ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ (ಎಂಎಸ್ಎಂಇ) ಇನ್ನು 1 ಕೋಟಿ ರೂ.ವರೆಗಿನ ಸಾಲ ಸುಲಭವಾಗಿ ಮತ್ತು ವೇಗವಾಗಿ ದೊರೆಯಲಿದೆ. ದಾಖಲೆಗಳು ಸಮರ್ಪಕವಾಗಿದ್ದರೆ 59 ನಿಮಿಷಗಳಲ್ಲಿ ಸಾಲ ಮಂಜೂರಾಗಲಿದೆ. ಸಾಲ ನೀಡಿಕೆಯ ಪೋರ್ಟಲ್ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಚಾಲನೆ ನೀಡಿದ್ದಾರೆ.
ಸಾಲದ ಅರ್ಜಿಯನ್ನು ಅಗತ್ಯ ದಾಖಲೆಗಳ ಸಾಫ್ಟ್ ಕಾಪಿ ಜತೆಗೆ ಆನ್ಲೈನ್ ಮೂಲಕ ಸಲ್ಲಿಸಬೇಕು. ಇದನ್ನು ಏಕಗವಾಕ್ಷಿ ಪದ್ಧತಿ ಅನ್ವಯ ಒಂದೇ ವೇದಿಕೆಯಲ್ಲಿ ಕಾರ್ಪೆರೇಟ್ ಸಚಿವಾಲಯ ಮತ್ತು ಸಾಲ ಮಾಹಿತಿ ಬ್ಯೂರೊಗಳು ಪರಿಶೀಲಿಸಲಿವೆ. ವಂಚನೆ ಉದ್ದೇಶ ಮತ್ತು ಉದ್ದಿಮೆ ತಯಾರಿಸುವ ವಸ್ತುವಿನ ಬಗ್ಗೆ ಕೂಲಂಕಷವಾಗಿ ಪರಾಮರ್ಶೆ ನಡೆಸಲಿವೆ. ನಂತರ ಈ ಅರ್ಜಿಯನ್ನು ಸಂಬಂಧಿಸಿದ ಬ್ಯಾಂಕ್ಗೆ ಕಳುಹಿಸಲಾಗುತ್ತದೆ.
ಏನು ದಾಖಲೆ ಬೇಕು?
ಜಿಎಸ್ಟಿ ಪಾವತಿ, ಆದಾಯ ತೆರಿಗೆ ಸಲ್ಲಿಕೆ ವಿವರ, ಬ್ಯಾಂಕ್ ಖಾತೆಯ ಮಾಹಿತಿಯನ್ನು ಉದ್ದಿಮೆಗಳು ಸಲ್ಲಿಸಬೇಕು. ಈ ದಾಖಲೆಗಳು ಸಮರ್ಪಕವಾಗಿದ್ದು, ಪರಿಶೀಲನಾ ವರದಿಯಲ್ಲಿ ಯಾವುದೇ ಋಣಾತ್ಮಕ ಅಂಶ ಇರದಿದ್ದರೆ ಅರ್ಜಿ ಸಲ್ಲಿಸಿದ 8 ದಿನಗಳಲ್ಲಿ ಸಾಲ ಬಿಡುಗಡೆ ಆಗಲಿದೆ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಪೋರ್ಟಲ್ ಅಭಿವೃದ್ಧಿ
ಈ ಪೋರ್ಟಲ್ನ್ನು ಎಸ್ಬಿಐ, ಪಿಎನ್ಬಿ, ಬ್ಯಾಕ್ ಆಫ್ ಬರೋಡಾ, ಇಂಡಿಯನ್ ಬ್ಯಾಂಕ್, ವಿಜಯಾ ಬ್ಯಾಂಕ್ಗಳ ಸಹಯೋಗದಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಅಭಿವೃದ್ಧಿ ಪಡಿಸಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ