ನವದೆಹಲಿ: ಆತಿಥೇಯ ಇಂಗ್ಲೆಂಡ್ ತಂಡ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿ, ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಗಮನಾರ್ಹವೆಂದರೆ ಈ ಗೆಲುವಿನಲ್ಲಿ ಭಾಗಿಯಾಗಿರುವ ಇಂಗ್ಲೆಂಡ್ ಆಟಗಾರನೊಬ್ಬ ಏನನ್ನೂ ಮಾಡದೇ ಇತಿಹಾಸ ಪುಟ ಸೇರಿದ್ದಾನೆ.
ಹೌದು, ಆಂಗ್ಲ ಪಡೆಯ ಬೌಲರ್ ಆದಿಲ್ ರಶೀದ್ ಅವರು ವಿಶಿಷ್ಟ ದಾಖಲೆಗೆ ಭಾಜನಾಗಿದ್ದಾರೆ. ಟೆಸ್ಟ್ ಪಂದ್ಯವೊಂದರಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಮಾಡದೇ, ಯಾವುದೇ ಕ್ಯಾಚ್ ಹಾಗೂ ರನೌಟ್ ಮಾಡದೇ ಗಮನ ಸೆಳೆದಿದ್ದಾರೆ. 13 ವರ್ಷಗಳಲ್ಲೆ ಆಂಗ್ಲದ ಮೊದಲ ಆಟಗಾರ ಈ ವಿಶಿಷ್ಟ ದಾಖಲೆಗೆ ಪಾತ್ರರಾಗಿದ್ದು, ಒಟ್ಟಾರೆ 14ನೇ ಆಟಗಾರರಾಗಿದ್ದಾರೆ.
30 ವರ್ಷದ ಆದಿಲ್ ರಶೀದ್ ಅವರು ಹನ್ನೊಂದು ಆಟಗಾರರ ತಂಡದಲ್ಲಿ ಸ್ಥಾನ ಪಡೆದಿದ್ದು, ಲಾರ್ಡ್ಸ್ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಏನನ್ನೂ ಮಾಡದೇ ಈಗ ಚರ್ಚೆಗೆ ಗ್ರಾಸವಾಗಿದ್ದಾರೆ.
141 ವರ್ಷದ ಕ್ರಿಕೆಟ್ ಇತಿಹಾಸದಲ್ಲಿ ಪೆರ್ಚಿ ಛಾಪಮನ್, ಬ್ರ್ಯಾನ್ ವ್ಯಾಲೆಂಟೈನ್, ಬಿಲ್ ಜಾನ್ಸ್ಟನ್, ಎ.ಜಿ.ಕೃಪಾಲ್ ಸಿಂಗ್, ನಾರಿ ಕಂಟ್ರ್ಯಾಕ್ಟರ್, ಕ್ರೈಗ್ ಮ್ಯಾಕ್ಡೆರ್ಮೋಟೋ, ಆಸಿಫ್ ಮುಜ್ತಾಬ್, ನೈಲ್ ಮ್ಯಾಕೆಂಜಿ, ಆಸ್ವೆಲ್ ಪ್ರಿನ್ಸ್, ಗೆರಾತ್ ಬ್ಯಾಟಿ, ಜಾಕಸ್ ರೂಡಾಲ್ಫ್ ಮತ್ತು ವೃದ್ಧಿಮಾನ್ ಷಾ ಅವರು ಈ ರೀತಿಯಾದ ವಿಶಿಷ್ಟ ಸಾಧನೆಗೆ ಪಾತ್ರರಾಗಿದ್ದಾರೆ. (ಏಜೆನ್ಸೀಸ್)

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ