ನವದೆಹಲಿ: 328 ನಿರ್ದಿಷ್ಟ ಡೋಸ್ ಕಾಂಬಿನೇಷನ್ ಔಷಧಗಳು (ಎಫ್ಡಿಸಿ) ಮತ್ತು ಇತರ ಆರು ಔಷಧಗಳ ತಯಾರಿಕೆ, ಮಾರಾಟ ಮತ್ತು ಸರಬರಾಜು ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ.
ಅಸುರಕ್ಷಿತ ಔಷಧಗಳ ಬಳಕೆಗೆ ನಿಷೇಧ ಹೇರುವ ಕುರಿತು ಔಷಧ ತಯಾರಿಕಾ ಕಂಪನಿಗಳು ಮತ್ತು ಕೇಂದ್ರ ಸರ್ಕಾರದ ನಡುವೆ 2016ರಿಂದ ನಡೆಯುತ್ತಿದ್ದ ಕಾನೂನು ಹೋರಾಟ ಈಗ ಪ್ರಮುಖ ಹಂತ ತಲುಪಿದಂತಾಗಿದೆ.
ಕೇಂದ್ರದ ಈ ಕ್ರಮದಿಂದ 6,000ಕ್ಕೂ ಹೆಚ್ಚು ವಿವಿಧ ಬ್ರಾಂಡ್ಗಳ ಔಷಧಗಳ ಮಾರಾಟ ಬಂದ್ ಆಗಲಿದೆ. ತಲೆನೋವು ಸಮಸ್ಯೆಗೆ ಜನಪ್ರಿಯವಾಗಿದ್ದ ‘ಸಾರಿಡಾನ್’ ಮಾತ್ರೆಗಳು, ಚರ್ಮದ ಕ್ರೀಮ್ ‘ಪಾನ್ಡೆಮ್ರ್’, ಸಕ್ಕರೆ ಕಾಯಿಲೆಗೆ ಬಳಸಲಾಗುತ್ತಿದ್ದ ‘ಗ್ಲುಕೊನಾಮ್ರ್ ಪಿಜಿ’, ಆಂಟಿಬಯೋಟಿಕ್ ಲುಪಿಡಿಕ್ಲಾಕ್ಸ್ ಮತ್ತು ಆಂಟಿಬ್ಯಾಕ್ಟಿರಿಯಲ್ ‘ಟ್ಯಾಕ್ಸಿಮ್ ಎಜಡ್’ ನಿರ್ಬಂಧಕ್ಕೆ ಗುರಿಯಾಗಿರುವ ಪ್ರಮುಖವಾದವು.
ಕಂಪನಿಗಳ ಕಾನೂನು ಸಮರ
2016ರ ಫೆಬ್ರವರಿ: ದೇಶದ ಔಷಧ ಮಾರುಕಟ್ಟೆಯಲ್ಲಿರುವ ಅಪಾಯಕಾರಿ ಎಫ್ಡಿಸಿಗಳ ಕುರಿತು ಕೊಕಾಟೆ ಸಮಿತಿಯಿಂದ ಅಧ್ಯಯನ. ಕೇಂದ್ರಕ್ಕೆ ವರದಿ ಸಲ್ಲಿಕೆ.
2016, ಮಾರ್ಚ್ 10: 344 ಎಫ್ಡಿಸಿ ಮಾರಾಟ, ಬಳಕೆಗೆ ಕೇಂದ್ರ ಸರ್ಕಾರದಿಂದ ನಿಷೇಧದ ಆದೇಶ. ಮತ್ತೆ ಆರು ಇತರ ಔಷಧಗಳು ನಿಷೇಧ ಪಟ್ಟಿಗೆ ಸೇರ್ಪಡೆ.
ಆದೇಶ ಪ್ರಶ್ನಿಸಿ ದೇಶದ ವಿವಿಧ ಹೈಕೋರ್ಟ್ ಬಳಿಕ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಔಷಧ ತಯಾರಿಕೆ ಕಂಪನಿಗಳು.
ಬ್ಯಾನ್ ಅತ್ಯವಶ್ಯಕವಾದಲ್ಲಿ 15 ಎಫ್ಡಿಸಿಗಳ ಬಗ್ಗೆ ಹೊಸ ತನಿಖೆ ಆರಂಭಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ.
ಆಲ್ ಇಂಡಿಯಾ ಡ್ರಗ್ ಆಕ್ಷನ್ ನೆಟ್ವರ್ಕ್ನಿಂದ 15 ಎಫ್ಡಿಸಿಗಳ ಮೇಲೆ ನಿರ್ಬಂಧಕ್ಕೆ ಆಗ್ರಹ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ