ಟೊರಾಂಟೊ: ಸ್ಪೇನ್ ಸ್ಟಾರ್ ರಾಫೆಲ್ ನಡಾಲ್ ಏಕಪಕ್ಷೀಯ ನಿರ್ವಹಣೆಯೊಂದಿಗೆ ರೋಜರ್ಸ್ ಕಪ್ ಮಾಸ್ಟರ್ಸ್ ಟೆನಿಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಬರ್ತ್ಡೇ ಬಾಯ್ ಸ್ಟೆಫಾನೋಸ್ ಸಿಟ್ಸಿಪಾಸ್ರನ್ನು ನೇರಸೆಟ್ಗಳಲ್ಲಿ ಸೋಲಿಸುವ ಮೂಲಕ ಹಾಲಿ ವಿಶ್ವ ನಂ.1 ಆಟಗಾರ ನಡಾಲ್ ವೃತ್ತಿಜೀವನದ 80ನೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. ನಡಾಲ್ 1 ಗಂಟೆ, 45 ನಿವಿಷಗಳ ಹೋರಾಟದಲ್ಲಿ 6-2, 7-6ರಿಂದ ಗ್ರೀಸ್ನ ಯುವ ಆಟಗಾರ ಸಿಟ್ಸಿಪಾಸ್ ವಿರುದ್ಧ ಗೆದ್ದರು. 32 ವರ್ಷದ ನಡಾಲ್ಗೆ ಎಲೈಟ್ ಮಾಸ್ಟರ್ಸ್ ಹಂತದಲ್ಲಿ 33ನೇ ಪ್ರಶಸ್ತಿಯಾಗಿದೆ. 17 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡೆಯ ನಡಾಲ್ ಇದೇ ವಾರ ನಡೆಯಲಿರುವ ಸಿನ್ಸಿನಾಟಿ ಮಾಸ್ಟರ್ಸ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಮುಂದಿನ ಯುಎಸ್ ಓಪನ್ಗೆ ಸಂಪೂರ್ಣ ಫಿಟ್ ಆಗಿ ಮರಳುವ ಉದ್ದೇಶದಿಂದ ನಡಾಲ್ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ. 19 ವರ್ಷದ ಸಿಟ್ಸಿಪಾಸ್ ಫೈನಲ್ ಹಾದಿಯಲ್ಲಿ, 1990ರಲ್ಲಿ ಎಟಿಪಿ ವರ್ಲ್ಡ್ ಟೂರ್ ಆರಂಭವಾದ ಬಳಿಕ ಒಂದೇ ಟೂರ್ನಿಯಲ್ಲಿ ಸತತ ನಾಲ್ವರು ಅಗ್ರ 10 ರ‍್ಯಾಂಕಿಂಗ್ ಒಳಗಿನ ಆಟಗಾರರನ್ನು ಸೋಲಿಸಿದ ಮೊದಲಿಗ ಎನ್ನುವ ಶ್ರೇಯ ಸಂಪಾದಿಸಿದ್ದರು. ಮಾಂಟ್ರಿಯಲ್ನಲ್ಲಿ ನಡೆದ ಮಹಿಳೆಯರ ರೋಜರ್ಸ್ ಕಪ್ನಲ್ಲಿ ರೊಮೆನಿಯಾದ ಸಿಮೊನಾ ಹಲೆಪ್ ಪ್ರಶಸ್ತಿ ಜಯಿಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ