ಜಿನೇವಾ: ವಿಶ್ವಸಂಸ್ಥೆಯ ಏಳನೇ ಮಹಾ ಪ್ರಧಾನ ಕಾರ್ಯದರ್ಶಿ ಹುದ್ದೆ ನಿರ್ವಹಿಸಿದ ಮೊಟ್ಟಮೊದಲ ಆಫ್ರಿಕನ್ ಎಂಬ ಶ್ರೇಯದ ಕೋಫಿ ಅನ್ನಾನ್ (80) ಅಲ್ಪಕಾಲದ ಅನಾರೋಗ್ಯದ ಬಳಿಕ ಶನಿವಾರ ಕೊನೆಯುಸಿರಳೆದರು. ನೊಬೆಲ್ ಶಾಂತಿ ಪುರಸ್ಕೃತ ಘಾನಾ ಮೂಲದ ರಾಜತಾಂತ್ರಿಕ ಅಧಿಕಾರಿಯ ನಿಧನ ವಾರ್ತೆಯನ್ನು ಅವರ ಟ್ವಿಟರ್ ಖಾತೆ ಪ್ರಕಟಿಸಿತ್ತು. ಪತ್ನಿ ನಾನಿ, ಮಕ್ಕಳು ಅಮಾ, ಕೊಜೊ ಹಾಗೂ ನಿನಾ, ಅನ್ನಾನ್ ಅವರ ಕೊನೆಯ ಸಮಯದಲ್ಲಿ ಜತೆಗಿದ್ದರು ಎಂದು ಪ್ರಕಟಣೆ ತಿಳಿಸಿದೆ.
2001ರಲ್ಲಿ ಅನ್ನಾನ್ ಪ್ರಧಾನ ಕಾರ್ಯದರ್ಶಿ ಆಗಿದ್ದಾಗ ಸ್ವತಃ ಅವರಿಗೆ ಮತ್ತು ವಿಶ್ವಸಂಸ್ಥೆಗೆ ನೊಬೆಲ್ ಶಾಂತಿ ದೊರಕಿತ್ತು. ಸಿರಿಯಾ ಹಾಗೂ ಇತರ ಬಂಡುಕೋರರಿಂದ ಪೀಡಿತ ರಾಷ್ಟ್ರಗಳಲ್ಲಿ ಮಾನವೀಯತೆ, ಶಾಂತಿ ಸ್ಥಾಪಿಸಿ ನೆಮ್ಮದಿಯ ಬದುಕು ಕಟ್ಟಿಕೊಡಲು ವಿಶ್ವಸಂಸ್ಥೆ ಮಾಡಿದ ಯತ್ನಕ್ಕೆ ವಿಶ್ವನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಅನ್ನಾನ್ ನಿಧನಕ್ಕೆ ಸಂತಾಪ ಸೂಚಕವಾಗಿ ಸೋಮವಾರದಿಂದ ಏಳು ದಿನಗಳವರೆಗೆ ಶೋಕಾಚರಣೆಯನ್ನು ಘಾನಾ ಅಧ್ಯಕ್ಷ ನಾನಾ ಅಕುಫೊ ಅಡ್ಡೊ ಘೋಷಿಸಿದ್ದಾರೆ. ರಾಷ್ಟ್ರಧ್ವಜಗಳನ್ನು ಅರ್ಧಕ್ಕೆ ಹಾರಿಸುವಂತೆ ಆದೇಶಿಸಿದ್ದಾರೆ.
ನಿವೃತ್ತಿಯಾದ ಮೇಲೂ ಶಾಂತಿಗಾಗಿ ಶ್ರಮ: ವಿಶ್ವಸಂಸ್ಥೆಯ ಜವಾಬ್ದಾರಿಯುತ ಸ್ಥಾನಗಳಿಂದ ಕೆಳಗಿಳಿದ ಮೇಲೂ ಅನ್ನಾನ್ ಜಾಗತಿಕ ಶಾಂತಿ ಸ್ಥಾಪನೆಗಾಗಿ ಹಲವಾರು ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಕೋಫಿ ಅನ್ನಾನ್ ಪ್ರತಿಷ್ಠಾನ, ನೆಲ್ಸನ್ ಮಂಡೇಲಾರಿಂದ ಸ್ಥಾಪಿತ ಚೇರ್ ಆಫ್ ಎಲ್ಡರ್ಸ್ ನೇತೃತ್ವ ವಹಿಸಿ ವಿಶ್ವಾದ್ಯಂತ ಶಾಂತಿ ಮಂತ್ರವನ್ನು ಹರಡುವಲ್ಲಿ ಯತ್ನಿಸಿದರು.
ಒಬ್ಬ ಮಹಾನ್ ಆಫ್ರಿಕನ್ ರಾಜತಂತ್ರಜ್ಞ ಮತ್ತು ಮಾನವತಾವಾದಿಯನ್ನು ಮಾತ್ರ ಜಗತ್ತು ಕಳೆದುಕೊಂಡಿಲ್ಲ. ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಆತ್ಮಸಾಕ್ಷಿಯೇ ಮರೆಯಾಗಿದೆ.
| ನರೇಂದ್ರ ಮೋದಿ, ಪ್ರಧಾನಿ
2 ಬಾರಿ ಮಹಾ ಪ್ರಧಾನ ಕಾರ್ಯದರ್ಶಿ
1997ರ ಜನವರಿ 1 – 2001ರ ಜೂನ್ 27
001ರ ಜೂನ್ 29- 2006ರ ಡಿಸೆಂಬರ್ 31ರವರೆಗೆ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ