ನವದೆಹಲಿ: ಚಾಂಪಿಯನ್ಸ್ ಟ್ರೋಫಿಯಲ್ಲಿ ರನ್ನರ್ಅಪ್ ಸ್ಥಾನ ಪಡೆದ ಸಾಧನೆಯಿಂದ ಭಾರತದ ಪುರುಷರ ಹಾಕಿ ತಂಡ ಎಫ್ಐಎಚ್ ವಿಶ್ವ ರ್ಯಾಂಕಿಂಗ್ನಲ್ಲಿ ಒಂದು ಸ್ಥಾನ ಪ್ರಗತಿ ಸಾಧಿಸಿ 5ನೇ ಸ್ಥಾನಕ್ಕೇರಿದೆ. ಭಾರತದ ಮಹಿಳಾ ತಂಡ ವಿಶ್ವಕಪ್ ಟೂರ್ನಿಯಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ ಸಾಧನೆಯಿಂದ ರ್ಯಾಂಕಿಂಗ್ನಲ್ಲಿ ಒಂದು ಸ್ಥಾನ ಬಡ್ತಿ ಪಡೆದು 9ನೇ ಸ್ಥಾನಕ್ಕೇರಿದೆ.
ಕಳೆದ ತಿಂಗಳು ನೆದರ್ಲೆಂಡ್ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಭಾರತ ಪೆನಾಲ್ಟಿ ಶೂಟೌಟ್ನಲ್ಲಿ ಆಸ್ಟ್ರೇಲಿಯಾಕ್ಕೆ ಮಣಿದಿತ್ತು. ನಿಗದಿತ ಸಮಯದಲ್ಲಿ ಭಾರತ 1-1ರಿಂದ ಸಮಬಲ ಸಾಧಿಸಿತ್ತು. ಇದರಿಂದ ಭಾರತದ ಒಟ್ಟು ಅಂಕ ಗಳಿಕೆ 1484ಕ್ಕೆ ಏರಿದ್ದು, 2012ರ ಒಲಿಂಪಿಕ್ ಚಾಂಪಿಯನ್ ಜರ್ಮನಿ, ಇಂಗ್ಲೆಂಡ್ ಮತ್ತು ಸ್ಪೇನ್ಗಿಂತ ಮೇಲಿನ ಸ್ಥಾನದಲ್ಲಿದೆ. ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ (1906 ಅಂಕ) ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದರೆ, ಒಲಿಂಪಿಕ್ ಚಾಂಪಿಯನ್ ಅರ್ಜೆಂಟೀನಾ (1883), ಬೆಲ್ಜಿಯಂ (1709) ಮತ್ತು ನೆದರ್ಲೆಂಡ್ (1654) ನಂತರದಲ್ಲಿವೆ. ಭಾರತದ ನಂತರ ಮಲೇಷ್ಯಾ (12ನೇ ಸ್ಥಾನ) ಏಷ್ಯಾದ 2ನೇ ಅತ್ಯುತ್ತಮ ತಂಡವೆನಿಸಿದೆ. ಪಾಕಿಸ್ತಾನ, ಕೊರಿಯಾ ನಂತರದಲ್ಲಿವೆ.
ಮಹಿಳೆಯರಿಗೂ ಏಷ್ಯಾದ ನಂ. 1 ಪಟ್ಟ
ಭಾರತದ ಮಹಿಳಾ ಹಾಕಿ ತಂಡವೂ ಈಗ ಏಷ್ಯಾದ ನಂ. 1 ಸ್ಥಾನ ಸಂಪಾದಿಸಿದೆ. ವಿಶ್ವಕಪ್ ಕ್ವಾರ್ಟರ್ಫೈನಲ್ನ ಪೆನಾಲ್ಟಿ ಶೂಟೌಟ್ನಲ್ಲಿ ಐರ್ಲೆಂಡ್ ವಿರುದ್ಧ ರೋಚಕ ಸೋಲು ಕಂಡ ಭಾರತ ಟೂರ್ನಿಯಲ್ಲಿ ಏಷ್ಯಾದ ಅತ್ಯುತ್ತಮ ತಂಡವೆನಿಸಿತ್ತು. ಇದರಿಂದ ಭಾರತ 9ನೇ ಸ್ಥಾನಕ್ಕೇರಿದ್ದರೆ, ಕೊರಿಯಾ 10ನೇ ಸ್ಥಾನಕ್ಕಿಳಿದಿದೆ. ಚೀನಾ 11 ಮತ್ತು ಜಪಾನ್ 14ನೇ ಸ್ಥಾನದಲ್ಲಿದೆ. ವಿಶ್ವ ಚಾಂಪಿಯನ್ ನೆದರ್ಲೆಂಡ್ ನಂ. 1 ತಂಡವಾಗಿದ್ದರೆ, ಇಂಗ್ಲೆಂಡ್, ಆಸ್ಟ್ರೇಲಿಯಾ, ಅರ್ಜೆಂಟೀನಾ, ಜರ್ಮನಿ ನಂತರದಲ್ಲಿವೆ. ವಿಶ್ವಕಪ್ ಫೈನಲ್ಗೇರಿದ್ದ ಐರ್ಲೆಂಡ್ ತಂಡ 8 ಸ್ಥಾನ ಬಡ್ತಿಯೊಂದಿಗೆ 8ನೇ ಸ್ಥಾನಕ್ಕೇರಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ