ಇಂಧನ ಬಳಕೆ ಹಾಗೂ ಇಂಗಾಲ ಹೊರಸೂಸುವಿಕೆಯಲ್ಲಿ ಬೆಂಗಳೂರು ನಗರ ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಸಾರ್ವಜನಿಕ ರಸ್ತೆ ಸಾರಿಗೆ ಸಂಪರ್ಕದಲ್ಲಿನ ವೈಫಲ್ಯವು ಭವಿಷ್ಯದಲ್ಲಿ ಇನ್ನಷ್ಟು ವಾಯು ಮಾಲಿನ್ಯಕ್ಕೆ ಕಾರಣವಾಗಬಹುದು ಎಂದು ವಿಜ್ಞಾನ ಹಾಗೂ ಪರಿಸರ ಕೇಂದ್ರದ ಸಂಶೋಧನಾ ವರದಿಯಲ್ಲಿ ಎಚ್ಚರಿಸಲಾಗಿದೆ.
ದೆಹಲಿ, ಕೋಲ್ಕತದಲ್ಲಿನ ಸಂಚಾರ ದಟ್ಟಣೆ ಹಾಗೂ ಮಾಲಿನ್ಯ ಪ್ರಮಾಣಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಕಡಿಮೆಯಿದೆ. ಆದರೆ ಬೆಂಗಳೂರಿನಲ್ಲಿ ವಾರ್ಷಿಕ ಶೇ. 15ಕ್ಕೂ ಅಧಿಕ ಸಂಖ್ಯೆಯಲ್ಲಿ ವಾಹನ ನೋಂದಣಿಯಾಗುತ್ತಿದೆ. ಕಳೆದ 5 ವರ್ಷಗಳಿಂದಲೂ ಪ್ರದೂಷಣೆ ಪ್ರಮಾಣ ಅಪಾಯದ ಮಟ್ಟದತ್ತ ಸಾಗುತ್ತಿದೆ ಎಂದು ಹೇಳಿದೆ.
ಸಾರ್ವಜನಿಕ ಸಾರಿಗೆ: ಬೆಂಗಳೂರು ಮಹಾನಗರ ಸಾರಿಗೆ ದೇಶದಲ್ಲೇ ಉತ್ತಮ ಹೆಸರು ಪಡೆದಿದೆ. ಆದರೆ 2009ರಿಂದ ಬಸ್ ಮಾರ್ಗಗಳ ಸಂಖ್ಯೆ ಶೇ. 9 ಕಡಿಮೆಯಾಗಿದೆ. ಲಾಭದಾಯಕವಲ್ಲದ ಮಾರ್ಗಗಳಲ್ಲಿನ ಸಂಚಾರ ರದ್ದುಪಡಿಸಲಾಗುತ್ತಿದೆ. 2253ಕ್ಕೂ ಅಧಿಕ ಇಂತಹ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ವೈಯಕ್ತಿಕ ಅಥವಾ ಖಾಸಗಿ ಸಾರಿಗೆಯತ್ತ ಜನರು ಮುಖಮಾಡಲು ಇದು ಕಾರಣವಾಗಿದೆ. ಈ ಬಗ್ಗೆ ಬೆಂಗಳೂರು ಆಡಳಿತ ಗಮನ ನೀಡಬೇಕಿದೆ ಎಂದು ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.
ಸಾರ್ವಜನಿಕ ಸಾರಿಗೆಗೆ ಸಂಬಂಧಿಸಿ ದೆಹಲಿ ಹಾಗೂ ಕೋಲ್ಕತ್ತದಲ್ಲಿ ನಡೆಸಲಾಗುತ್ತಿರುವ ಉತ್ತಮ ಪ್ರಯತ್ನಗಳನ್ನು ದೇಶದ ಇತರ ನಗರಗಳು ಕೂಡ ಪಾಲಿಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರಿನಲ್ಲಿ ವಾರ್ಷಿಕ ಶೇ. 15ಕ್ಕೂ ಅಧಿಕ ಸಂಖ್ಯೆಯಲ್ಲಿ ವಾಹನ ನೋಂದಣಿ ಐದು ವರ್ಷಗಳಿಂದಲೂ ಪ್ರದೂಷಣೆ ಪ್ರಮಾಣ ಅಪಾಯದ ಮಟ್ಟದತ್ತ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ