ವಿಶ್ವದ ಅತಿ ದೀರ್ಘಾವಧಿ ವಿಮಾನ ಪ್ರಯಾಣ ಸದ್ಯದಲ್ಲೇ ಅರ್ಧ ಭೂಗೋಳವನ್ನು ಸುತ್ತು ಬರಲಿದೆ ಎಂದರೆ ನಂಬುತ್ತೀರಾ! ಹೌದು, ನಂಬಲೇಬೇಕು. ‘ಪ್ರಾಜೆಕ್ಟ್ ಸನ್ರೈಸ್’ ಹೆಸರಿನ ಯೋಜನೆಯನ್ನು ಕೈಗೆತ್ತಿಕೊಂಡು ಕ್ಯುಂಟಾಸ್ ಏರ್ವೇಸ್ , ಬೋಯಿಂಗ್ ಮತ್ತು ಏರ್ಬಸ್ ಕಂಪನಿಗಳಿಗೆ ಸವಾಲಾಗಿ ವಿಶ್ವದಲ್ಲೇ ಅತಿಹೆಚ್ಚು ಅವಧಿ ಪ್ರಯಾಣಿಸಬಲ್ಲ ವಿಮಾನವನ್ನು ತಯಾರಿಸಿದೆ. ಮಾರ್ಗ ಮಧ್ಯೆ ಯಾವ ವಿಮಾನ ನಿಲ್ದಾಣದಲ್ಲಿಯೂ ಇಳಿಯದೇ, ಒಂದೇ ಸಮನೇ 20 ಗಂಟೆಗಳವರೆಗೆ ಹಾರುವ ಸಾಮರ್ಥ್ಯದ ವಿಮಾನ ಅಂತಿಮ ಹಂತದ ಸಿದ್ಧತೆಯಲ್ಲಿದೆ. ಆಸ್ಟ್ರೇಲಿಯಾದ ಸಿಡ್ನಿಯಿಂದ ಹಾರಿ 20 ಗಂಟೆ ಪ್ರಯಾಣಿಸಿ ಬ್ರಿಟನ್ನ ಲಂಡನ್ನಲ್ಲಿ ಈ ವಿಮಾನ ಇಳಿಯಲಿದೆ. 2022ರಿಂದ ವಿಮಾನ ಹಾರಾಟ ಆರಂಭಿಸಲಿದೆ. ಪ್ರಯಾಣಿಕರಿಗೆ ಜಿಮ್ ಮಕ್ಕಳ ಆರೈಕೆ ವಿಭಾಗ, ನಿದ್ರೆಗಾಗಿಯೇ ಮೀಸಲಾದ ವ್ಯವಸ್ಥೆ ಸೇರಿದಂತೆ ಅನೇಕ ವೈಶಿಷ್ಟ್ಯಗಳು ಇದರಲ್ಲಿದೆ.
ಭೂಗೋಳದ ಅರ್ಧ ಸುತ್ತು ಹೊಡೆಯುವ ವಿಮಾನ ನಿರ್ಮಾಣ ಒಂದು ಕನಸಾಗಿತ್ತು. ಅಷ್ಟೊಂದು ಇಂಧನ, ತುರ್ತು ಪರಿಸ್ಥಿತಿ ಎದುರಿಸುವ ಸಾಧನಗಳನ್ನು ಹೊತ್ತು ಹಾರುವ ವಿಮಾನ ತಯಾರಿಕೆ ಒಂದು ಸವಾಲು. ಆದರೆ ಈಗ ಅದು ನನಸಾಗಿದೆ.
| ಅಲಾನ್ ಜೊಯ್ಸ್, ಕ್ಯುಂಟಾಸ್ ಏರ್ವೇಸ್ ಸಿಇಒ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ