ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಮೆಡಲ್ ಗೆದ್ದ ಡಾಗಿ

‘ನಾಯಿಗೂ ಒಂದು ಕಾಲ ಬರುತ್ತೆ’ ಅನ್ನೋ ಮಾತಿಗೆ ಪುಷ್ಟಿ ನೀಡೋ ಘಟನೆ ಆಸ್ಟ್ರೇಲಿಯಾದಿಂದ ವರದಿಯಾಗಿದೆ.
ಅಲ್ಲಿನ ಕಾಲ್​ಗೂರ್ಲಿ ಪಟ್ಟಣದಲ್ಲಿ ಪುರುಷರ ‘ಹಾಫ್-ಮ್ಯಾರಥಾನ್’ (ಅಂದರೆ 21 ಕಿ.ಮೀ. ಅಂತರದ ಓಟ) ಪಂದ್ಯವನ್ನು ಆಯೋಜಿಸಲಾಗಿತ್ತು. ಓಟ ಶುರುವಾಗುವುದಕ್ಕೂ ಮುನ್ನ ಆ ತಾಣದಲ್ಲಿ ಸುಮ್ಮನೆ ಸುಳಿದಾಡಿಕೊಂಡಿದ್ದ ತನ್ನ ಚೆಲ್ಲಾಟಗಳಿಂದ ನೋಡುಗರ ಮನರಂಜಿಸುತ್ತಿದ್ದ ನಾಯಿಯೊಂದು, ಪಂದ್ಯ ಶುರುವಾಗುತ್ತಿದ್ದಂತೆ ಉಳಿದ ಸ್ಪರ್ಧಿಗಳ ಜತೆಜತೆಗೆ ಓಟಕ್ಕೆ ಶುರುವಿಟ್ಟುಕೊಂಡಿತಂತೆ. ಕೆಲ ಕಾಲದ ನಂತರ ಸುಸ್ತಾಗಿ ಸೈಡಿಗೆ ಬರಬಹುದು ಎಂದು ಭಾವಿಸಿದ್ದವರಿಗೆ ಅಚ್ಚರಿಯಾಗುವಂತೆ ಹೆಚ್ಚೆಚ್ಚು ರಭಸ ಮತ್ತು ಉತ್ಸಾಹದೊಂದಿಗೆ ಅದು ಹೆಜ್ಜೆಹಾಕಲು ಶುರುಮಾಡಿತಂತೆ.
ಓಡುತ್ತ ಓಡುತ್ತ ಅದಕ್ಕೇನು ಉಮೇದು ಬಂತೋ ಗೊತ್ತಿಲ್ಲ, ಮಿಕ್ಕ ಸ್ಪರ್ಧಿಗಳ ಸಮಸಮಕ್ಕೂ ಹೆಜ್ಜೆಹಾಕಿ ಎರಡೂವರೆ ಗಂಟೆಯಲ್ಲಿ ಸ್ಪರ್ಧೆಯನ್ನು ಪೂರ್ಣಗೊಳಿಸಿತಂತೆ. ತನ್ನದೇ ಆದ ರೀತಿಯಲ್ಲಿ ಜನಮನ ಗೆದ್ದಿದ್ದರ ಜತೆಗೆ, ಮ್ಯಾರಥಾನ್ ಓಟವನ್ನೂ ಸಂಪೂರ್ಣಗೊಳಿಸಿದ್ದಕ್ಕಾಗಿ ಅದಕ್ಕೂ ಒಂದು ಮೆಡಲ್ ಕೊಟ್ಟು ಗೌರವಿಸಲಾಯಿತು ಎಂಬುದು ಲಭ್ಯಸುದ್ದಿ. ಹೊತ್ತುಗೊತ್ತಿಲ್ಲದೆ ಅಲೆಯುವವರನ್ನು ಕಂಡಾಗಲೆಲ್ಲ, ‘ನಾಯಿಗೆ ಹೊತ್ತಿಲ್ಲ, ನಿಲ್ಲೋಕೆ ನೆರಳಿಲ್ಲ’ ಎಂದು ಮಾತಿನಲ್ಲೇ ಚಾಟಿ ಬೀಸುವ ಪರಿಪಾಠ ಈಗಲೂ ಕೆಲ ಹಳ್ಳಿಗಳಲ್ಲಿದೆ. ಆದರೆ, ಈ ನಾಯಿ ನಿರಂತರ ಅಲೆದಾಡುತ್ತ ತನ್ನ ಹಾವಭಾವಗಳಿಂದ ಜನಮನ ರಂಜಿಸಿದೆ. ಜತೆಗೆ ಓಟವನ್ನೂ ಸಾರ್ಥಕಗೊಳಿಸಿಕೊಂಡಿದ್ದು ಬೇರೆಯದೇ ಅರ್ಥವನ್ನು ಹೊಮ್ಮಿಸುತ್ತದೆಯಲ್ಲವೇ?
ಪಿಜ್ಜಾಬಾಯ್ ಪಿಯಾನೊ ನುಡಿಸಿದಾಗ..!
‘ವಿದ್ಯೆಯೆಂಬುದು ಸಾಧಕರ ಸೊತ್ತೇ ಹೊರತು ಸೋಮಾರಿಗಳ ಸೊತ್ತಲ್ಲ’ ಎಂಬುದೊಂದು ಜಾಣನುಡಿ. ಸಂಗೀತ, ಸಾಹಿತ್ಯ ಹೀಗೆ ಅಭಿರುಚಿ ಯಾವುದರಲ್ಲೇ ಇರಲಿ, ಪಟ್ಟುಹಿಡಿದು ಅಭ್ಯಾಸ ಮಾಡಿದರೆ ಸರಸ್ವತಿ ಒಲಿಯುತ್ತಾಳೆ, ಹೊಟ್ಟೆಪಾಡಿಗಾಗಿ ತೊಡಗಿಸಿಕೊಂಡ ಕಾರ್ಯಕ್ಷೇತ್ರ ಇದಕ್ಕೆ ಅಡ್ಡಿಯಾಗದು ಎನ್ನುತ್ತಾರೆ ಅನುಭವಿಗಳು. ಡೆಟ್ರಾಯಿಟ್​ನ ಕುಟುಂಬವೊಂದರ ಸದಸ್ಯರು ಪಿಜ್ಜಾಕ್ಕೆ ಆರ್ಡರ್ ಮಾಡಿ ಕಾಯುತ್ತ ಕೂತರು. ನೋಡನೋಡುತ್ತಿದ್ದಂತೆಯೇ ನಗೆತುಳುಕಿಸುತ್ತ ಡೆಲಿವರಿ ಬಾಯ್ ಬಂದೇಬಿಟ್ಟನಲ್ಲ… ಮನೆಯವರಿಗೆ ಪಿಜ್ಜಾ ಹಸ್ತಾಂತರಿಸಿದ ಆತ, ಮನೆಯೊಳಗೆಲ್ಲ ಇಣುಕಿದಾಗ ಮೂಲೆಯಲ್ಲಿಟ್ಟಿದ್ದ ಪಿಯಾನೊ ಕಂಡಿತು. ‘ವಾವ್! ಅದ್ಭುತ ಪಿಯಾನೊ, ಒಮ್ಮೆ ನೋಡಲೇ?’ ಎಂದು ಮನೆಯವರನ್ನು ಕೇಳಿದ.
ಅವನ ವಿನಯ- ವಿಧೇಯತೆ ಅವರಿಗೆ ಮೆಚ್ಚುಗೆಯಾಯಿತೇನೋ… ಒಪ್ಪಿದರು. ನಿಧಾನಕ್ಕೆ ಹೆಜ್ಜೆಯಿಡುತ್ತ ಸಾಗಿದ ಆ ಹುಡುಗ, ಅದರ ಮುಂದೆ ಆಸೀನನಾಗಿ ರೀಡ್ಸ್ ಮೇಲೆ ಕೈಯಾಡಿಸಲು ಶುರುಮಾಡಿದ. ಮನೆಯವರಿಗೆಲ್ಲ ಕ್ಷಣಕಾಲ ತಾವೆಲ್ಲಿದ್ದೀವೆಂಬುದೇ ಮರೆತುಹೋಗುವಷ್ಟರ ಮಟ್ಟಿಗೆ, ಸುಪ್ರಸಿದ್ಧ ಸಂಗೀತ ಸಂಯೋಜಕ ಮತ್ತು ಪಿಯಾನೊ ವಾದಕ ಬೆಥೋವೆನ್​ನ ‘ಮೂನ್​ಲೈಟ್’ ಸಂಗೀತಕೃತಿಯನ್ನು ನುಡಿಸಲಾರಂಭಿಸಿದ! ಪಿಜ್ಜಾ ಸವಿಯುವ ತವಕದಲ್ಲಿದ್ದವರು ಅದರ ಜತೆಜತೆಗೆ ಸಂಗೀತದ ರಸಸ್ವಾದನೆಯಲ್ಲಿ ಮೈಮರೆತರು. ವಿಡಿಯೋ ಗೇಮ್ ಆಡಿಕೊಂಡಿದ್ದ ಮಕ್ಕಳೂ ಅದನ್ನು ಅಲ್ಲಲ್ಲಿಗೇ ಬಿಟ್ಟು ಗಂಧರ್ವಲೋಕದ ಪಯಣಿಗರಾದರು. ಸಂಗೀತಗಂಗೆಯಲ್ಲಿ ತೇಲುತ್ತಿದ್ದ ಆ ಹುಡುಗನನ್ನು ಕಾರ್ಯಪ್ರಜ್ಞೆ ಎಚ್ಚರಿಸಿತು. ಮೈಕೊಡವಿಕೊಂಡು ಎದ್ದ ಆತ, ಹೆಗಲುಚೀಲದೊಂದಿಗೆ ಹೊರಗೆ ಹೆಜ್ಜೆಹಾಕಿದ. ಬೇರಾವುದರಲ್ಲೋ ಪರಿಣತಿ ಇದ್ದರೂ ಹೊಟ್ಟೆಪಾಡಿಗೆಂದು ಮತ್ತೆಲ್ಲೋ ಸಿಲುಕಿರುವ ಇಂಥವರು ಬಹಳಷ್ಟು ಇರಬಹುದಲ್ಲವೇ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...