ದಿನಕ್ಕೆ ಮೂರು ಲೀಟರ್ ನೀಡು ಕುಡಿದರೆ ಆರೋಗ್ಯದಿಂದ ಇರಬಹುದು. ಹಾಗಾಗಿ ಹೊರಗೆ ಹೋಗುವಾಗ, ಕೆಲಸಕ್ಕೆ ಹೋಗುವಾಗ ಒಂದು ಬಾಟಲಿ ಕಾಯಂ ಇರಲೇ ಬೇಕು. ಅಲ್ಲಿಇಲ್ಲಿ ನೀರು ಕುಡಿದರೆ ಮತ್ತೆ ಆರೋಗ್ಯ ಕೆಡಬಹುದು ಎಂದುಕೊಳ್ಳುತ್ತೇವೆ. ಆದರೆ ಬಾಟಲಿಗಳಿಂದ ಕುಡಿಯುವ ನೀರಿನಿಂದಲೂ ರೋಗ ಬರಬಹುದು.
ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿದರೆ ಆರೋಗ್ಯಕ್ಕೆ ತೊಂದರೆ ಎಂಬುದು ತಿಳಿದಿದೆ. ಆದರೆ ಸ್ಟೀಲ್, ಗಾಜಿನ ಬಾಟಲಿಗಳಲ್ಲಿ ಸಹ ರೋಗಕಾರಕ ಅಂಶಗಳು ಸೇರುತ್ತವೆ.
ಹೆಚ್ಚಿನ ಜನರು ನೀರಿನ ಬಾಟಲಿಯನ್ನು ದಿನವೂ ತೊಳೆಯುವುದಿಲ್ಲ. ಖಾಲಿಯಾದಂತೆ ತುಂಬಿಸಿಕೊಂಡು ಕುಡಿಯುತ್ತಾರೆ. ಇನ್ನೂ ಕೆಲವರಂತೂ ಸುಮ್ಮನೆ ನೀರು ಹಾಕಿ ಕುಲುಕಿ ಚೆಲ್ಲಿ ಮತ್ತೆ ಕುಡಿಯುವ ನೀರು ತುಂಬಿಸಿಕೊಳ್ಳುತ್ತಾರೆ. ಆದರೆ ಈ ಕ್ರಮ ಕಾಯಿಲೆಯನ್ನು ತರಬಹುದು.
ನೀರಿನ ಬಾಟಲಿಗಳು ಯಾವಾಗಲೂ ಆರ್ಧ್ರವಾಗಿರುವುದರಿಂದ ಬ್ಯಾಕ್ಟೀರಿಯಾಗಳು ಹುಲುಸಾಗಿ ಬೆಳೆಯುತ್ತವೆ. ಈ ಬ್ಯಾಕ್ಟೀರಿಯಾಗಳು ಅತಿಸಾರ, ವಾಂತಿಗೆ ಕಾರಣವಾಗುತ್ತವೆ. ಇದರಲ್ಲಿ ಬೆಳೆಯುವ ಇ ಕೋಲಿಯಂಥ ಬ್ಯಾಕ್ಟೀರಿಯಾಗಳು ಕರುಳಿನ ಉರಿಯೂತ ಉಂಟುಮಾಡುವುದಲ್ಲದೆ, ಫುಡ್ ಪಾಯ್ಸನಿಂಗ್ ಆಗಬಹುದು.
ಹಾಗಾಗಿ ಬಳಸುತ್ತಿರುವ ಬಾಟಲಿಯನ್ನು ಪ್ರತಿನಿತ್ಯ ಶುದ್ಧವಾಗಿ ತೊಳೆಯಬೇಕು. ಬಾಟಲಿ ಸ್ವಚ್ಛಗೊಳಿಸಲು ಅನುಕೂಲವಾಗುವಂತೆ ಬ್ರಷ್ಗಳು ಸಿಗುತ್ತವೆ. ಅದರಿಂದಲೇ ಶುದ್ಧಗೊಳಿಸಿ. ಅದರಲ್ಲೂ ಬಿಸಿನೀರು, ಡಿಶ್ ವಾಶ್ ಲಿಕ್ವಿಡ್ಗಳಿಂದ ತೊಳೆಯಬೇಕು. ಬಾಟಲಿಯ ಮುಚ್ಚಲಗಳನ್ನೂ ಸರಿಯಾಗಿ ಕ್ಲೀನ್ ಮಾಡಲೇಬೇಕು. ವಿನಗರ್ ಕೂಡ ಬಳಸಬಹುದು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ