ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ರಾಜಕೀಯ ಬದುಕು-ಸಾಧನೆ

1951: ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯ
1957 : ಎರಡನೇ ಲೋಕಸಭೆಗೆ ಆಯ್ಕೆ
1957-77: ಜನಸಂಘ ಸಂಸದೀಯ ಪಕ್ಷದ ಅಧ್ಯಕ್ಷ
1962: ರಾಜ್ಯಸಭೆ ಸದಸ್ಯ
1966-67: ಸರ್ಕಾರದ ಭರವಸೆಗಳ ಸಮಿತಿಯ ಅಧ್ಯಕ್ಷ
1967: ನಾಲ್ಕನೇ ಲೋಕಸಭೆಗೆ (ಎರಡನೇ ಅವಧಿಗೆ) ಪುನರಾಯ್ಕೆ
1967-70: ಸಾರ್ವಜನಿಕ ಲೆಕ್ಕಸಮಿತಿಯ ಅಧ್ಯಕ್ಷ
1968-73: ಜನಸಂಘದ ಅಧ್ಯಕ್ಷ
1971 : ಐದನೇ ಲೋಕಸಭೆಗೆ (3ನೇ ಅವಧಿ) ಪುನರಾಯ್ಕೆ
1977 : ಆರನೇ ಲೋಕಸಭೆಗೆ (4ನೇ ಅವಧಿ) ಪುನರಾಯ್ಕೆ
1977-79: ಕೇಂದ್ರ ಸಂಪುಟದಲ್ಲಿ ವಿದೇಶಾಂಗ ಸಚಿವಚ್ಟ
1977-80: ಜನತಾ ಪಕ್ಷದ ಸ್ಥಾಪಕಾಧ್ಯಕ್ಷ
1980 : ಏಳನೇ ಲೋಕಸಭೆಗೆ (5ನೇ ಅವಧಿ) ಮರುಆಯ್ಕೆ
1980-86: ಭಾರತೀಯ ಜನತಾ ಪಕ್ಷದ ಅಧ್ಯಕ್ಷ
1980-84: ಬಿಜೆಪಿ ಸಂಸದೀಯ ಪಕ್ಷದ ಮುಖ್ಯಸ್ಥ
1986 : ಬಿಜೆಪಿ ಸಂಸದೀಯ ಪಕ್ಷದ ಮುಖ್ಯಸ್ಥ
1993-1996: ಬಿಜೆಪಿ ಸಂಸದೀಯ ಪಕ್ಷದ ಮುಖ್ಯಸ್ಥ
1986: ರಾಜ್ಯಸಭೆ ಸದಸ್ಯ
1988-90: ಸದನದಲ್ಲಿ ವಾಣಿಜ್ಯ ಸಲಹಾ ಸಮಿತಿಯ ಸದಸ್ಯ
1990-91: ಅಹವಾಲು ಸಮಿತಿಯ ಅಧ್ಯಕ್ಷ
1991 : ಹತ್ತನೇ ಲೋಕಸಭೆಗೆ (6ನೇ ಅವಧಿ) ಮರು ಆಯ್ಕೆ
1991-1993: ಸಾರ್ವಜನಿಕ ಲೆಕ್ಕ ಸಮಿತಿ ಅಧ್ಯಕ್ಷ
1993-96: ವಿದೇಶಾಂಗ ವ್ಯವಹಾರಗಳ ಸಮಿತಿಯ ಮುಖ್ಯಸ್ಥ, ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ
1996: 11ನೇ ಲೋಕಸಭೆಗೆ (7ನೇ ಅವಧಿ) ಮತ್ತೆ ಆಯ್ಕೆ
1996 ಮೇ 16: ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ
1996 ಮೇ 31: ಪ್ರಧಾನಮಂತ್ರಿ ಹುದ್ದೆಗೆ ಹಠಾತ್ ರಾಜೀನಾಮೆ
1996-97: ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ
1997-98: ವಿದೇಶಾಂಗ ವ್ಯವಹಾರಗಳ ಸಮಿತಿಯ ಚೇರ್ಮನ್
1998 : 12ನೇ ಲೋಕಸಭೆಗೆ (8ನೇ ಅವಧಿ) ಪುನರಾಯ್ಕೆ
1998 ಮಾ.19: ಮತ್ತೆ ಪ್ರಧಾನಮಂತ್ರಿ. ವಿದೇಶಾಂಗ ವ್ಯವಹಾರ ಮತ್ತು ಹಂಚಿಕೆ ಮಾಡಲಾಗದೆ ಉಳಿದ ಇತರ ಖಾತೆಗಳ ಉಸ್ತುವಾರಿ
1999: 13ನೇ ಲೋಕಸಭೆಗೆ (9ನೇ ಅವಧಿ) ಮತ್ತೊಮ್ಮೆ ಆಯ್ಕೆ
1999 ಅಕ್ಟೋಬರ್ 13: ಮೂರನೇ ಬಾರಿಗೆ ಪ್ರಧಾನಿ ಹುದ್ದೆ ನಿರ್ವಹಣೆ ಜತೆಗೆ ಹಂಚಿಕೆ ಮಾಡದೆ ಉಳಿದ ಖಾತೆಗಳ ಹೊಣೆಗಾರಿಕೆ
2004 ಮೇ 13: ಪ್ರಧಾನಮಂತ್ರಿ ಸ್ಥಾನಕ್ಕೆ  ರಾಜೀನಾಮೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಜುಲೈ 1ರಿಂದ ಬೆಂಗಳೂರು ವಿಜ್ಞಾನೋತ್ಸವ

41 ವರ್ಷಗಳಿಂದ ಒಮ್ಮೆಯೂ ತಪ್ಪದಂತೆ, ವ್ರತದಂತೆ ನಡೆದುಕೊಂಡು ಬಂದಿರುವ ಬೆಂಗಳೂರು ವಿಜ್ಞಾನೋತ್ಸವ ಜುಲೈ ಒಂದರಿಂದ ಆಗಸ್ಟ್ 2ರವರೆಗೂ ನಡೆಯಲಿದೆ. ಭಾರತೀಯ ಕ್ಷಿಪಣಿ ಕ್ಷೇತ್ರದಲ್ಲಿ ಮಿಸೈಲ್ ವುಮನ್ (ಅಗ್ನಿ ಕನ್ಯೆ!) ಎಂದೇ ಖ್ಯಾತರಾಗಿರುವ ಡಾ.ಟೆಸ್ಸಿ ಥಾಮಸ್ ‘ಬಾಹ್ಯಾಕಾಶ ತಂತ್ರಜ್ಞಾನದ ಪ್ರಗತಿ’ ಕುರಿತು ಉಪನ್ಯಾಸ ನೀಡಲಿರುವುದು ಉತ್ಸವದ ವಿಶೇಷಗಳಲ್ಲಿ ಒಂದು. ಕೇರಳದ ತುಂಬಾ ಉಡಾವಣಾ ಕೇಂದ್ರದ ಸಮೀಪದಲ್ಲೇ ಹುಟ್ಟಿ ರಾಕೆಟ್ ಉಡಾವಣೆಯನ್ನು ನೋಡನೋಡುತ್ತ, ಒಂದಲ್ಲ ಒಂದು ದಿವಸ ಅಲ್ಲೇ ಉದ್ಯೋಗಿಯಾಗುವ ಕನಸು ಕಾಣುತ್ತ ಭವಿಷ್ಯದಲ್ಲಿ ನನಸಾಗಿಸಿಕೊಂಡ ಹಿರಿಮೆ ಹೆಮ್ಮೆ ಟೆಸ್ಸಿಯವರದು. ‘ಅಗ್ನಿ-4’ ಕ್ಷಿಪಣಿ ಯೋಜನಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಸಾಮರ್ಥ್ಯ ಮೆರೆದ ಟೆಸ್ಸಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಗ್ನಿ ಕನ್ಯೆ ಎಂದೇ ಹೆಸರಾದವರು. ಇವರ ಸಾಮರ್ಥ್ಯ ಬೆಳಕಿಗೆ ಕಾರಣರಾದವರು ಎ.ಪಿ.ಜೆ. ಅಬ್ದುಲ್ ಕಲಾಂ! ಜುಲೈ 21ರಂದು ಟೆಸ್ಸಿ ಉಪನ್ಯಾಸ ನೀಡಲಿದ್ದಾರೆ. ವಿಜ್ಞಾನೋತ್ಸವಕ್ಕೆ ವೇದಿಕೆ ಕಲ್ಪಿಸಿರುವ ನ್ಯಾಷನಲ್ ಎಜುಕೇಷನ್ ಸೊಸೈಟಿಗೀಗ 100ರ ಸಂಭ್ರಮ, ಅದೇ ರೀತಿ ಡಾ.ಎಚ್. ನರಸಿಂಹಯ್ಯನವರ ಜನ್ಮ ಶತಾಬ್ದಿಯನ್ನೂ ಈ ಶಿಕ್ಷಣ ಸಂಸ್ಥೆ ಈಗಾಗಲೇ ಆರಂಭಿಸಿದೆ. ಹಾಗಾಗಿ ಈ ಸಲದ ವಿಜ್ಞಾನೋತ್ಸವ ಹೆಚ್ಚು ಮಹತ್ವ ಪಡೆದುಕೊಂಡಿದೆ ಎನ್ನುವುದು ನ್ಯಾಷನಲ್ ಎಜುಕೇಷನ್ ಸೊಸೈಟಿಯ ಹಾಲಿ ಅಧ್ಯಕ್ಷ ಡಾ. ಎ.ಎಚ್.ರಾಮರಾವ್ ಅನಿಸಿಕೆ. ಉದ್ಘಾಟನಾ ಉಪನ್ಯಾಸದ ವಸ್ತು ...

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ಕೇಂದ್ರದಿಂದ ಶೀಘ್ರ 3 ಹೊಸ ಕೃಷಿ ಯೋಜನೆ

ನವದೆಹಲಿ: ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಬೆನ್ನಿಗೆ ಕೇಂದ್ರ ಸರ್ಕಾರ ರೈತರಿಗೆ ನೆರವಾಗುವ ಮತ್ತಷ್ಟು ನೂತನ ನೀತಿಗಳನ್ನು ಘೋಷಿಸಲಿದೆ ಎಂದು ಮೂಲಗಳು ತಿಳಿಸಿವೆ. ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣ ತೆಗೆದುಹಾಕುವ ಮೂರು ಹೊಸ ಸಂಗ್ರಹಣೆ ಯೋಜನೆಗಳನ್ನು ಸರ್ಕಾರ ಶೀಘ್ರವೇ ಜಾರಿಗೆ ತರಲಿದೆ ಎನ್ನಲಾಗಿದೆ. ದರ ಕೊರತೆ ಯೋಜನೆ : ಸರ್ಕಾರಿ ಮಂಡಿಗಳಲ್ಲಿ ಬೆಳೆಗಳ ಮಾರುಕಟ್ಟೆ ದರ, ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿದ್ದರೆ ಸರ್ಕಾರದ ಕಡೆಯಿಂದ ರೈತರಿಗೆ ಪರಿಹಾರ ವಿತರಣೆ. ಮಾರುಕಟ್ಟೆ ಖಾತ್ರಿ ಯೋಜನೆ: ಕೇಂದ್ರದ ಅನುಮತಿ ರಹಿತವಾಗಿ ನಿರ್ದಿಷ್ಟ ಬೆಳೆಗಳನ್ನು ನೇರವಾಗಿ ಖರೀದಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ. ಆಯಾ ರಾಜ್ಯಗಳಲ್ಲಿನ ಬೆಳೆಗಳ ಬೇಡಿಕೆಗೆ ತಕ್ಕಂತೆ ಖರೀದಿ ಪ್ರಮಾಣ ನಿಗದಿಪಡಿಸಲು ಸ್ವಾತಂತ್ರ್ಯ. ಖಾಸಗಿ ಸಂಗ್ರಹಣೆ ಯೋಜನೆ: ಖಾಸಗಿ ಖರೀದಿದಾರರಿಗೆ ಕನಿಷ್ಠ ಬೆಂಬಲ ಬೆಲೆಗೆ ಬೆಳೆಗಳನ್ನು ನೇರವಾಗಿ ರೈತರಿಂದ ಖರೀದಿಸಲು ಸರ್ಕಾರದಿಂದ ಪ್ರೋತ್ಸಾಹ.