ನಾಲ್ಕೂವರೆ ವರ್ಷದಲ್ಲಿ ಮೊದಲ ಬಾರಿಗೆ ಆರ್ಬಿಐ ರೆಪೊ ದರದಲ್ಲಿ ಶೇ.0.25 ಏರಿಕೆಯಾಗಿದ್ದು, ಶೀಘ್ರವೇ ಬ್ಯಾಂಕ್ಗಳ ಬಡ್ಡಿದರದಲ್ಲಿಯೂ ಹೆಚ್ಚಳವಾಗಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್ನ ಸಭೆಯ ಬಳಿಕ ಗವರ್ನರ್ ಊರ್ಜಿತ್ ಪಟೇಲ್ ಹಾಲಿ ರೆಪೊ ದರ ಘೋಷಿಸಿದ್ದಾರೆ. 2014ರ ಜನವರಿಯ ನಂತರ ಇದೇ ಮೊದಲ ಬಾರಿಗೆ ರೆಪೊ ದರದಲ್ಲಿ ಆರ್ಬಿಐ ಏರಿಕೆ ಮಾಡುತ್ತಿರುವುದು ವಿಶೇಷ. ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಅವಧಿಯಲ್ಲಿ ರೆಪೊ ದರ ಶೇ. 2 ಇಳಿಕೆ ಮಾಡಿ, ಚುನಾವಣೆ ವರ್ಷದಲ್ಲಿ ಶೇ.0.25 ಏರಿಕೆ ಮಾಡಲಾಗಿದೆ. ಆರ್ಥಿಕ ತಜ್ಞರ ಪ್ರಕಾರ ವರ್ಷಾಂತ್ಯದ ವೇಳೆಗೆ ಮತ್ತೆ ಶೇ.0.25 ಏರಿಕೆಯಾಗುವ ಸಾಧ್ಯತೆಯೂ ಇದೆ. ಹಣದುಬ್ಬರ ಏರಿಕೆ ನಿಯಂತ್ರಣ ಹಾಗೂ ವಿತ್ತೀಯ ಕೊರತೆ ನೀಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಸತತ ಮೂರು ಅವಧಿಗೆ ರೆಪೊ ದರದಲ್ಲಿ ಆರ್ಬಿಐ ಯಾವುದೇ ಬದಲಾವಣೆ ಮಾಡಿರಲಿಲ್ಲ.
ಆರ್ಬಿಐನ ನೂತನ ರೆಪೊ ದರದಂತೆ ಎಲ್ಲ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಿಗೆ ಆರ್ಬಿಐನಿಂದ ಶೇ.6.25ರ ಬಡ್ಡಿದರದಲ್ಲಿ ಅಲ್ಪಾವಧಿ ಸಾಲ ದೊರೆಯಲಿದೆ. ಇದರಿಂದ ವಿಶೇಷವಾಗಿ ಗೃಹ ಸಾಲದ ಮೇಲಿನ ಬಡ್ಡಿ ದರವು ಇನ್ನೊಂದೆರಡು ವಾರದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಕಳೆದ ತಿಂಗಳೇ ಕೆಲ ಬ್ಯಾಂಕುಗಳು ಬಡ್ಡಿ ದರ ಏರಿಸಿವೆ.
ಅಗ್ಗದ ಗೃಹ ಖರೀದಿಗೆ ಸಿಹಿ ಸುದ್ದಿ!
ಅಗ್ಗದ ವಸತಿ ಯೋಜನೆ (ಅಫೋರ್ಡೆಬಲ್ ಹೌಸಿಂಗ್) ಲಾಭ ಪಡೆಯುವ ಫಲಾನುಭವಿಗಳಿಗೆ ನಿಯಮ ಸಡಿಲಗೊಳಿಸಲಾಗಿದೆ. ಆರ್ಬಿಐನ ಹೊಸ ನಿಯಮಗಳ ಪ್ರಕಾರ ಮೆಟ್ರೋ ನಗರದಲ್ಲಿ ಅಗ್ಗದ ವಸತಿ ಯೋಜನೆಗೆ 35 ಲಕ್ಷ ರೂ.ಗಳವರೆಗೂ ಸಾಲ ಪಡೆಯಬಹು ದಾಗಿದೆ. ಉಳಿದ ನಗರಗಳಲ್ಲಿ 25 ಲಕ್ಷ ರೂ.ಗಳವರೆಗೆ ಸಾಲ ದೊರೆಯಲಿದೆ. ಈ ಮೊದಲು ಕ್ರಮವಾಗಿ 28 ಲಕ್ಷ ರೂ. ಹಾಗೂ 20 ಲಕ್ಷ ರೂ. ಮಿತಿ ಇತ್ತು. ಈ ಯೋಜನೆಯಲ್ಲಿ ಮನೆಯ ಒಟ್ಟು ಮೌಲ್ಯ ಕೂಡ ಕ್ರಮವಾಗಿ 40 ಲಕ್ಷ ರೂ. ಹಾಗೂ 30 ಲಕ್ಷ ರೂ. ಮೀರಿರಬಾರದು ಎಂದು ಆರ್ಬಿಐ ಹೊಸ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ