ನವದೆಹಲಿ: ಪ್ರಯಾಣಿಕರ ವಾಹನಕ್ಕೆ ಬಳಸುವ ಪೆಟ್ರೋಲ್ನಲ್ಲಿ ಶೇ. 15 ಮೆಥನಾಲ್ (ಜೈವಿಕ ಇಂಧನದ ಉಪ ಉತ್ಪನ್ನ) ಮಿಶ್ರಣ ಮಾಡುವುದನ್ನು ಕಡ್ಡಾಯಗೊಳಿಸುವ ಕುರಿತು ಕ್ಯಾಬಿನೆಟ್ ನೋಟ್ ಸಿದ್ಧಪಡಿಸಲು ನೀತಿ ಆಯೋಗ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಸಂಪುಟ ಈ ಪ್ರಸ್ತಾವನೆಯನ್ನು ಒಪ್ಪಿದಲ್ಲಿ, ಪೆಟ್ರೋಲ್ ಬೆಲೆಯಲ್ಲಿ ಶೇ. 10 ಇಳಿಕೆಯಾಗುವ ಸಾಧ್ಯತೆಯಿದೆ. ಜತೆಗೆ ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ತೈಲ ಪ್ರಮಾಣದಲ್ಲೂ ಕಡಿತ ಮಾಡಬಹುದಾಗಿದೆ. ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಇತ್ತೀಚೆಗೆ ಸಭೆ ನಡೆಸಿದ್ದು, ಸಂಪುಟ ಕಾರ್ಯದರ್ಶಿ ಪಿ.ಕೆ ಸಿನ್ಹಾ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಮೆಥನಾಲ್ ಇಕಾನಮಿ ಕುರಿತು ನೀತಿ ಆಯೋಗ ಈಗಾಗಲೇ ಮಾರ್ಗಸೂಚಿ ಸಿದ್ಧಪಡಿಸಿದೆ ಎನ್ನಲಾಗಿದೆ. ಪ್ರಸ್ತುತ ಭಾರತದಲ್ಲಿ ಶೇ. 10 ಎಥನಾಲ್ ಮಿಶ್ರಿತ ಪೆಟ್ರೋಲ್ನ್ನು ವಾಹನಗಳಲ್ಲಿ ಬಳಸಲಾಗುತ್ತಿದೆ. ಈಗ ಪ್ರತಿ ಲೀಟರ್ ಎಥನಾಲ್ಗೆ 42 ರೂ. ವೆಚ್ಚವಾಗುತ್ತಿದೆ. ಮೆಥೆನಾಲ್ಗೆ ಪ್ರತಿ ಲೀಟರ್ಗೆ
20 ರೂ. ವೆಚ್ಚವಾಗುತ್ತದೆ. ಶೇ. 15 ಮೆಥೆನಾಲ್ ಮಿಶ್ರಣ ಕಡ್ಡಾಯಗೊಳಿಸಿದರೆ, ಪೆಟ್ರೋಲ್ ಬೆಲೆಯಲ್ಲಿ ಶೇ. 10 ಇಳಿಕೆಯಾಗುವ ಸಾಧ್ಯತೆಯಿದೆ. ಎಲ್ಲ ವಾಹನಗಳಲ್ಲಿ ಬಳಸುವ ಇಂಧನಗಳಲ್ಲಿ ಶೇ. 15 ಮೆಥನಾಲ್ ಮಿಶ್ರಣ ಕಡ್ಡಾಯ ಮಾಡಿದರೆ 2030ರ ವೇಳೆಗೆ ವಿದೇಶದಿಂದ ಕಚ್ಚಾತೈಲ ಆಮದಿನಲ್ಲಿ 6.8 ಲಕ್ಷ ಕೋಟಿ ರೂ. ಉಳಿತಾಯ ಮಾಡಬಹುದು ಎಂದು ಅಂದಾಜಿಸಲಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ