ಚೀನಾ: ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡ, ಬಹುದೊಡ್ಡ ಅಂತರ್ಜಾಲ ವ್ಯಾಪಾರ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ ಜಾಕ್ ಮಾ ಅವರು ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನದಿಂದ ನಿವೃತ್ತಿ ತೆಗೆದುಕೊಳ್ಳುತ್ತಿದ್ದೇನೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಚೀನಾದ ಅಮೆಜಾನ್ ಎಂದೇ ಕರೆಯಲ್ಪಡುವ ಅಲಿಬಾಬಾ ಸಂಸ್ಥೆ 1999ರಲ್ಲಿ ಸ್ಥಾಪನೆಯಾಗಿದೆ. ಸದ್ಯ 420 ಬಿಲಿಯನ್ ಡಾಲರ್ ಮೌಲ್ಯದ ವಹಿವಾಟು ನಡೆಸುತ್ತಿದೆ. ಜಾಕ್ ಮಾ ಅವರು 1999ಕ್ಕೂ ಮೊದಲು ಇಂಗ್ಲಿಷ್ ಶಿಕ್ಷಕರಾಗಿದ್ದರು. ಈಗ ಅವರ ಆಸ್ತಿ ಸುಮಾರು 40 ಬಿಲಿಯನ್ ಡಾಲರ್ಗಳಾಗಿದ್ದು ದೇಶದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ.
ಜಾಕ್ ಮಾ ಈಗ ಶ್ರೀಮಂತ ವ್ಯಕ್ತಿಯಾಗಿದ್ದರೂ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದ ಬಿಜಿನೆಸ್ ಶಾಲೆಯಿಂದ 10 ಬಾರಿ ತಿರಸ್ಕರಿಸಲ್ಪಟ್ಟಿದ್ದರು. ಕೆಲಸಕ್ಕಾಗಿ ಅಪ್ಲಿಕೇಶನ್ ಹಾಕಿದ್ದ ಜಾಕ್ ಮಾ ಅವರನ್ನು ಕೆಎಫ್ಸಿ ಸೇರಿ 30 ಕಂಪನಿಗಳು ನಿರಾಕರಿಸಿದ್ದವು.
ಜಾಕ್ ಮಾ ನಿವೃತ್ತಿ ಬಳಿಕ ಕಂಪನಿಯ ಈಗಿನ ಸಿಇಒ ಡೇನಿಯಲ್ ಝಾಂಗ್ ಕಾರ್ಯನಿರ್ವಾಹಕ ಅಧ್ಯಕ್ಷ ಹುದ್ದೆಗೆ ಏರಲಿದ್ದಾರೆ. ಮಾ ಅವರು ಶಿಕ್ಷಣ ಕ್ಷೇತ್ರದಲ್ಲಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸೋಮವಾರ ಮಾ ಅವರ 54 ವರ್ಷದ ಜನ್ಮದಿನವಾಗಿದ್ದು ಅಂದೇ ಚೀನಾದಲ್ಲಿ ಶಿಕ್ಷಕರ ದಿನಾಚರಣೆಯೂ ಇದೆ. ಅವತ್ತು ಜಾಕ್ ಮಾ ತಮ್ಮ ನಿವೃತ್ತಿ ವಿಷಯವನ್ನು ಘೋಷಿಸಲಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ