ನ್ಯೂಯಾರ್ಕ್: ಕಾಫಿ ಸುವಾಸನೆಯನ್ನು ಆಘ್ರಾಣಿಸಿದರೆ ಬುದ್ಧಿಶಕ್ತಿ ಹೆಚ್ಚಾಗುತ್ತದೆ. ವಿಶ್ಲೇಷಣಾತ್ಮಕ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ.
ಸಂಶೋಧಕರ ಪ್ರಕಾರ ಕಾಫಿಯ ಪರಿಮಳ ಆಘ್ರಾಣಿಸುವುದು ಕಾಫಿ ಕುಡಿದಷ್ಟೇ ಪರಿಣಾಮಕಾರಿಯಂತೆ. ಅದರಲ್ಲಿ ಕೆಫೇನ್ ಇರದೆ ಇರುವುದರಿಂದ ದೇಹಕ್ಕೆ ಏನೂ ತೊಂದರೆಯಾಗದು. ಕಾಫಿ ಪರಿಮಳ ಹೆಚ್ಚಾಗಿ ಸೇವಿಸಿದರೆ ಗ್ರಾಜುಯೇಟ್ ಮ್ಯಾನೇಜ್ಮೆಂಟ್ ಆಪ್ಟಿಟ್ಯೂಡ್ ಟೆಸ್ಟ್ನ (GMAT) ವಿಶ್ಲೇಷಣಾ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಬಹದು.
ಈಗಾಗಲೇ ಕಾಫಿ ಪರಿಮಳ ತುಂಬ ಜನರಿಗೆ ವಿಶ್ಲೇಷಣಾ ವಿಭಾಗದಲ್ಲಿ ಉತ್ತಮ ನಿರ್ವಹಣೆ, ಆಸಕ್ತಿ ತೋರಲು ಸಹಾಯ ಮಾಡಿದೆ ಯುಎಸ್ನ ಸ್ಟೀವನ್ ಇನ್ಸ್ಟಿಟ್ಯೂಟ್ನ ಸಹ ಲೇಖಕ ಅಡ್ರಿಯಾನ ಮಾಜರೋವ್ ತಿಳಿಸಿದ್ದಾರೆ.
ಸಂಶೋಧನೆಯಲ್ಲಿ ಭಾಗವಹಿಸಿದವರನ್ನು ಎರಡು ಗುಂಪುಗಳನ್ನಾಗಿ ಮಾಡಲಾಗಿತ್ತು. ಅವರೆಲ್ಲ ಪದವಿ ಪೂರ್ವ ವಿದ್ಯಾರ್ಥಿಗಳು. ಎಲ್ಲರಿಗೂ ಜಿಎಂಟಿ ಆಲ್ಜೀಬ್ರಾದ 10 ಪ್ರಶ್ನೆಗಳನ್ನು ಕೊಟ್ಟು, ಒಂದಷ್ಟು ಜನರನ್ನು ಕಾಫಿ ವಾಸನೆ ಹರಡಿದ ಕೋಣೆಯಲ್ಲಿ ಇನ್ನೊಂದು ಗುಂಪನ್ನು ಕಾಫಿ ಸುವಾಸನೆ ಇಲ್ಲದ ರೂಮ್ನಲ್ಲಿ ಇಡಲಾಗಿತ್ತು. ನಂತರ ನಡೆದ ಪರೀಕ್ಷೆಯಲ್ಲಿ ಕಾಫಿ ಸುವಾಸನೆ ಹರಡಿದ್ದ ಕೋಣೆಯಲ್ಲಿ ಕುಳಿತವರೇ ಜಾಸ್ತಿ ಅಂಕ ಪಡೆದಿದ್ದಾರೆ ಎಂದು ಯೂನಿವರ್ಸಿಟಿ ತಿಳಿಸಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ