ನವದೆಹಲಿ: ದೀರ್ಘಕಾಲ ಸೇವೆ ಸಲ್ಲಿಸಿದ ನ್ಯೂಯಾರ್ಕ್ನ ಪೆಪ್ಸಿಕೋ ಕಂಪನಿ ಸಿಇಒ ಇಂದ್ರಾ ನೂಯಿ ಅವರು ತಮ್ಮ ಸ್ಥಾನದಿಂದ ನಿವೃತ್ತರಾಗಲಿದ್ದಾರೆ ಎಂದು ಕಂಪನಿಯೇ ತಿಳಿಸಿದೆ.
ನೂಯಿ ಭಾರತ ಮೂಲದವರು. 12 ವರ್ಷಗಳಿಂದ ಪೆಪ್ಸಿಕೋ ಕಂಪನಿಯ ಸಿಇಒ ಆಗಿ ಚುಕ್ಕಾಣಿ ಹಿಡಿದಿದ್ದರು. ಈಗ ಅವರು ಆ ಸ್ಥಾನದಿಂದ ಕೆಳಗಿಳಿಯಲಿದ್ದು, ಪೆಪ್ಸಿಕೋ ಅಧ್ಯಕ್ಷ ರಾಮನ್ ಲಗುವರ್ಟಾ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಕಂಪನಿಯ ನಿರ್ದೇಶಕರು ನೂಯಿ ಅವರ ಸ್ಥಾನಕ್ಕೆ 54 ವರ್ಷದ ರಾಮನ್ ಲಗುವರ್ಟಾ ಅವರನ್ನು ಆಯ್ಕೆ ಮಾಡಿದ್ದಾರೆ. ನೂಯಿ ಅವರು ಅಕ್ಟೋಬರ್ 3ರಂದು ನಿವೃತ್ತರಾಗಲಿದ್ದಾರೆ. 34 ವರ್ಷಗಳಿಂದ ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನೂಯಿ 12 ವರ್ಷಗಳಿಂದ ಸಿಇಒ ಆಗಿದ್ದರು. 2019ರವರೆಗೂ ಚೇರ್ಮನ್ ಆಗಿ ಮುಂದುವರಿಯಲಿದ್ದಾರೆ. ಲಗುರ್ಟಾ ಅವರು ಅಕ್ಟೋಬರ್ವರೆಗೆ ಕಂಪನಿ ಆಡಳಿತ ಮಂಡಳಿ ನಿರ್ದೇಶಕರಾಗಿ ಇರಲಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಇಂದ್ರಾ ನೂಯಿ, ಪೆಪ್ಸಿಕೋ ಕಂಪನಿಯನ್ನು ಮುನ್ನಡೆಸಿದ್ದು ನನಗೆ ಒಂದು ಗೌರವನ್ನು ತಂದುಕೊಟ್ಟಿದೆ. 12 ವರ್ಷದಲ್ಲಿ ನಾವು ಷೇರುದಾರರು, ಪಾಲುದಾರರ ಹಿತಾಸಕ್ತಿಗೆ ಬದ್ಧವಾಗಿ ಕೆಲಸ ಮಾಡಿದ್ದೇವೆ. ಈ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ