ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆ(ಜಿಡಿಪಿ) ದರ 2018-19ನೇ ಸಾಲಿನ ಮೊದಲ ತ್ರೈಮಾಸಿಕ(ಏಪ್ರಿಲ್-ಜೂನ್)ದಲ್ಲಿ ದಾಖಲೆಯ ಶೇ.8.2ಕ್ಕೆ ಏರಿಕೆಯಾಗಿದೆ ಎಂದು ಶುಕ್ರವಾರ ಅಧಿಕೃತ ದತ್ತಾಂಶಗಳಿಂದ ತಿಳಿದು ಬಂದಿದೆ.
ಕಳೆದ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ. 7.7ರಷ್ಟಿತ್ತು. 2017-18ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಶೇ. 5.59ರಷ್ಟಿದ್ದ ಜಿಡಿಪಿ ದರ ಈ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಶೇ. 8.2ಕ್ಕೆ ಏರಿಕೆ ಕಂಡಿದೆ.
ದೇಶದ ಆರ್ಥಿಕ ಬೆಳವಣಿಗೆ ದರವು ಎಲ್ಲ ನಿರೀಕ್ಷೆಗಳನ್ನು ಮೀರಿದ್ದು, ರಾಯಿಟರ್ಸ್ ಜನಾಭಿಮತದಲ್ಲಿ ಅರ್ಥಶಾಸ್ತ್ರಜ್ಞರು ಶೇ. 7.6 ಬರಬಹುದೆಂದು ಹೇಳಿದ್ದರು.
ಈ ಕುರಿತು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಎಸ್.ಸಿ.ಗಾರ್ಗ್ ಪ್ರತಿಕ್ರಿಯಿಸಿ, ಆರ್ಥಿಕ ಚಟುವಟಿಕೆಯು ಸಾಮಾನ್ಯವಾಗಿದೆ. ಕಳೆದ ಸಾಲಿನ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ನಾವು ಈ ಭಾರಿ ಶೇ. 8ರಷ್ಟು ಬೆಳವಣಿಗೆಯನ್ನು ಸಾಧಿಸಿದ್ದೇವೆ. 8 ತ್ರೈಮಾಸಿಕಗಳನ್ನು ಕಳೆದ ನಂತರ ಇಂದು ಶೇ. 8.2ರಷ್ಟು ಜಿಡಿಪಿ ಸಾಧಿಸಿದ್ದೇವೆ. ಶೇ.8.1ರಷ್ಟಿದ್ದ ಆರ್ಥಿಕತೆಯು ಶೇ. 8.2ರಷ್ಟಕ್ಕೆ ಏರಿದ್ದು, ಇದು ಆರ್ಥಿಕ ಬೆಳವಣಿಗೆ ಏರಿಕೆಯ ಸ್ಥಿರ ಮಾರ್ಗವನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ.
ದೇಶದ ಉತ್ಪಾದನಾ ಕ್ಷೇತ್ರ ಹಾಗೂ ಸೇವಾ ಕ್ಷೇತ್ರದಲ್ಲಿ ಹೆಚ್ಚಿನ ಬೆಳವಣಿಗೆ ಕಂಡಿದ್ದು, ಕಳೆದ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಶೇ. 1.8ರಷ್ಟಿದ್ದ ಉತ್ಪಾದನಾ ಕ್ಷೇತ್ರದ ಬೆಳವಣಿಗೆಯು ಈ ಬಾರಿ ಶೇ. 13.5 ರಷ್ಟು ಬೆಳವಣಿಯಾಗಿರುವುದು ಜಿಡಿಪಿ ಹೆಚ್ಚಾಗಲು ಕಾರಣವಾಗಿದೆ.
ಭಾರತದ ಜಿಡಿಪಿ ದರವು ವೇಗವಾಗಿ ಬೆಳೆಯುತ್ತಿದ್ದು, ಚೀನಾದ ನಂತರ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗೆ ಭಾರತವು ಪಾತ್ರವಾಗಿದೆ. (ಏಜೆನ್ಸೀಸ್)

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ