ಪಾಕಿಸ್ತಾನದ ನೂತನ ಅಧ್ಯಕ್ಷರಾಗಿ ಡಾ.ಆರಿಫ್ ಅಲ್ವಿ ಆಯ್ಕೆಯಾಗಿದ್ದಾರೆ. ಪ್ರಧಾನಿ ಇಮ್ರಾನ್ ಖಾನ್ ಸ್ನೇಹಿತ ಹಾಗೂ ತೆಹ್ರೀಕ್ ಇನ್ಸಾಫ್ ಪಕ್ಷದ ಸ್ಥಾಪಕ ಸದಸ್ಯ ಆರಿಫ್ ಮಂಗಳವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಪಾಕಿಸ್ತಾನದ ಸಂಸತ್ನಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ 430 ಮತಗಳು ಚಲಾವಣೆಯಾದವು. ಅದರಲ್ಲಿ ಆರಿಫ್ ಅಲ್ವಿ ಪರವಾಗಿ 212 ಮತಗಳು ಬಂದರೆ, ಪಿಪಿಪಿ ಪಕ್ಷದ ಅಭ್ಯರ್ಥಿ ಐತಾಜ್ ಎಹ್ಸಾನ್ಗೆ
131 ಹಾಗೂ ಪಿಎಂಎಲ್ ಪಕ್ಷದ ಅಭ್ಯರ್ಥಿ ಮೌಲಾನಾ ಫಜಲ್ ಉರ್ ರೆಹ್ಮಾನ್ಗೆ 81 ಮತಗಳು ಲಭಿಸಿದವು. ಚಲಾವಣೆಯಾದ 6 ಮತಗಳನ್ನು ಅಸಿಂಧು ಎಂದು ಘೋಷಿಸಿ ಡಾ.ಆರಿಫ್ ಅವರನ್ನು 13ನೇ ಅಧ್ಯಕ್ಷ ಎಂದು ಪಾಕಿಸ್ತಾನ ಸಂಸತ್ ಪ್ರಕಟಿಸಿದೆ. ಹಾಲಿ ಅಧ್ಯಕ್ಷ ಮಮ್ನೂನ್ ಹುಸೇನ್ ಅವರ ಕಾರ್ಯಾವಧಿಯು ಸೆ.8ಕ್ಕೆ ಅಂತ್ಯವಾಗುತ್ತಿದೆ.
ವೃತ್ತಿಯಲ್ಲಿ ದಂತವೈದ್ಯರಾಗಿರುವ 69 ವರ್ಷದ ಡಾ.ಆರಿಫ್ ಅಲ್ವಿ, 2006ರಿಂದ 2013ರವರೆಗೆ ಪಿಟಿಐನ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2013 ಹಾಗೂ 2018ರ ಸಂಸತ್ ಚುನಾವಣೆಯಲ್ಲಿ ಇವರು ಕರಾಚಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ