ಕೌಲಾಲಂಪುರ: ಏಷ್ಯನ್ ಗೇಮ್ಸ್ಗೆ ಮಲೇಷ್ಯಾ ತಂಡ 447 ಸದಸ್ಯರ ತಂಡವನ್ನು ಪ್ರಕಟಿಸಿದೆ. ಇದರಲ್ಲಿ 81 ವರ್ಷದ ಆಟಗಾರ್ತಿ ಸ್ಥಾನ ಪಡೆದಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದ್ದು, 2018ರ ಏಷ್ಯನ್ ಗೇಮ್ಸ್ನ ಅತ್ಯಂತ ಹಿರಿಯ ಆಟಗಾರ್ತಿ ಎನ್ನುವ ಗೌರವ ಇವರದಾಗಿದೆ.
ಕಾಂಟ್ರಾಕ್ಟ್ ಬ್ರಿಜ್ ಕ್ರೀಡೆಯಲ್ಲಿ 81 ವರ್ಷದ ಲೀ ಹಂಗ್ ಫೆಂಗ್ ಸ್ಪರ್ಧೆ ಮಾಡುತ್ತಿದ್ದಾರೆ. ಕಾರ್ಡ್ ಗೇಮ್ ಆಗಿರುವ ಕಾಂಟ್ರಾಕ್ಟ್ ಬ್ರಿಜ್ ಇದೇ ಮೊದಲ ಬಾರಿಗೆ ಏಷ್ಯಾಡ್ ಸ್ಪರ್ಧೆಯಾಗಿದ್ದು, ಆತಿಥೇಯ ದೇಶದ ಒತ್ತಾಯದಿಂದ ಗೇಮ್ಸ್ಗೆ ಸೇರಿಸಲಾಗಿದೆ. ಇದೇ ತಂಡದಲ್ಲಿ ಇರುವ ಸ್ಕೇಟ್ಬೋರ್ಡರ್ ಇಯಾನ್ ನುರಿಮನ್ ಅಮ್ರಿಗಿಂತ 70 ವರ್ಷ ಹಿರಿಯರಾಗಿದ್ದಾರೆ. ಇಯಾನ್ ನುರಿಮನ್ 11ನೇ ವರ್ಷದಲ್ಲಿಯೇ ಏಷ್ಯಾಡ್ನಲ್ಲಿ ಸ್ಪರ್ಧಿಸಲು ಅಣಿಯಾಗಿದ್ದಾರೆ. ಕೌಲಾಲಂಪುರದಲ್ಲಿರುವ ರಾಯಲ್ ಲೇಕ್ ಕ್ಲಬ್ನಲ್ಲಿ ಬ್ರಿಜ್ ಕ್ಲಾಸ್ಗಳನ್ನು ತೆಗೆದುಕೊಳ್ಳುತ್ತಿದ್ದ, ಲೀ 81ನೇ ವರ್ಷದಲ್ಲಿ ದೇಶವನ್ನು ಪ್ರತಿನಿಧಿಸುವ ಗೌರವ ಸಿಕ್ಕಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಏಷ್ಯಾಡ್ನಲ್ಲಿ ಕಣಕ್ಕಿಳಿದ ಅತ್ಯಂತ ಹಿರಿಯ ಅಥ್ಲೀಟ್ ಎನ್ನುವ ಗೌರವ ಲೀ ಅವರದ್ದಾಗಲಿದೆ. -ಏಜೆನ್ಸೀಸ್

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ