ಐದನೆಯ ಸಂಖ್ಯೆಯಲ್ಲಿ ಮೂಡಿಬರುವ ವೈವಿಧ್ಯತೆಯನ್ನು ಗಮನಿಸುವಾಗ ಅಚ್ಚರಿಪಡುತ್ತೇವೆ. ಧಾರ್ವಿುಕ ತಳಹದಿ ಇರಬಹುದು ಅಥವಾ ದೇಹವಿಜ್ಞಾನವೇ ಇರಬಹುದು – ಈ ಐದು ವಸ್ತುಗಳ ಸಂಯೋಜನೆಗಳು ನಮ್ಮ ದೈನಂದಿನ ಜೀವನದ ಭಾಗಗಳೇ ಆಗಿವೆ.
| ಕೋಟೇಶ್ವರ ಸೂರ್ಯನಾರಾಯಣ ರಾವ್
ಪಂಚೆಂದ್ರಿಯಗಳು: ನೋಡುವ ಕಣ್ಣು, ರುಚಿ ಹೇಳುವ ನಾಲಗೆ, ಪರಿಮಳ ಗ್ರಹಿಸುವ ಮೂಗು, ಕೇಳುವ ಕಿವಿ ಮತ್ತು ಸ್ಪರ್ಶಜ್ಞಾನ ನೀಡುವ ಚರ್ಮ – ಇವು ಪಂಚ ಜ್ಞಾನೇಂದ್ರಿಯಗಳಾಗಿವೆ.
ಪಂಚಕೋಶ: ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ವಿಜ್ಞಾನಮಯ ಕೋಶ ಹಾಗೂ ಆನಂದಮಯ ಕೋಶಗಳು ದೇಹವನ್ನು ರಕ್ಷಿಸುವ ಕೋಶಗಳೆನಿಸಿವೆ.
ಪಂಚವಾಯುಗಳು: ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ಇವು ಪಂಚವಾಯುಗಳು.
ಪಂಚಭೂತಗಳು: ಭೂಮಿ , ಜಲ, ಅಗ್ನಿ, ವಾಯು, ಆಕಾಶ ಇವು ಪಂಚಭೂತಗಳು.
ಪಂಚಾಂಗ: ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳೆಂಬ ಪಂಚ ಅಂಗಗಳು ನಮಗೆ ನಿರಂತರ ನಿರ್ದೇಶನಗಳನ್ನು ನೀಡುತ್ತವೆ.
ಪಂಚಾಕ್ಷರ: ‘ಶಿವಾಯ ನಮಃ’ ಎನ್ನುವುದು ಪಂಚಾಕ್ಷರ ಮಂತ್ರ. ರುದ್ರದೇವನನ್ನು ಪಂಚಾಕ್ಷರಮಂತ್ರದ ಮೂಲಕವೇ ಸ್ತುತಿಸುತ್ತಾರೆ.
ಪಂಚಾಮೃತ : ಹಾಲು, ಮೊಸರು, ತುಪ್ಪ, ಜೇನುತುಪ್ಪ ಹಾಗೂ ಸಕ್ಕರೆಗಳ ಸಂಯೋಜನೆಯೇ ಪಂಚಾಮೃತ.
ಪಂಚಗವ್ಯ: ಹಾಲು, ಮೊಸರು, ತುಪ್ಪ, ಗೋಮೂತ್ರ, ಗೋಮಯ ಇವು ಒಟ್ಟಾದರೆ ಪಂಚಗವ್ಯವೆಂದಾಗುತ್ತದೆ. ಇದನ್ನು ತೀರ್ಥದಂತೆ ಸೇವಿಸುವ ರೂಢಿಯಿದೆ.
ಪಂಚಬಾಣಗಳು: ಅರವಿಂದ, ಅಶೋಕ, ಚ್ಯೂತ, ನವಮಲ್ಲಿಕಾ ಹಾಗೂ ನೀಲೋತ್ಪಲ – ಇವು ಮನ್ಮಥನ ಐದು ಬಾಣಗಳಾಗಿವೆ.
ಪಂಚವಾದ್ಯಗಳು: ಬಾಯಿಯಿಂದ ಊದುವ ಶಂಖ, ಕೋಲಿನಿಂದ ಬಾರಿಸುವ ಭೇರಿ, ಕರದಿಂದ ಬಾರಿಸುವ ಗಂಟೆ, ಕೈಯಿಂದ ನುಡಿಸುವ ಡಮರು ಮತ್ತು ತಮಟೆ ಇವು ಪಂಚವಾದ್ಯಗಳೆನಿಸಿವೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ