ನವದೆಹಲಿ : ಸ್ವಾಯತ್ತ ವಿಶ್ವವಿದ್ಯಾಲಯದ ಮಾನ್ಯತೆ ಬಯಸುವ ಶಿಕ್ಷಣ ಸಂಸ್ಥೆಗಳಿಗೆ ವಿಧಿಸಲಾಗಿದ್ದ ಅರ್ಹತೆ ಮಾನದಂಡಗಳನ್ನು ಸಡಿಲಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಯುಪಿಎ ಅವಧಿ
ಯಲ್ಲಿ ಸ್ವಾಯತ್ತ ಸಂಸ್ಥೆಗಳಿಗೆ ಹೇರಲಾಗಿದ್ದ ನಿಯಮಗಳನ್ನು 2016ರಲ್ಲಿ ಪರಿಷ್ಕರಿಸಿದ್ದು, ಎರಡು ಬಾರಿ ನ್ಯಾಕ್ ಅಥವಾ ಎನ್ಬಿಎ ಸಮಿತಿಯಿಂದ ಮೌಲ್ಯಮಾಪನದಲ್ಲಿ ಶಿಕ್ಷಣ ಸಂಸ್ಥೆ ಅಗ್ರ ಮಾನ್ಯತೆ ಪಡೆದಿರಬೇಕು. ಮತ್ತೆ ಮೂರನೇ ಬಾರಿಯೂ ಮಾನ್ಯತೆ ಕಾಯ್ದುಕೊಳ್ಳಬೇಕು (5 ವರ್ಷದ ಅವಧಿಗೆ). ರಾಷ್ಟ್ರೀಯ ಇನ್ಸ್ಟಿಟ್ಯೂಟ್ ರ‍್ಯಾಂಕಿಂಗ್ ಫ್ರೇಮ್ರ್ಕ್ನಲ್ಲಿ (ಎನ್ಐಆರ್ಎಫ್) ಎರಡು ವರ್ಷಗಳವರೆಗೆ ಅಗ್ರ 100ರಲ್ಲಿ ಸ್ಥಾನ ಪಡೆದಿರಬೇಕು ಎಂಬ ನಿಯಮ ಜಾರಿಗೆ ಬಂತು. ಪ್ರಸ್ತುತ 2016ರಲ್ಲಿನ ನಿಯಮಗಳಲ್ಲಿ ಕೂಡ ತಿದ್ದುಪಡಿ ಮಾಡಲಾಗುತ್ತಿದೆ. ಈಗ ಕರಡು ಪ್ರತಿಯಲ್ಲಿ, ಶಿಕ್ಷಣ ಸಂಸ್ಥೆಯ ಒಟ್ಟು ಕೋರ್ಸ್ಗಳ ಪೈಕಿ ಶೇ.66 ಕೋರ್ಸ್ಗಳಿಗೆ ನ್ಯಾಕ್ ಮಾನ್ಯತೆ ಇದ್ದರೆ ಸಾಕು ( ಎರಡು ಬಾರಿ ಮೌಲ್ಯಮಾಪನದಲ್ಲಿ). ಮತ್ತು ಎನ್ಐಆರ್ಎಫ್ನ ಅಗ್ರ 200 ರ್ಯಾಂಕ್ ಪಡೆದಿದ್ದರೆ ಸಾಕು ಎಂಬ ಅಂಶವಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ