ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಷೇರು ಮೌಲ್ಯ ಹೆಚ್ಚಳ ಕಂಡ ಹಿನ್ನೆಲೆಯಲ್ಲಿ ಮುಕೇಶ್ ಅಂಬಾನಿ ವಿಶ್ವದ 11ನೇ ಶ್ರೀಮಂತ ಪಟ್ಟಕ್ಕೆ ಏರಿದ್ದಾರೆ. ಗುರುವಾರದ ಷೇರು ಮಾರುಕಟ್ಟೆ ವಹಿವಾಟಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಮೌಲ್ಯ 1,231 ರೂ. ಮುಟ್ಟಿತು. ಅದರ ಅನ್ವಯ ಮುಕೇಶ್ ಒಟ್ಟಾರೆ ಆಸ್ತಿ ಮೌಲ್ಯ 3.40 ಲಕ್ಷ ಕೋಟಿ ರೂ.ಗೆ
ಏರಿಕೆಯಾಗಿದೆ. ತೈಲ ಸಂಗ್ರಾಹಾಗಾರದಿಂದ ಟೆಲಿಕಾಂ ಕ್ಷೇತ್ರದವರೆಗೆ ವಿಸ್ತರಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಒಟ್ಟಾರೆ ಮೌಲ್ಯ 7.80 ಲಕ್ಷ ಕೋಟಿ ರೂ. ಹೆಚ್ಚಳವಾಗಿದೆ. ಕಳೆದ ತಿಂಗಳಲ್ಲಿ ಮುಕೇಶ್ ವಿಶ್ವದ 14ನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ವಿಶ್ವದ ಅಗ್ರ 20 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ಎಂಬ ಶ್ರೇಯವೂ ಅವರದ್ದಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ