ನವದೆಹಲಿ: ವಿದ್ಯುತ್ ಚಾಲಿತ ವಾಹನಗಳ ಉತ್ತೇಜನಕ್ಕೆ ಕೇಂದ್ರ ಸರ್ಕಾರ ಆರಂಭಿಸಿರುವ ಫೇಮ್ ಇಂಡಿಯಾ (ಫಾಸ್ಟರ್ ಅಡಾಪ್ಷನ್ ಆಂಡ್ ಮ್ಯಾನುಫ್ಯಾಕ್ಚರಿಂಗ್ ಆಫ್ ಹೈಬ್ರಿಡ್ ಆಂಡ್ ಇಲೆಕ್ಟ್ರಿಕ್ ವೆಹಿಕಲ್ಸ್ ) ಯೋಜನೆಯ 2ನೇ ಹಂತಕ್ಕೆ ಸೆ.7ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
ಈ ಯೋಜನೆಗಾಗಿ ಕೇಂದ್ರ ಸರ್ಕಾರವು 5,500 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಸಾಮೂಹಿಕವಾಗಿ ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸುವರಿಗೆ ಕೇಂದ್ರ ಸರ್ಕಾರದಿಂದ ಪ್ರೋತ್ಸಾಹ ಹಣ ನೀಡಲಾಗುತ್ತದೆ. ಸೆ.7ರಿಂದ ಎರಡು ದಿನಗಳ ಕಾಲ ಜಾಗತಿಕ ಆಟೊಮೊಬೈಲ್ ಕಂಪನಿಗಳ ಸಿಇಒಗಳ ಶೃಂಗಸಭೆಯು ನವದೆಹಲಿಯಲ್ಲಿ ನಡೆಯಲಿದೆ. ಈಗಾಗಲೇ ದೇಶದಲ್ಲಿ ಫೇಮ್ಇಂಡಿಯಾ ಮೊದಲ ಹಂತದ ಕಾರ್ಯಕ್ರಮ ನಡೆಯುತ್ತಿದೆ.ಈ ಯೋಜನೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಿದ್ಯುತ್ ಚಾಲಿತ ವಾಹನಗಳಿಗೆ 1,800 ರೂ.ಗಳಿಂದ 29 ಸಾವಿರ ರೂ. ಹಾಗೂ ತ್ರಿಚಕ್ರ ವಾಹನಗಳಿಗೆ 3,300 ರೂಗಳಿಂದ 61 ಸಾವಿರ ರೂ.ಗಳವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಸಾರ್ವಜನಿಕ ಸಂಪರ್ಕ ಸಾರಿಗೆ, ಟ್ಯಾಕ್ಸಿಗಳಲ್ಲಿಯೂ ವಿದ್ಯುತ್ ಚಾಲಿತ ವಾಹನಗಳನ್ನು ಹೆಚ್ಚಿಸಲು ಎರಡನೇ ಹಂತದ ಯೋಜನೆಯಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಯೋಜನೆಗೆ ಕೇಂದ್ರ ಹಣಕಾಸು ಸಚಿವಾಲಯ ಒಪ್ಪಿಗೆ
ನೀಡಿದ್ದು, ಮುಂದಿನ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ವನವಾಗಲಿದೆ. ಈ ಯೋಜನೆ ಮೂಲಕ ಸಾರ್ವಜನಿಕ ಹಾಗೂ ಖಾಸಗಿ ವಿದ್ಯುತ್ ಚಾಲಿತ ವಾಹನಗಳ ಸಂಖ್ಯೆ ಹೆಚ್ಚಿಸುವುದರ ಜತೆಗೆ, ದೊಡ್ಡ ಪ್ರಮಾಣದಲ್ಲಿ ಚಾರ್ಜಿಂಗ್ ಪಾಯಿಂಟ್ ಆರಂಭಿ
ಸುವುದು ಕೂಡ ಸೇರಿದೆ. ಚಾರ್ಜಿಂಗ್ ಪಾಯಿಂಟ್ಗಳಿಲ್ಲದಿರುವುದು ವಿದ್ಯುತ್ ಚಾಲಿತ ವಾಹನಗಳ ಬಳಕೆ ನಿರಾಸಕ್ತಿಗೆ ಒಂದು ಕಾರಣವಾಗಿದೆ. ಇದರ ಜತೆಗೆ ಇನ್ನಷ್ಟು ಹೈಬ್ರಿಡ್ ವಿದ್ಯುತ್ ಚಾಲಿತ ವಾಹನ ಉತ್ಪಾದನೆ ಕುರಿತು ಆಟೋಮೊಬೈಲ್ ದಿಗ್ಗಜರ ಜತೆ ರ್ಚಚಿಸಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ