ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಕೊನೆಗೂ ಮಾನ್ಯತೆ ಭಾಗ್ಯ ದೊರೆತಿದೆ. ಇದರಿಂದಾಗಿ ಮೂರು ವರ್ಷಗಳಿಂದ ಮಾನ್ಯತೆಯ ‘ಬಂಧನ’ಕ್ಕೊಳಗಾಗಿ ಸ್ತಬ್ಧಗೊಂಡಿದ್ದ ಮುಕ್ತ ವಿವಿ ಮತ್ತೆ ಕಾರ್ಯಾರಂಭ ಮಾಡಲಿದೆ.
ಮುಕ್ತ ವಿವಿ 2018-19ರಿಂದ 2022-23ರವರೆಗೆ ತಾಂತ್ರಿಕೇತರ ಕೋರ್ಸ್ಗಳಿಗೆ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗವು ಮಾನ್ಯತೆಯನ್ನು ನವೀಕರಣ ಮಾಡಿ ಗುರುವಾರ ಆದೇಶ ಹೊರಡಿಸಿದೆ. ಒಂದೇ ಸಲಕ್ಕೆ ಐದು ವರ್ಷ ಮಾನ್ಯತೆಯನ್ನು ಕರುಣಿಸಿ ಮಹತ್ವದ ಆದೇಶ ನೀಡಿದೆ. ಈ ಮೂಲಕ ಮುಕ್ತ ವಿವಿಗೆ ಹಿಡಿದಿದ್ದ ಗ್ರಹಣ ಬಿಟ್ಟು, ಶುಕ್ರದೆಸೆ ಪ್ರಾರಂಭವಾಗಿದೆ.
ವಿಶ್ವವಿದ್ಯಾಲಯದ 17 ಇನ್ಹೌಸ್ ಕೋರ್ಸ್ ಗಳಿಗೆ ಮಾತ್ರ ಮಾನ್ಯತೆ ನೀಡಿದೆ. ಇವುಗಳು 2009-10ನೇ ಸಾಲಿನಲ್ಲಿದ್ದವು. ಆದರೆ, ಮಾನ್ಯತೆಗೆ ಕಾರಣವೊಂದಾಗಿದ್ದ ಅನ್ಯ ಶಿಕ್ಷಣ ಸಂಸ್ಥೆಗಳೊಂದಿಗೆ ಮಾಡಿಕೊಂಡಿದ್ದ ಕೋರ್ಸ್ಗಳಿಗೆ ಮಾನ್ಯತೆಯ ಮುದ್ರೆ ಒತ್ತಿಲ್ಲ.
ಈಗ ಮಾನ್ಯತೆ ನವೀಕರಣವಾಗಿರುವುದರಿಂದ ಹೊಸ ವಿದ್ಯಾರ್ಥಿಗಳ ಪ್ರವೇಶಾತಿಗೆ ಮುಕ್ತ ವಿವಿಗೆ ಅವಕಾಶ ದೊರೆಯಲಿದೆ. ಆದರೆ, 3 ಲಕ್ಷದಷ್ಟು ಇರುವ ಹಳೇ ವಿದ್ಯಾರ್ಥಿಗಳ ಗತಿ ಏನು ಎನ್ನುವುದು ಈಗಲೂ ಪ್ರಶ್ನೆಯಾಗಿಯೇ ಉಳಿದಿದೆ.
ಹಳೆಯ ಕಥೆ ಏನು?
ರಾಜ್ಯದ ವ್ಯಾಪ್ತಿಯಿಂದಾಚೆಗೆ ಶೈಕ್ಷಣಿಕ ಸೇವೆ ನೀಡಬಾರದು, ಖಾಸಗಿ ಶೈಕ್ಷಣಿಕ ಸಂಸ್ಥೆ ಜತೆ ಒಡಬಂಡಿಕೆ ಮಾಡಿಕೊಳ್ಳಕೂಡದು ಎಂಬ ಯುಜಿಸಿ ನಿಯಮ ಉಲ್ಲಂಘನೆಯಿಂದ ಮುಕ್ತ ವಿವಿ ಮಾನ್ಯತೆ ರದ್ದಾಗಿತ್ತು. ಈ ಕುರಿತು 2015ರ ಜೂ.16ರಂದು ಯುಜಿಸಿ ಸಾರ್ವಜನಿಕ ಪ್ರಕಟಣೆ ಹೊರಡಿಸಿತ್ತು. ಹೀಗಾಗಿ, 2012ರಿಂದ ಪೂರ್ವಾನ್ವಯವಾಗಿ ಎಲ್ಲ ಕೋರ್ಸ್ಗಳಿಗೆ ಮಾನ್ಯತೆ ನವೀಕರಣಗೊಂಡಿಲ್ಲ.
ಅರ್ಧ ಗೆಲುವು ಮಾತ್ರ
ಇದು ಮುಕ್ತ ವಿವಿ ಪಾಲಿಗೆ ಅರ್ಧ ಗೆಲುವು ಮಾತ್ರ. ಇದರಿಂದ ಸ್ಥಗಿತಗೊಂಡಿರುವ ಶೈಕ್ಷಣಿಕ ಚಟುವಟಿಕೆ ನಡೆಸಲು ಅನುಮತಿ ದೊರೆಯಲಿದೆ. ಆದರೆ, 2012ರಿಂದ ಕಲಿತ ವಿದ್ಯಾರ್ಥಿಗಳ ಗತಿ ಏನು? ಅವರ ಕೋರ್ಸ್ಗಳಿಗೆ ಮಾನ್ಯತೆ ನೀಡಲು ಇನ್ನು ಯುಜಿಸಿ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ, ಲಕ್ಷಾಂತರ ಭವಿಷ್ಯ ಇನ್ನು ಅತಂತ್ರ ಸ್ಥಿತಿಯಲ್ಲಿಯೇ ಮುಂದುವರಿದಿದೆ. ಈ ನಿಟ್ಟಿನಲ್ಲಿ ಮುಕ್ತ ವಿವಿ ಮತ್ತೊಂದು ಹೋರಾಟಕ್ಕೆ ಅಣಿಯಾಗಬೇಕು.
ಮಾನ್ಯತೆಯುಳ್ಳ ಕೋರ್ಸ್ಗಳು
ಸ್ನಾತಕ ಪದವಿಯಲ್ಲಿ ಬಿಎ, ಬಿಕಾಂ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ. ಸ್ನಾತಕೋತ್ತರ ಪದವಿಯಲ್ಲಿ ಪುರಾತತ್ವ ಇತಿಹಾಸ, ಅರ್ಥಶಾಸ್ತ್ರ, ಇಂಗ್ಲಿಷ್, ಹಿಂದಿ, ಇತಿಹಾಸ, ಪತ್ರಿಕೋದ್ಯಮ, ಕನ್ನಡ, ರಾಜಕೀಯ ಶಾಸ್ತ್ರ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಉರ್ದು, ವಾಣಿಜ್ಯಶಾಸ್ತ್ರ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಪರಿಸರ ವಿಜ್ಞಾನ.
ಸಮಸ್ಯೆ ಇನ್ನೂ ಬಗೆಹರಿದಿಲ್ಲ
ಈಗಾಗಲೇ ತೇರ್ಗಡೆಯಾಗಿರುವ ಲಕ್ಷಾಂತರ ವಿದ್ಯಾರ್ಥಿಗಳು ಹಲವು ತೊಂದರೆ ಅನುಭವಿಸುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ, ಉದ್ಯೋಗ, ಅನ್ಯಕೋರ್ಸ್ ಪ್ರವೇಶಕ್ಕೂ ಈ ವಿದ್ಯಾರ್ಥಿಗಳಿಗೆ ಅವಕಾಶ ದೊರೆಯುತ್ತಿಲ್ಲ. ಒಟ್ಟಿನಲ್ಲಿ ಇವರ ಭವಿಷ್ಯಕ್ಕೆ ಕತ್ತಲು ಕವಿದಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ