*ಸಿಡ್ನಿ:*
ಆಸ್ಟ್ರೇಲಿಯಾದ ನೂತನ ಪ್ರಧಾನಮಂತ್ರಿಯಾಗಿ ಸ್ಕಾಟ್ ಮಾರಿಸನ್ ಆಯ್ಕೆಯಾಗಿದ್ದಾರೆ.
ಶುಕ್ರವಾರ ನಡೆದ ನಾಯಕತ್ವ ನಿರ್ಣಾ ಯಕ ಮತದಾನದಲ್ಲಿ 45 ಮತಗಳನ್ನು ಪಡೆದು ಪ್ರತಿಸ್ಪರ್ಧಿ
ಮಾಜಿ ಸಚಿವ ಪೀಟರ್ ಡುಟ್ಟೊನ್ರನ್ನು ಪರಾಭವಗೊಳಿಸಿದ್ದಾರೆ. ಕಳೆದ 11 ವರ್ಷಗಳಲ್ಲಿ 7ನೇ
ಪ್ರಧಾನಿಯನ್ನು ಆಸ್ಟ್ರೇಲಿಯಾ ಕಾಣುತ್ತಿದೆ.
*ಚುನಾವಣೆಯಿಂದ ಟರ್ನ್ಬುಲ್ ದೂರ:* ಉದಾರವಾದಿ ನೀತಿಗಳಿಂದಾಗಿ ಸ್ವಪಕ್ಷದಿಂದಲೇ ಕಟುಟೀಕೆಗೆ
ಗುರಿಯಾ ಗಿದ್ದ ಪ್ರಧಾನಿ ಮಾಲ್ಕಂ ಟರ್ನ್ಬುಲ್ ವಿರುದ್ಧ ಲಿಬರೆಲ್ ಪಕ್ಷದ ಸಂಸದರು
ಪ್ರತಿಭಟನೆ ನಡೆಸಿದ್ದರು. ಇದರ ನಾಯಕತ್ವ ವಹಿಸಿದ್ದ ಮಾರಿಸನ್, ಟರ್ನ್ಬುಲ್ ರಾಜೀನಾಮೆಗೆ
ಆಗ್ರಹಿಸಿದ್ದರು. ಒಂದು ವಾರ ಮುಂದುವರಿದ ರಾಜಕೀಯ ಅಸ್ಥಿರತೆಯಿಂದಾಗಿ ಮತದಾನ ನಡೆಸಲು
ಸಂಸತ್ತಿನಲ್ಲಿ ತೀರ್ವನಿಸಲಾಗಿತ್ತು. ಟರ್ನ್ಬುಲ್ ಆಪ್ತೆ ಹಾಗೂ ವಿದೇಶಾಂಗ ಸಚಿವೆ ಜೂಲಿ
ಬಿಷಪ್ ಕೂಡ ಪ್ರಧಾನಿ ಹುದ್ದೆಗೆ ಅಭ್ಯರ್ಥಿ ಆಗಿದ್ದರಾದರೂ ಮೊದಲ ಸುತ್ತಿನ ಮತದಾನದಲ್ಲಿಯೇ
ಹಿಂದುಳಿದರು. ರಾಜಕೀಯದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದೇನೆ. ಹಾಗಾಗಿ ಸ್ಪರ್ಧಿಸಲ್ಲ
ಎಂದು ಟರ್ನ್ಬುಲ್ ಘೋಷಿಸಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ