ಮಾಸ್ಕೋ: ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಸೈನಿಕರು ಒಟ್ಟಾಗಿ ಭಯೋತ್ಪಾದನಾ
ನಿಗ್ರಹ ಮಿಲಿಟರಿ ಡ್ರಿಲ್ನಲ್ಲಿ ಭಾಗವಹಿಸಿದ್ದಾರೆ.
ರಷ್ಯಾದ ಚೆಬರುಕುಲ್ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ) ಆಯೋಜಿಸಿರುವ
ಭಯೋತ್ಪಾದನೆ ವಿರೋಧಿ ಜಂಟಿ ಮಿಲಿಟರಿ ಡ್ರಿಲ್ನಲ್ಲಿ ಭಾರತ, ಪಾಕಿಸ್ತಾನ, ರಷ್ಯಾ, ಚೀನಾ,
ಕಜಕಿಸ್ತಾನ, ತಜಕಿಸ್ತಾನ, ಕಿರ್ಗಿಸ್ತಾನದ ಸುಮಾರು 3,000 ಸೈನಿಕರು ಭಾಗವಹಿಸಿದ್ದಾರೆ.
ಆಗಸ್ಟ್ 22 ರಂದು ಪ್ರಾರಂಭವಾಗಿರುವ ಮಿಲಿಟರಿ ಡ್ರಿಲ್ ಆಗಸ್ಟ್ 29ರ ವರೆಗೆ ನಡೆಯಲಿದೆ.
ಡ್ರಿಲ್ನಲ್ಲಿ ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಯ 200 ಯೋಧರು ಭಾಗವಹಿಸಿದ್ದಾರೆ.
ಶಾಂಘೈ ಸಹಕಾರ ಸಂಘಟನೆಯ ಸದಸ್ಯತ್ವ ಪಡೆದ ನಂತರ ಭಾರತ ಇದೇ ಮೊದಲ ಬಾರಿಗೆ ಜಂಟಿ ಸೇನಾ
ಡ್ರಿಲ್ನಲ್ಲಿ ಭಾಗವಹಿಸಿದೆ.
ಭಾರತೀಯ ಯೋಧರು ಶೂಟಿಂಗ್, ಹೆಲಿಕಾಪ್ಟರ್ ಆಧರಿತ ಕಾರ್ಯಾಚರಣೆಗಳು, ಮನೆಯೊಳಗೆ ಅಡಗಿರುವ
ಭಯೋತ್ಪಾದಕರನ್ನು ಹೊಡೆದುರುಳಿಸುವ ಕಾರ್ಯಾಚರಣೆ, ಯುದ್ಧತಂತ್ರದ ಕಾರ್ಯಾಚರಣೆಗಳು ಸೇರಿದಂತೆ
ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳ ಕುರಿತು ತರಬೇತಿ ಪಡೆಯಲಿದ್ದಾರೆ ಎಂದು ರಕ್ಷಣಾ
ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ