ನವದೆಹಲಿ: ಸಾವಿರಾರು ಕೋಟಿ ರೂ.ಗಳ ಆರ್ಥಿಕ ಅಪರಾಧ ಎಸಗಿ, ಕಾನೂನು ಕ್ರಮಗಳಿಂದ ಪಾರಾಗಲು ವಿದೇಶದಲ್ಲಿ ನೆಲೆಸುವ ಅಪರಾಧಿಗಳಿಗೆ ಕಡಿವಾಣ ಹಾಕುವ ಫಿಜಿಟಿವ್ ಎಕನಾಮಿಕ್ ಅಫೆಂಡರ್ಸ್ ಕಾಯ್ದೆ 2018ಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. 100 ಕೋಟಿ ರೂ. ಅಥವಾ ಅಧಿಕ ಮೊತ್ತದ ವ್ಯವಹಾರದಲ್ಲಿ ಆರೋಪಿ/ಅಪರಾಧಿಯಾಗಿದ್ದು, ಆತನ ವಿರುದ್ಧ ಹಲವು ಬಾರಿ ಬಂಧನ ವಾರಂಟ್ ಜಾರಿಯಾಗಿದ್ದರೂ, ಕಾನೂನು ಕ್ರಮ ತಪ್ಪಿಸಿ ಕೊಳ್ಳಲು ವಿದೇಶದಲ್ಲಿ ನೆಲೆಸಿರುವವರು ಫುಜಿಟಿವ್ ಎಕನಾಮಿಕ್ ಅಫೆಂಡರ್ಸ್ (ತಲೆಮರೆಸಿಕೊಂಡ ಆರ್ಥಿಕ ಅಪರಾಧಿಗಳು) ಎಂದು ಕರೆಸಿಕೊಳ್ಳುತ್ತಾರೆ. ಉದ್ಯಮಿ ವಿಜಯ್ ಮಲ್ಯ, ನೀರವ್ ಮೋದಿಯನ್ನು ಈ ಪಟ್ಟಿಗೆ ಸೇರಿಸಲಾಗಿದೆ. ಕಳೆದ ಜುಲೈನಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಿಧೇಯಕ ಅನುಮೋದನೆ ಪಡೆದಿತ್ತು.
ಕಾಯ್ದೆಯಲ್ಲಿನ ಪ್ರಮುಖ ಅಂಶ: –
# ಆರೋಪಿಯನ್ನು ಫಿಜಿಟಿವ್ ಎಕನಾಮಿಕ್ ಅಫೆಂಡರ್ ಎಂದು ಘೋಷಿಸಲು ವಿಶೇಷ ಕೋರ್ಟ್ ಸ್ಥಾಪನೆ.
# ತಲೆಮರೆಸಿಕೊಂಡ ಆರ್ಥಿಕ ಅಪರಾಧಿಗಳ ಆಸ್ತಿಗಳ ಮುಟ್ಟುಗೋಲು.
# ಆಸ್ತಿಗಳ ನಿರ್ವಹಣೆಗೆ ಆಡಳಿತಾಧಿಕಾರಿ ನೇಮಕ, ಆಸ್ತಿಗಳ ಮಾರಾಟಕ್ಕೂ ಆತನಿಗೆ ಅಧಿಕಾರ.
# ಅಪರಾಧಿಯಿಂದ ಪೌರತ್ವ ಹಕ್ಕುಗಳನ್ನು ಕಿತ್ತುಕೊಳ್ಳುವುದು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ