ವೈದ್ಯಕೀಯ ಉಪಕರಣ ಗಳಿಗೆ ಸಂಬಂಧಿಸಿದಂತೆ ಹೊಸ ನೀತಿ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಚಿಕಿತ್ಸೆಗೆ ಬಳಸಲಾದ ಪರಿಕರಗಳು ರೋಗಿಯ ಮೇಲೆ ದುಷ್ಪರಿಣಾಮ ಬೀರಿದರೆ ಉಪಕರಣ ಉತ್ಪಾದಿಸಿದ ಕಂಪನಿಯೇ ಪರಿಹಾರ ನೀಡಬೇಕಾಗುತ್ತದೆ.
ಜಾನ್ಸನ್ ಆಂಡ್ ಜಾನ್ಸನ್ ಕಂಪನಿಯ ಅಂಗ ಸಂಸ್ಥೆ ತಯಾರಿಸಿದ ಉಪಕರಣಗಳನ್ನು ಬಳಸಿ ಬೆನ್ನುಹುರಿ ಶಸ್ತ್ರ ಚಿಕಿತ್ಸೆ ನಡೆಸಿದ ಬಳಿಕ ರೋಗಿಗೆ ತೊಂದರೆ ಉಂಟಾಗಿತ್ತು. ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಹೊಸ ನೀತಿ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಈ ಕುರಿತು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆ. ವಿವಿಧ ಪ್ರಕರಣಗಳ ಅಧ್ಯಯನ ನಡೆಸಿ ಈ ಸಮಿತಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. 2017ರ ಮೆಡಿಕಲ್ ಡಿವೈಸ್ ರೂಲ್ಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಉಪಕರಣ ಬಳಕೆಯಿಂದ ರೋಗಿಗೆ ಗಾಯ, ಇನ್ನಿತರ ಯಾವುದೇ ಹಾನಿ ಉಂಟಾದಲ್ಲಿ ಆ ಕಂಪನಿಯೇ ಪರಿಹಾರ ನೀಡಬೇಕು.ಪ್ರಕರಣದ ಗಂಭೀರತೆ ಆಧಾರದ ಮೇಲೆ ಎಷ್ಟು ಪರಿಹಾರ ನಿಗದಿ ಮಾಡಬೇಕು ಎಂಬುದನ್ನು ನಿರ್ಧಾರ ಮಾಡಲಾಗುತ್ತದೆ. ನಿಯಮ ಅಂತಿಮಗೊಂಡ ಬಳಿಕ ಸುತ್ತೋಲೆ ಹೊರಡಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. – ಪಿಟಿಐ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ