ನವದೆಹಲಿ: ವಿಮಾನ ನಿಲ್ದಾಣಕ್ಕೆ ಹೊರಡುವ ಮುನ್ನ ಪಾಸ್ಪೋರ್ಟ್ ಇದೆಯೇ, ಗುರುತಿನ ದಾಖಲೆ ಇದೆಯೇ ಎಂದು ಪದೇಪದೆ ಚೆಕ್ ಮಾಡಿಕೊಳ್ಳುವ ಪ್ರಮೇಯ ಮುಂದಿನ ವರ್ಷದಿಂದ ಇರುವುದಿಲ್ಲ. ಏರ್ಪೋರ್ಟ್ ಗೇಟ್ನ ಕ್ಯಾಮರಾ ಮುಂದೆ ಹೋಗಿ ನಿಂತರೆ ಸಾಕು, ನಿಮ್ಮ ಮುಖವನ್ನು ಸ್ಕಾ್ಯನ್ ಮಾಡಿ ನೀವು ತೆರಳಬೇಕಿರುವ ವಿಮಾನದ ಮಾಹಿತಿ ನೀಡಿ, ಸೂಕ್ತ ಕೌಂಟರ್ ಕಡೆಗೆ ಹೋಗಲು ಮಾರ್ಗದರ್ಶನ ಸಿಗುತ್ತದೆ. ಎಲ್ಲವೂ ‘ಫೇಷಿಯಲ್ ರೆಕಗ್ನಿಷನ್’ ತಂತ್ರಜ್ಞಾನದಿಂದ ಕಾಗದ, ದಾಖಲೆಗಳ ರಹಿತವಾಗಿ ನಡೆಯುತ್ತವೆ. ವರ್ಷಾಂತ್ಯಕ್ಕೆ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಆರ್ಜಿಐಎ)ದಲ್ಲಿ ಎಲ್ಲ ಭದ್ರತಾ ತಪಾಸಣೆ ಚೆಕ್ಪಾಯಿಂಟ್ಗಳಲ್ಲಿ ಫೇಶಿಯಲ್ ರೆಕಗ್ನಿಷನ್ ಅಳವಡಿಕೆಗೆ ಸಿದ್ಧತೆ ನಡೆದಿದೆ. ಇದು ಭಾರತದಲ್ಲಿಯೇ ಪ್ರಪ್ರಥಮ ಬಾರಿಗೆ ಜಾರಿಗೆ ಬರಲಿದೆ. 2019ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕೂಡ ಈ ತಂತ್ರಜ್ಞಾನ ಅಳವಡಿಕೆಯಾಗಲಿದೆ.
ಹೇಗೆ ಕಾರ್ಯನಿರ್ವಹಿಸುತ್ತದೆ?: # ಏರ್ಪೋರ್ಟ್ ಪ್ರವೇಶ್ ದ್ವಾರದಲ್ಲಿ ಒಂದು ಬಾರಿ ಪ್ರಯಾಣಿಕನ ದಾಖಲೆಗಳ ಪರಿಶೀಲನೆ. ಮುಖದ ಸಂಪೂರ್ಣ ಸ್ಕಾ್ಯನ್ ಮೂಲಕ ವಿಮಾನನಿಲ್ದಾಣದ ಮಾಹಿತಿ ಸಂಗ್ರಹ ವ್ಯವಸ್ಥೆಯಲ್ಲಿ ಪ್ರಯಾಣಿಕನ ಎಲ್ಲ ದಾಖಲೆಗಳು ಶೇಖರಣೆ.
# ಏರ್ ಪೋರ್ಟ್ನ ಮುಂದಿನ ಎಲ್ಲ ಗೇಟ್/ಕೌಂಟರ್ಗಳಲ್ಲಿನ ಕ್ಯಾಮೆರಾ ಎದುರು ಹೋಗಿ ನಿಂತರೆ ಸಾಕು, ಅಧಿಕೃತವಾಗಿ ಮುಂದಕ್ಕೆ ತೆರಳಲು ಭದ್ರತಾ ವ್ಯವಸ್ಥೆಯಿಂದ ಅವಕಾಶ. (ಬೋರ್ಡಿಂಗ್ ಪಾಸ್ ತೋರಿಸುವುದು ಬೇಡ)
# ಒಂದು ಬಾರಿ ಪ್ರಯಾಣಿಕನ ದಾಖಲೆ ಸಂಗ್ರಹವಾದರೆ, ಮುಂದಿನ ಕೆಲ ದಿನ ಅಥವಾ ತಿಂಗಳ ಬಳಿಕ ಪ್ರಯಾಣಕ್ಕೆ ಬಂದಾಗಲೂ ಕ್ಯಾಮರಾ ಎದುರು ನಿಂತ ಕೂಡಲೇ ಭದ್ರತಾ ವ್ಯವಸ್ಥೆಯಿಂದ ಹಳೆಯ ದಾಖಲೆಗಳ ಪರಿಶೀಲನೆ. ಜತೆಗೆ ಅಡೆತಡೆಯಿಲ್ಲದೆ ಗೇಟ್ಗಳನ್ನು ದಾಟಲು ಮುಕ್ತ ಅವಕಾಶ.
ಎಲ್ಲೆಲ್ಲಿದೆ ಈ ತಂತ್ರಜ್ಞಾನ?: ವೆನಿಜುವೆಲಾ ಬಳಿಯ ಅರುಬಾ ದ್ವೀಪ ಏರ್ಪೋರ್ಟ್ನಿಂದ ಆಸ್ಟ್ರೇಲಿಯಾದ ಆಮ್ಸಟರ್ಡ್ಯಾಮ್ೆ ಪ್ರಯಾಣಿಸುವಾಗ. = ಅಮೆರಿಕದ ಬಾಸ್ಟನ್ನಿಂದ ಅರುಬಾ ದ್ವೀಪಕ್ಕೆ ಪ್ರಯಾಣಿಸುವ ಏರ್ಪೋರ್ಟ್ ಕೌಂಟರ್ನಲ್ಲಿ. =ಸಿಂಗಾಪುರದ ಛಾಂಗಿ ಏರ್ಪೋರ್ಟ್ನ ಟರ್ವಿುನಲ್ 4ನಲ್ಲಿ ಅತ್ಯಾಧುನಿಕ ಸ್ವಸಹಾಯ ಚೆಕ್-ಇನ್ ವ್ಯವಸ್ಥೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ