**ಜ್ಞಾನ ಕಾರಂಜಿ**::: 21, 000 ಕೋಟಿ ರೂ.ವೆಚ್ಚದಲ್ಲಿ 111 ನೇವಿ ಹೆಲಿಕಾಪ್ಟರ್ ಖರೀದಿಗೆ ರಕ್ಷಣಾ ಸಚಿವಾಲಯ ಅನುಮೋದನೆ
ನೌಕಾಪಡೆಗೆ ಬಹುಪಯೋಗಿ 111 ಹೆಲಿಕಾಪ್ಟರ್ಗಳನ್ನು 21,000 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸುವ ಮಹತ್ವದ ನಿರ್ಧಾರಕ್ಕೆ ಭಾರತ ರಕ್ಷಣಾ ಸಚಿವಾಲಯ ಅಸ್ತು ಎಂದಿದೆ.
ರಕ್ಷಣಾ ಖರೀದಿ ಮಂಡಳಿ (DAC) ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಒಟ್ಟಾರೆ 46,000 ಕೋಟಿ ರೂಪಾಯಿಯ ಬೇಡಿಕೆಗಳಿಗೆ ಒಪ್ಪಿಗೆ ಕೊಟ್ಟಿದ್ದು ಅದರಲ್ಲಿ 21,000 ಕೋಟಿ ರೂ.ವೆಚ್ಚದಲ್ಲಿ ನೇವಿ ಹೆಲಿಕಾಪ್ಟರ್ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹೆಲಿಕಾಪ್ಟರ್ಗಳು ಶತ್ರುಗಳ ಮೇಲೆ ದಾಳಿ, ಕಣ್ಗಾವಲು ಅಪಾಯದಲ್ಲಿ ಸಿಲುಕಿದವರ ಹುಡುಕಾಟ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ಉಪಯೋಗವಾಗುತ್ತವೆ. ಅದನ್ನು ಹೊರತುಪಡಿಸಿ 3,364 ಕೋಟಿ ರೂ.ವೆಚ್ಚದಲ್ಲಿ 150 ದೇಶೀಯವಾಗಿ ಅ ಮತ್ತು 155 ಎಂಎಂ ಸಾಮರ್ಥ್ಯದ ಫಿರಂಗಿ ಗನ್ ಇರುವ ವಾಹನಗಳನ್ನು ಸೇನೆಗೆ ನೀಡುವ ಬೇಡಿಕೆಯನ್ನೂ ಪುರಸ್ಕರಿಸಿದೆ. ಈ ಫಿರಂಗಿ ಗನ್ ವಾಹನಗಳು ಡಿಆರ್ಡಿಒಗಳಿಂದ ಅಭಿವೃದ್ಧಿ ಹೊಂದಿದವುಗಳಾಗಿವೆ.
24 ನೌಕಾ ಬಹುಪಯೋಗಿ ಹೆಲಿಕಾಪ್ಟರ್ ಖರೀದಿಗೆ ಡಿಎಸಿ ಅನುಮೋದನೆ ನೀಡಿದ್ದು ಇವು ಜಲಾಂತರ್ಗಾಮಿ ಯುದ್ಧವನ್ನು ಎದುರಿಸುವ ಸಾಮರ್ಥ್ಯವನ್ನೂ ಹೊಂದಿವೆ. ಹಾಗೇ ಲಂಬವಾಗಿ ಚಿಮ್ಮುವ 14 ಸಣ್ಣ ಕ್ಷಿಪಣಿಗಳ ಸೇರ್ಪಡೆಗೂ ಸಮ್ಮತಿಸಿದ್ದು ಅದರಲ್ಲಿ 10 ದೇಶೀಯವಾಗಿ ನಿರ್ಮಿತವಾದವು ಎನ್ನಲಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ