ವಿಷಯಕ್ಕೆ ಹೋಗಿ

ಬರಲಿದೆ ದೇಶದ ಪ್ರಥಮ ಚಿಟ್ಟೆ ಸಾಕ್ಷ್ಯಚಿತ್ರ

*ಅವಿನ್ ಶೆಟ್ಟಿ, ಉಡುಪಿ*

ದೇಶದಲ್ಲೇ ಪ್ರಥಮವಾಗಿ ಚಿಟ್ಟೆಗಳ ಸಮಗ್ರ ಜೀವನ ಚಿತ್ರಣದ ಸಾಕ್ಷ್ಯಚಿತ್ರ (ಡಾಕ್ಯುಮೆಂಟರಿ)
ಸಿದ್ಧವಾಗುತ್ತಿದೆ. ಮೂಡುಬಿದಿರೆ ಬೆಳುವಾಯಿ ಚಿಟ್ಟೆ ಪಾರ್ಕ್‌ನ ಸಮ್ಮಿಲನ್ ಶೆಟ್ಟಿ ಈ ಸಾಹಸ
ಮಾಡಿದ್ದು, ಇನ್ನೊಂದು ತಿಂಗಳಲ್ಲಿ ಚಿಟ್ಟೆಗಳು ಪರಿಸರ ವ್ಯವಸ್ಥೆಯಲ್ಲಿ ಅತ್ಯಂತ ಮುಖ್ಯ
ಪಾತ್ರ ವಹಿಸುತ್ತವೆ. ಚಿಟ್ಟೆಗಳು ಮತ್ತು ಸಸ್ಯಗಳ ನಡುವೆ ಮಹತ್ವವಾದ ವಿಕಾಸಾತ್ಮಕ
ಸಂಬಂಧವಿದೆ. ಚಿಟ್ಟೆಯ ಸಮಗ್ರ ಜೀವನ ಶೈಲಿಯ ಬಗ್ಗೆ ಜನಸಾಮಾನ್ಯರಿಗೆ ತಿಳಿಹೇಳುವ
ಉದ್ದೇಶದಿಂದ ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಲಾಗಿದೆ.

*ಮೊಟ್ಟೆಯಿಂದ ಚಿಟ್ಟೆವರೆಗೆ: *ಬೆಳುವಾಯಿ ಚಿಟ್ಟೆ ಪಾರ್ಕ್‌ನಲ್ಲಿ ಮೂರು ವರ್ಷದಿಂದ
ಸಿದ್ಧತೆ ಮಾಡಿಕೊಂಡು ಸಾಕ್ಷ್ಯಚಿತ್ರ ಮಾಡಲಾಗಿದೆ. ರಾಜ್ಯ ಚಿಟ್ಟೆ ಬಿರುದು ಪಡೆದ ಸದರ್ನ್
ಬರ್ಡ್ ವಿಂಗ್‌ನ ಸಮಗ್ರ ಚಿತ್ರಣ ಇಲ್ಲಿ ದಾಖಲಿಸಲಾಗಿದೆ. ಮುಖ್ಯವಾಗಿ ಪಶ್ಚಿಮಘಟ್ಟದ
ವೈಶಿಷ್ಟವಾಗಿರುವ ಮಲಬಾರ್ ಬ್ಯಾಂಡೆಡ್ ಪಿಕಾಕ್, ಮಲಬಾರ್ ಬ್ಯಾಂಡೆಡ್ ಸ್ವಾಲೊಟೇಲ್
ಚಿಟ್ಟೆಗಳ ಜೀವನಶೈಲಿ ಇಲ್ಲಿ ಸೆರೆಯಾಗಿದೆ. ಹೆಣ್ಣು-ಗಂಡು ಆಕರ್ಷಣೆ, ಮೊಟ್ಟೆ ಇಡುವುದು,
ಬಳಿಕ ಕ್ಯಾಟರ್‌ಪಿಲ್ಲರ್ ಆಗಿ ರೂಪುಗೊಳ್ಳುವುದು, ಕ್ಯಾಟರ್‌ಪಿಲ್ಲರ್ ಬಳಿಕ ಕೋಶ
ನಿರ್ಮಿಸುವುದು, ಕೋಶದಿಂದ ಚಿಟ್ಟೆ ಹೊರಬರುವುದು ಇದೆಲ್ಲವನ್ನು ಪರಿಣಾಮಕಾರಿಯಾಗಿ
ದಾಖಲಿಸಿಕೊಳ್ಳಲಾಗಿದೆ. 3 ವರ್ಷಗಳಿಂದ ಚಿಟ್ಟೆಗಳ ಪ್ರತಿ ಹಂತವನ್ನು ಹಿಂಬಾಲಿಸಿ
ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಎಲ್ಲಾ ದಾಖಲೆಗಳನ್ನು ಇದೇ ಪಾರ್ಕ್‌ನಲ್ಲಿ ಮಾಡಿರುವುದು
ವಿಶೇಷ.

ಡಾಕ್ಯುಮೆಂಟರಿಗೆ ಸಂಬಂಧಿಸಿ ವಿಡಿಯೋಗ್ರಫಿಯನ್ನೂ ಸುಂದರವಾಗಿ ಮಾಡಲಾಗಿದೆ. ಮರ, ಗಿಡ, ಹೂ,
ಮಳೆ, ನೀರು ಸೇರಿದಂತೆ ಮುಖ್ಯವಾಗಿ ಚಿಟ್ಟೆಗಳ ಎಲ್ಲಾ ಹಂತವನ್ನು ವಿವಿಧ ಆಯಾಮಗಳಲ್ಲಿ
ಅತ್ಯಾಧುನಿಕ ಕ್ಯಾಮರಗಳಿಂದ ಸೆರೆ ಹಿಡಿಯಲಾಗಿದೆ. ಸಮ್ಮಿಲನ್ ಶೆಟ್ಟಿ ವಿಡಿಯೋಗ್ರಫಿ
ಮಾಡಿದ್ದಾರೆ. 70ಡಿ, 80 ಡಿ, 100 ಎಂ.ಎಂ ಮ್ಯಾಕ್ರೊ ಲೆನ್ಸ್ ಬಳಸಿ ಶೂಟ್ ಮಾಡಲಾಗಿದೆ.
ಡಾ.ಪೃಥ್ವಿರಾಜ್ ಉಮೇಶ್ ಏರಿಯಲ್ ಶೂಟ್ ಮಾಡಿದ್ದಾರೆ, ಜಾಯ್ ಬಜ್ಪೆ ಅವರ ಸಂಕಲನ , ಮಹೇಶ್
ನಾಯಕ್ ಮಂಗಳೂರು ಅವರ ಕಂಟೆಂಟ್ ಸ್ಕ್ರಿಪ್ಟ್ ಡಾಕ್ಯುಮೆಂಟರಿ ಸೊಬಗನ್ನು ಹೆಚ್ಚಿಸಿದೆ.

*ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರದರ್ಶನ: *45 ನಿಮಿಷ ಇರುವ ಈ ಡಾಕ್ಯುಮೆಂಟರಿ ಶೇ.70
ಕೆಲಸವಾಗಿದ್ದು ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಡಾಕ್ಯುಮಂಟರಿ ಸಿದ್ಧವಾದ ಬಳಿಕ
ಬೆಳುವಾಯಿ ಚಿಟ್ಟೆ ಪಾರ್ಕ್‌ನಲ್ಲಿ ಶಾಲೆ ವಿದ್ಯಾರ್ಥಿಗಳಿಗೆ 10 ದಿನ ಉಚಿತ ಪ್ರದರ್ಶನ
ಆಯೋಜಿಸಲಾಗುವುದು. ಯೂ ಟ್ಯೂಬ್‌ನಲ್ಲಿ ಡಾಕ್ಯುಮೆಂಟರಿ ಟ್ರೇಲರ್ ಬಿಡುಗಡೆಯಾಗಿದ್ದು,
ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿರುವುದಾಗಿ ಸಮ್ಮಿಲನ್ ಶೆಟ್ಟಿ ತಿಳಿಸಿದ್ದಾರೆ.

*ಚಿಟ್ಟೆ ಪಾರ್ಕ್‌ಗೆ ಐದು ವರ್ಷ: *2011ರಿಂದ ಆರಂಭವಾಗಿ 2013ರಲ್ಲಿ ಉದ್ಘಾಟನೆಗೊಂಡ 7.35
ಎಕರೆ ಪ್ರದೇಶ ಹೊಂದಿರುವ ಬೆಳುವಾಯಿ ಚಿಟ್ಟೆ ಪಾರ್ಕ್‌ಗೆ ಈಗ 5 ವರ್ಷದ ಸಂಭ್ರಮ.
ವಿದ್ಯಾರ್ಥಿಗಳನ್ನು, ಸಾರ್ವಜನಿಕರನ್ನು ವಿಶೇಷವಾಗಿ ಆಕರ್ಷಿಸುತ್ತಿದೆ. ಪ್ರವಾಸೋದ್ಯಮದಲ್ಲಿ
ಎಂ.ಎ.ಪಡೆದಿರುವ ಸಮ್ಮಿಲನ್ ಶೆಟ್ಟಿ ಉದ್ಯೋಗ ತೊರೆದು, ಪೂರ್ಣಪ್ರಮಾಣದಲ್ಲಿ ಪಾರ್ಕ್‌ನಲ್ಲಿ
ತೊಡಗಿಸಿಕೊಂಡವರು. ಚಿಟ್ಟೆ ಸಂರಕ್ಷಣೆ ಜಾಗೃತಿ ಮೂಡಿಸುತ್ತಿದ್ದಾರೆ. ಸರ್ಕಾರಿ ಶಾಲೆ
ವಿದ್ಯಾರ್ಥಿಗಳಿಗೆ ಪಾರ್ಕ್‌ಗೆ ಉಚಿತ ಪ್ರವೇಶ. ಚಿಟ್ಟೆ ಪಾರ್ಕ್ ವರ್ಲ್ಡ್ ಬುಕ್ ಆಫ್
ರೆಕಾರ್ಡ್ ಲಂಡನ್ ಗೌರವಕ್ಕೂ ಪಾತ್ರವಾಗಿದೆ.

ಪರಿಸರ ವ್ಯವಸ್ಥೆ ವಿಸ್ತೃತ ಸೂಚಕವಾಗಿರುವ ಚಿಟ್ಟೆಗಳ ಬಗ್ಗೆ ಜನಸಮಾನ್ಯರಿಗೆ ತೋರಿಸುವ
ಉದ್ದೇಶ, ಚಿಟ್ಟೆಗಳ ಬಗ್ಗೆ ಜಾಗೃತಿ ಮೂಡಿಸುವ ಆಶಯದಿಂದ ಈ ಪ್ರಯತ್ನಕ್ಕೆ ಮನಸ್ಸು
ಮಾಡಿದ್ದೆ. 3 ವರ್ಷಗಳ ಶ್ರಮವಹಿಸಿ, ಸದ್ಯ ಸಾಕ್ಷ್ಯಚಿತ್ರದ ಕೆಲಸ ಬಹುತೇಕ ಪೂರ್ಣಗೊಂಡಿದೆ.
*|ಸಮ್ಮಿಲನ್ ಶೆಟ್ಟಿ, ಚಿಟ್ಟೆ ಸಂರಕ್ಷಕ*

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....