ನಾನ್ಜಿಂಗ್ (ಚೀನಾ): ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಸ್ಪೇನ್ನ ಕರೊಲಿನಾ ಮರಿನ್ ವಿರುದ್ಧ ನೇರ ಸೆಟ್ಗಳಲ್ಲಿ ಸೋಲನುಭವಿಸಿದ ಭಾರತದ ಪಿ.ವಿ.ಸಿಂಧು ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾರೆ.
ಕ್ಯಾರೋಲಿನಾ ಮರಿನ್ ವಿರುದ್ಧ 21- 19, 21-10ರ ನೇರ ಸೆಟ್ಗಳಿಂದ ಸೋತು ಎರಡನೇ ಬಾರಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ನಿನ್ನೆ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಜಪಾನ್ನ ಯಮಗುಚಿ ವಿರುದ್ಧ ಸಿಂಧು ಭರ್ಜರಿ ಜಯ ದಾಖಲಿಸಿದ್ದರು.
ಕಳೆದ ರಿಯೋ ಒಲಂಪಿಕ್ಸ್ ಫೈನಲ್ ಪಂದ್ಯದಲ್ಲಿ ಇದೇ ಕ್ಯಾರೋಲಿನಾ ಮರಿನ್ ವಿರುದ್ಧ ಸೋಲು ಕಂಡಿದ್ದರು. ಹಾಗಾಗಿ ಈ ಬಾರಿಯ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ರಿಯೋ ಫೈನಲ್ ಫಲಿತಾಂಶವೇ ಮರುಕಳಿಸಿದಂತಾಗಿದೆ. (ಏಜೆನ್ಸೀಸ್)

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ