ಅಶೋಕವೃಕ್ಷದ ಉಪಯುಕ್ತ ವಿಷಯಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದೆವು. ಅದರ ಇನ್ನಷ್ಟು ವೈಶಿಷ್ಟ್ಯಳು ಮತ್ತು ಮನೆಮದ್ದುಗಳ ಕುರಿತು ಅರಿತುಕೊಳ್ಳೋಣ.
ಅಶೋಕವೃಕ್ಷವು ಮಹಿಳೆಯರ ಆರೋಗ್ಯಕ್ಕೆ ವರದಾಯಕವಾಗಬಲ್ಲುದು. ಅಶೋಕ ಮರದ ತೊಗಟೆಯ ರಸ ತೆಗೆದುಕೊಂಡು ಸಾಸಿವೆಯನ್ನು ಸೇರಿಸಿ ರುಬ್ಬಿಕೊಳ್ಳಬೇಕು. ಇದನ್ನು ನೆರಳಿನಲ್ಲಿ ಒಣಗಿಸಿ ಸಂಗ್ರಹಿಸಿಟ್ಟುಕೊಳ್ಳಬೇಕು. ಇದನ್ನು ನೀರಿನಲ್ಲಿ ಕಲಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯ. ಮುಖ ಕಾಂತಿಯುಕ್ತವಾಗುತ್ತದೆ.
ಫೈಲ್ಸ್ನಿಂದ ರಕ್ತ ಹೋಗುತ್ತಿದ್ದಲ್ಲಿ 30ರಿಂದ
40 ಮಿಲಿಯಷ್ಟು ಅಶೋಕವೃಕ್ಷದ ತೊಗಟೆಯ ಡಿಕಾಕ್ಷನ್ ಸೇವಿಸುವುದರಿಂದ ಕಡಿಮೆ ಆಗುತ್ತದೆ. 60 ಗ್ರಾಂ ಅಶೋಕವೃಕ್ಷದ ತೊಗಟೆಯನ್ನು ನೀರಿಗೆ ಹಾಕಿ ನೀರು ಕಾಲುಭಾಗದಷ್ಟು ಆಗುವವರೆಗೆ ಕುದಿಸಬೇಕು. 60 ಮಿ.ಲೀ. ಹಾಲನ್ನು (ಕುದಿಸಿದ ಹಾಲು) ಅಶೋಕವೃಕ್ಷದ ಕಷಾಯಕ್ಕೆ ಬೆರೆಸಿ ಬೆಳಗ್ಗೆ ಹಾಗೂ ಸಾಯಂಕಾಲ ಕುಡಿಯುವುದರಿಂದ ಋತುಚಕ್ರದಲ್ಲಾಗುವ ಏರುಪೇರು ಕಡಿಮೆಯಾಗುವುದು. ಬಿಳಿಮುಟ್ಟು ಸಹ ಕಡಿಮೆಯಾಗುತ್ತದೆ.
ಅಶೋಕ ಹೂವಿನ ರಸಕ್ಕೆ ಸ್ವಲ್ಪ ನೀರು ಸೇರಿಸಿ
15 ಹನಿಗಳನ್ನು ತೆಗೆದುಕೊಳ್ಳುವುದರಿಂದ ಭೇದಿ ಕಡಿಮೆಯಾಗುತ್ತದೆ. ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಲು ಅಶೋಕವೃಕ್ಷವು ಸಹಾಯಕಾರಿ. ಸಂತಾನಹೀನತೆ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿಯೂ ಇದು ಉಪಯೋಗಕಾರಿ. ಪ್ರತಿನಿತ್ಯ ಅಶೋಕ ಮರದ ತೊಗಟೆಯ ಡಿಕಾಕ್ಷನ್ ತಯಾರಿಸಿ ಸೇವಿಸುವುದು ಉತ್ತಮ. ಆದರೆ ಒಳ್ಳೆಯದು ಎಂಬ ಕಾರಣಕ್ಕೆ ಲೀಟರ್ಗಟ್ಟಲೆ ಸೇವಿಸಬಾರದು. ಇಲ್ಲಿ ಸಾಮಾನ್ಯ ಪ್ರಮಾಣವನ್ನು ತಿಳಿಸಲಾಗಿದೆ. ದೇಹಪ್ರಕೃತಿಗೆ ಅನುಗುಣವಾಗಿ ತಜ್ಞವೈದ್ಯರ ಸಲಹೆ ಪಡೆದುಕೊಳ್ಳಬೇಕು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ