ಡರ್ಬನ್ (ದಕ್ಷಿಣ ಆಫ್ರಿಕ): ಅಮಿತ್ ಮಸುರ್‌ಕರ್ ನಿರ್ದೇಶನದ ‘ನ್ಯೂಟನ್’ ಮತ್ತು ರಿಮಾ ದಾಸ್ ನಿರ್ದೇಶನದ ‘ವಿಲೇಜ್ ರಾಕ್‌ಸ್ಟಾರ್ಸ್’ 3ನೇ ಬ್ರಿಕ್ಸ್ ಚಲನ ಚಿತ್ರೋತ್ಸವದಲ್ಲಿ ಅನ್ಯುನ್ನತ ಗೌರವ ಪಡೆದವು. ದಕ್ಷಿಣ ಆಫ್ರಿಕದ ಡರ್ಬನ್‌ನಲ್ಲಿ ‘ಡರ್ಬನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’ದ ಜೊತೆಜೊತೆಗೆ ‘ಬ್ರಿಕ್ಸ್ ಚಿತ್ರೋತ್ಸವ’ವೂ ನಡೆಯುತ್ತಿದೆ.
ಚಿತ್ರೋತ್ಸವದ ಕೊನೆಯ ದಿನವನ್ನು ‘ಇಂಡಿಯಾ ಕಂಟ್ರಿ ಡೇ’ ಎಂದು ಸಂಭ್ರಮಿಸಲಾಗುತ್ತದೆ. ಸಮಾರೋಪದ ಜೊತೆಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮವೂ ನಡೆಯಲಿದೆ. ರಾಜ್‌ಕುಮಾರ್ ರಾವ್ ಮುಖ್ಯ ಪಾತ್ರದಲ್ಲಿರುವ ‘ನ್ಯೂಟನ್’ ಅತ್ಯುತ್ತಮ ಸಿನಿಮಾ ಗೌರವಕ್ಕೆ ಪಾತ್ರವಾಯಿತು. ‘ವಿಲೇಜ್ ರಾಕ್‌ಸ್ಟಾರ್ಸ್’ನ ಭನಿತಾ ದಾಸ್ ಅತ್ಯುತ್ತಮ ನಟಿ ಗೌರವಕ್ಕೆ ಪಾತ್ರರಾದರು. ತೀರ್ಪುಗಾರರ ಮೆಚ್ಚಿನ ಚಿತ್ರವಾಗಿ ‘ವಿಲೇಜ್ ರಾಕ್‌ಸ್ಟಾರ್ಸ್’ ಹೊರಹೊಮ್ಮಿತು.
ಬ್ರಿಕ್ಸ್ ದೇಶಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ನಿರ್ಮಾಣವಾಗುವ ವಿಶ್ವದರ್ಜೆ ಸಿನಿಮಾಗಳಿಗೆ ವೇದಿಕೆ ಕಲ್ಪಿಸುವುದು ಮತ್ತು ಈ ದೇಶಗಳ ತಂತ್ರಜ್ಞರು, ಕಲಾವಿದರ ನಡುವೆ ಹೊಂದಾಣಿಕೆಗೆ ಕಾರಣವಾಗುವುದು ಈ ಚಿತ್ರೋತ್ಸವದ ಉದ್ದೇಶವಾಗಿದೆ.
ಪ್ರತಿ ದೇಶದಿಂದಲೂ ಎರಡು ಫೀಚರ್ ಫಿಲಂಗಳನ್ನು ಸ್ಪರ್ಧೆಗೆ ಮತ್ತು ಮೂರು ಚಿತ್ರಗಳನ್ನು ಪ್ರದರ್ಶನಕ್ಕಾಗಿ ಪರಿಗಣಿಸಲಾಗುತ್ತದೆ. ಈ ಬಾರಿಯ ಚಿತ್ರೋತ್ಸವದಲ್ಲಿ ಒಟ್ಟು 24 ಚಿತ್ರಗಳನ್ನು ಪ್ರದರ್ಶಿಸಲಾಯಿತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ