್ಕಳಿಗೆ ತಮ್ಮ ಮದುವೆಯ ಸಮಯದಲ್ಲಿ ಯಾವುದೇ ಅಬಿಪ್ರಾಯವನ್ನು ವ್ಯಕ್ತಪಡಿಸದಂತೆ ನಿರ‍್ಬಂದ ಹಾಕುತ್ತಿತ್ತು. ವದುವಿನ ಪೋಶಕರು ಹಾಗೂ ಮದುವೆಯ ದಳ್ಳಾಳಿಯ ತೀರ‍್ಮಾನವೇ ಕೊನೆ. ಮದುವೆ ದಳ್ಳಾಳಿಗಳೇ ಅಳುವ ಮದುವೆಯ ಪ್ರಮುಕ ಸೂತ್ರದಾರಿಗಳು. ಅಳುವ ಮದುವೆಯ ಹೆಣ್ಣುಮಕ್ಕಳು ಇಂತಹ ದಳ್ಳಾಳಿಗಳನ್ನು ತಮ್ಮ ಮನಸೋ ಇಚ್ಚೆ ತೆಗಳುವುದುಂಟು. ಅವರುಗಳಿಗೆ ಇದು ಸಾಮಾನ್ಯ. ಇವಾವುದಕ್ಕೂ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಈ ರೀತಿಯ ಬೈಗುಳಗಳಿಂದ ತಮ್ಮ ಅದ್ರುಶ್ಟವನ್ನು ಬದಲಿಸಲು ಸಾದ್ಯವಿಲ್ಲ ಎಂಬುದು ಅವರಿಗೆ ಗೊತ್ತು. ಆದ ಕಾರಣ ದಳ್ಳಾಳಿಗಳು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಜುಲೈ 1ರಿಂದ ಬೆಂಗಳೂರು ವಿಜ್ಞಾನೋತ್ಸವ

41 ವರ್ಷಗಳಿಂದ ಒಮ್ಮೆಯೂ ತಪ್ಪದಂತೆ, ವ್ರತದಂತೆ ನಡೆದುಕೊಂಡು ಬಂದಿರುವ ಬೆಂಗಳೂರು ವಿಜ್ಞಾನೋತ್ಸವ ಜುಲೈ ಒಂದರಿಂದ ಆಗಸ್ಟ್ 2ರವರೆಗೂ ನಡೆಯಲಿದೆ. ಭಾರತೀಯ ಕ್ಷಿಪಣಿ ಕ್ಷೇತ್ರದಲ್ಲಿ ಮಿಸೈಲ್ ವುಮನ್ (ಅಗ್ನಿ ಕನ್ಯೆ!) ಎಂದೇ ಖ್ಯಾತರಾಗಿರುವ ಡಾ.ಟೆಸ್ಸಿ ಥಾಮಸ್ ‘ಬಾಹ್ಯಾಕಾಶ ತಂತ್ರಜ್ಞಾನದ ಪ್ರಗತಿ’ ಕುರಿತು ಉಪನ್ಯಾಸ ನೀಡಲಿರುವುದು ಉತ್ಸವದ ವಿಶೇಷಗಳಲ್ಲಿ ಒಂದು. ಕೇರಳದ ತುಂಬಾ ಉಡಾವಣಾ ಕೇಂದ್ರದ ಸಮೀಪದಲ್ಲೇ ಹುಟ್ಟಿ ರಾಕೆಟ್ ಉಡಾವಣೆಯನ್ನು ನೋಡನೋಡುತ್ತ, ಒಂದಲ್ಲ ಒಂದು ದಿವಸ ಅಲ್ಲೇ ಉದ್ಯೋಗಿಯಾಗುವ ಕನಸು ಕಾಣುತ್ತ ಭವಿಷ್ಯದಲ್ಲಿ ನನಸಾಗಿಸಿಕೊಂಡ ಹಿರಿಮೆ ಹೆಮ್ಮೆ ಟೆಸ್ಸಿಯವರದು. ‘ಅಗ್ನಿ-4’ ಕ್ಷಿಪಣಿ ಯೋಜನಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಸಾಮರ್ಥ್ಯ ಮೆರೆದ ಟೆಸ್ಸಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಗ್ನಿ ಕನ್ಯೆ ಎಂದೇ ಹೆಸರಾದವರು. ಇವರ ಸಾಮರ್ಥ್ಯ ಬೆಳಕಿಗೆ ಕಾರಣರಾದವರು ಎ.ಪಿ.ಜೆ. ಅಬ್ದುಲ್ ಕಲಾಂ! ಜುಲೈ 21ರಂದು ಟೆಸ್ಸಿ ಉಪನ್ಯಾಸ ನೀಡಲಿದ್ದಾರೆ. ವಿಜ್ಞಾನೋತ್ಸವಕ್ಕೆ ವೇದಿಕೆ ಕಲ್ಪಿಸಿರುವ ನ್ಯಾಷನಲ್ ಎಜುಕೇಷನ್ ಸೊಸೈಟಿಗೀಗ 100ರ ಸಂಭ್ರಮ, ಅದೇ ರೀತಿ ಡಾ.ಎಚ್. ನರಸಿಂಹಯ್ಯನವರ ಜನ್ಮ ಶತಾಬ್ದಿಯನ್ನೂ ಈ ಶಿಕ್ಷಣ ಸಂಸ್ಥೆ ಈಗಾಗಲೇ ಆರಂಭಿಸಿದೆ. ಹಾಗಾಗಿ ಈ ಸಲದ ವಿಜ್ಞಾನೋತ್ಸವ ಹೆಚ್ಚು ಮಹತ್ವ ಪಡೆದುಕೊಂಡಿದೆ ಎನ್ನುವುದು ನ್ಯಾಷನಲ್ ಎಜುಕೇಷನ್ ಸೊಸೈಟಿಯ ಹಾಲಿ ಅಧ್ಯಕ್ಷ ಡಾ. ಎ.ಎಚ್.ರಾಮರಾವ್ ಅನಿಸಿಕೆ. ಉದ್ಘಾಟನಾ ಉಪನ್ಯಾಸದ ವಸ್ತು ...

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ಕೇಂದ್ರದಿಂದ ಶೀಘ್ರ 3 ಹೊಸ ಕೃಷಿ ಯೋಜನೆ

ನವದೆಹಲಿ: ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಬೆನ್ನಿಗೆ ಕೇಂದ್ರ ಸರ್ಕಾರ ರೈತರಿಗೆ ನೆರವಾಗುವ ಮತ್ತಷ್ಟು ನೂತನ ನೀತಿಗಳನ್ನು ಘೋಷಿಸಲಿದೆ ಎಂದು ಮೂಲಗಳು ತಿಳಿಸಿವೆ. ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣ ತೆಗೆದುಹಾಕುವ ಮೂರು ಹೊಸ ಸಂಗ್ರಹಣೆ ಯೋಜನೆಗಳನ್ನು ಸರ್ಕಾರ ಶೀಘ್ರವೇ ಜಾರಿಗೆ ತರಲಿದೆ ಎನ್ನಲಾಗಿದೆ. ದರ ಕೊರತೆ ಯೋಜನೆ : ಸರ್ಕಾರಿ ಮಂಡಿಗಳಲ್ಲಿ ಬೆಳೆಗಳ ಮಾರುಕಟ್ಟೆ ದರ, ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿದ್ದರೆ ಸರ್ಕಾರದ ಕಡೆಯಿಂದ ರೈತರಿಗೆ ಪರಿಹಾರ ವಿತರಣೆ. ಮಾರುಕಟ್ಟೆ ಖಾತ್ರಿ ಯೋಜನೆ: ಕೇಂದ್ರದ ಅನುಮತಿ ರಹಿತವಾಗಿ ನಿರ್ದಿಷ್ಟ ಬೆಳೆಗಳನ್ನು ನೇರವಾಗಿ ಖರೀದಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ. ಆಯಾ ರಾಜ್ಯಗಳಲ್ಲಿನ ಬೆಳೆಗಳ ಬೇಡಿಕೆಗೆ ತಕ್ಕಂತೆ ಖರೀದಿ ಪ್ರಮಾಣ ನಿಗದಿಪಡಿಸಲು ಸ್ವಾತಂತ್ರ್ಯ. ಖಾಸಗಿ ಸಂಗ್ರಹಣೆ ಯೋಜನೆ: ಖಾಸಗಿ ಖರೀದಿದಾರರಿಗೆ ಕನಿಷ್ಠ ಬೆಂಬಲ ಬೆಲೆಗೆ ಬೆಳೆಗಳನ್ನು ನೇರವಾಗಿ ರೈತರಿಂದ ಖರೀದಿಸಲು ಸರ್ಕಾರದಿಂದ ಪ್ರೋತ್ಸಾಹ.