ಎಸ್-400 ಟ್ರಯಂಫ್ ಖರೀದಿ ಮೋದಿ-ಪುತಿನ್ ಸಹಿ ಸಾಧ್ಯತೆ >>
ನವದೆಹಲಿ: ಮುಂದಿನ ತಿಂಗಳು 4 ಮತ್ತು 5ರಂದು ನಡೆಯಲಿರುವ ಭಾರತ- ರಷ್ಯಾ ವಾರ್ಷಿಕ ದ್ವಿಪಕ್ಷೀಯ ಶೃಂಗದಲ್ಲಿ ಪಾಲ್ಗೊಳ್ಳಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ನವದೆಹಲಿಗೆ ಆಗಮಿಸುತ್ತಿದ್ದು, ಎಸ್-400 ಟ್ರಯಂಫ್ ರಕ್ಷಣಾ ವ್ಯವಸ್ಥೆ ಸೇರಿ 40 ಸಾವಿರ ಕೋಟಿ ರೂ. ರಕ್ಷಣಾ ಉಪಕರಣ ಖರೀದಿ ಒಪ್ಪಂದ ಏರ್ಪಡುವ ಸಾಧ್ಯತೆಯಿದೆ. ಇದಕ್ಕೆ ಪೂರಕವಾಗಿ ಭದ್ರತೆ ಕುರಿತ ಸಂಪುಟ ಸಮಿತಿ ಎಸ್-400 ಟ್ರಯಂಫ್ ಖರೀದಿಗೆ ಸಮ್ಮತಿಸಿದೆ. ರಕ್ಷಣಾ ಉಪಕರಣಗಳ ಖರೀದಿ ಸಂಬಂಧ ಭಾರತ ಮತ್ತು ರಷ್ಯಾ ನಡುವೆ ಒಪ್ಪಂದ ಏರ್ಪಟ್ಟ 2 ವರ್ಷಗಳ ಬಳಿಕ ಎಸ್-400 ಟ್ರಯಂಫ್ ಮೊದಲ ಸ್ಕ್ವಾಡ್ರನ್ ಪೂರೈಕೆಯಾಗುವ ನಿರೀಕ್ಷೆಯಿದೆ. ಇನ್ನುಳಿದ ಉಪಕರಣಗಳನ್ನು 4-5 ವರ್ಷಗಳ ಅವಧಿಯಲ್ಲಿ ಪೂರೈಕೆ ಮಾಡಲಾಗುತ್ತದೆ.
ನಿರ್ಬಂಧ?: ರಷ್ಯಾದಿಂದ ಸುಖೋಯ್ ಯುದ್ಧವಿಮಾನಗಳು ಮತ್ತು ಎಸ್-400 ಕ್ಷಿಪಣಿಗಳನ್ನು ಖರೀದಿಸಿದ್ದಕ್ಕಾಗಿ ಚೀನಾ ಮೇಲೆ ಅಮೆರಿಕ ನಿರ್ಬಂಧ ಹೇರಿತ್ತು. ರಷ್ಯಾದಿಂದ ರಕ್ಷಣಾ ಉಪಕರಣಗಳನ್ನು ಖರೀದಿಸಿದರೆ ಭಾರತದ ಮೇಲೂ ಅಮೆರಿಕ ನಿರ್ಬಂಧ ಹೇರುವ ಸಾಧ್ಯತೆ ದಟ್ಟವಾಗಿದೆ. ಇತ್ತೀಚೆಗೆ ಅಮೆರಿಕದೊಂದಿಗೆ ನಡೆದ 2+2 ಸಭೆಯಲ್ಲಿ ಭಾರತ ಈ ವಿಷಯವನ್ನು ಪ್ರಸ್ತಾಪಿಸಿತ್ತು. ಆದರೆ ಅಮೆರಿಕ ಇನ್ನೂ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ