ಲಂಡನ್: ಕೇವಲ 13 ವರ್ಷಕ್ಕೇ ಆಕೆ ಐರ್ಲೆಂಡ್ನ ಮಹಿಳಾ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಳು. ಇನ್ನೂ 18 ತುಂಬುವ ಹೊತ್ತಿಗೇ ಐರಿಷ್ ಮಹಿಳಾ ಹಾಕಿ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದ ಆಕೆ ಈಗ ಮಹಿಳಾ ಹಾಕಿ ವಿಶ್ವಕಪ್ನಲ್ಲಿ ಬೆಳ್ಳಿ ಪದಕ ವಿಜೇತೆಯಾಗಿ ಕ್ರೀಡಾ ಜಗತ್ತಿನ ಅಚ್ಚರಿಗೆ ಕಾರಣಳಾಗಿದ್ದಾಳೆ.
ಈ ರೀತಿ ಎರಡೆರಡು ಕ್ರೀಡಾ ಪ್ರಕಾರಗಳಲ್ಲಿ ಮಿಂಚಿರುವ ಆಕೆಯ ಹೆಸರು ಎಲೆನಾ ಟೈಸ್. ನಿನ್ನೆಯಷ್ಟೇ ಮುಕ್ತಾಯಗೊಂಡ ಮಹಿಳಾ ಹಾಕಿ ವಿಶ್ವಕಪ್ನಲ್ಲಿ ಐರ್ಲೆಂಡ್ ರನ್ರಪ್ ಆಯಿತು. ಈ ತಂಡದಲ್ಲಿದ್ದ ಎಲೆನಾ ಟೈಸ್ ಸೇರಿದಂತೆ ಐರ್ಲೆಂಡ್ನ ಸದಸ್ಯರು ಬೆಳ್ಳಿ ಪದಕ ಗೆದ್ದರು.
ಎಲೆನಾ ಟೈಸ್ ಐರ್ಲೆಂಡ್ನ ಮಹಿಳಾ ಕ್ರಿಕೆಟ್ ತಂಡಕ್ಕೆ 2011ರರಲ್ಲಿ ತಮ್ಮ 13ನೇ ವಯಸ್ಸಿನಲ್ಲೇ ಪದಾರ್ಪಣೆ ಮಾಡಿದ್ದರು. ಈ ಮೂಲಕ ಅವರು ಅತ್ಯಂತ ಕಿರಿಯಯ ವಯಸ್ಸಿನಲ್ಲೇ ಕ್ರಿಕೆಟ್ಗೆ ಕಾಲಿಟ್ಟ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.
ಸದ್ಯ 20 ವರ್ಷದ ಎಲೆನಾ 15 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿದ್ದರೆ, 25 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಇಂತಿರುವ ಎಲೆನಾ 2016ರಲ್ಲಿ ಮಹಿಳಾ ಹಾಕಿಗೆ ಕಾಲಿಟ್ಟಿದ್ದರು. ಈಗ ಹಾಕಿಯಲ್ಲೂ ಅವರು ತಮ್ಮ ಛಾಪು ಮೂಡಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ