ಜಾಗತಿಕ ಕರೆನ್ಸಿ ಮಾರುಕಟ್ಟೆಯಲ್ಲಿ ಅಮೆರಿಕ ಡಾಲರ್ ಎದುರು ಭಾರತೀಯ ಕರೆನ್ಸಿ ರೂಪಾಯಿ ಮೌಲ್ಯ ದಿನೇದಿನೆ ಇಳಿಕೆಯಾಗುತ್ತಿರುವುದು ಹೆಚ್ಚು ಗಮನಸೆಳೆಯುತ್ತಿದೆ. ಆದರೆ, ಜಗತ್ತಿನ ಇತರೆ ಕೆಲವು ಕರೆನ್ಸಿಗಳೆದರು ರೂಪಾಯಿ ಮೌಲ್ಯ ವರ್ಧನೆ ಆಗುತ್ತಿರುವ ವಿಚಾರವನ್ನು ಕಡೆಗಣಿಸುವಂತಿಲ್ಲ. ಈ ವಿದ್ಯಮಾನದ ಸಂಕ್ಷಿಪ್ತ ನೋಟ ಇಲ್ಲಿದೆ.
ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಲೇ ಇದೆ. ಆದರೆ ವಿಶ್ವದ ಪ್ರಮುಖ ಕರೆನ್ಸಿಗಳೆದುರು ರೂಪಾಯಿ ಮೌಲ್ಯ ಬಲವರ್ಧಿಸಿಕೊಳ್ಳುತ್ತಿರುವುದು ವಿಶೇಷ. ಕಳೆದ 5 ವರ್ಷದಲ್ಲಿ ಸಿಂಗಾಪುರ ಡಾಲರ್, ಸ್ವಿಸ್ ಫ್ರಾಂಕ್ ಹಾಗೂ ಯುಎಸ್ ಡಾಲರ್ ಹೊರತುಪಡಿಸಿ ವಿಶ್ವದ ಬಹುತೇಕ ಎಲ್ಲ ಕರೆನ್ಸಿಗಳ ಎದುರು ರೂಪಾಯಿ ಮೌಲ್ಯ ವರ್ಧನೆಯಾಗಿದೆ. ಆದರೆ ಜಾಗತಿಕ ಹಾಗೂ ಭಾರತ ವ್ಯಾಪಾರವು ಅಮೆರಿಕನ್ ಡಾಲರ್ನಲ್ಲಿಯೇ ಹೆಚ್ಚು ನಡೆಯುವುದರಿಂದ ರೂಪಾಯಿ ಮೌಲ್ಯ ಕುಸಿತ ಮಹತ್ವ ಪಡೆದುಕೊಂಡಿದೆ. ಅದರಲ್ಲೂ ವಿಶೇಷವಾಗಿ ಇರಾನ್ನಿಂದ ಕಚ್ಚಾ ತೈಲ ಖರೀದಿಗೆ ನಿರ್ಬಂಧ, ಅಮೆರಿಕದಿಂದ ಆಮದು ಹೆಚ್ಚು ಮಾಡಿರುವುದು ಭಾರತಕ್ಕೆ ಈ ಅಪಮೌಲ್ಯ ತಲೆಬಿಸಿಯಾಗಿದೆ. ಎನ್ಡಿಎ ಸರ್ಕಾರದ ಅವಧಿಯಲ್ಲಿ ಇರಾನ್ಗೆ ಕಚ್ಚಾತೈಲ ಖರೀದಿಗಾಗಿ ಡಾಲರ್ ಬದಲು ರೂಪಾಯಿ ನೀಡುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಈಗ ಅಮೆರಿಕಕ್ಕೆ ಮತ್ತೆ ಡಾಲರ್ನ್ನು ನೀಡುವ ಪರಿಸ್ಥಿತಿ ನಿರ್ವಣವಾಗಿದೆ. ಇದು ಭಾರತದ ಆರ್ಥಿಕತೆಯ ಮೇಲೂ ಪರಿಣಾಮ ಬೀರಲಿದೆ. ಇದೇ ಕಾರಣಕ್ಕೆ ಭಾರತದ ಅಭಿವೃದ್ಧಿ ಮುನ್ನೋಟ ನೀಡುವಾಗ ರೂಪಾಯಿ ಮೌಲ್ಯ ಹಾಗೂ ತೈಲಬೆಲೆಯ ಎಚ್ಚರಿಕೆ ನೀಡಲಾಗಿತ್ತು.
ಡಾಲರ್ ಮೌಲ್ಯ ಏರಿಕೆಗೆ ಕಾರಣ: ಜಾಗತಿಕವಾಗಿ ಅಮೆರಿಕನ್ ಡಾಲರ್ನಲ್ಲೇ ದೊಡ್ಡ ಪ್ರಮಾಣದ ವ್ಯಾಪಾರ ವಹಿವಾಟು ನಡೆಯುತ್ತದೆ. ಐಎಂಎಫ್ ಪ್ರಕಾರ ಜಾಗತಿಕ ಫೊರೆಕ್ಸ್ ಸಂಗ್ರಹದಲ್ಲಿ ಅಮೆರಿಕನ್ ಡಾಲರ್ ಪಾಲು ಶೇ.62.5 ಇದೆ. ಈಗ ಯುಎಸ್ ಡಾಲರ್ಗೆ ಮತ್ತಷ್ಟು ಬೇಡಿಕೆ ಬಂದಿದೆ. ಇದರ ಜತೆಗೆ ಅಮೆರಿಕನ್ ಫೆಡರಲ್ ಬ್ಯಾಂಕ್ನಿಂದ ಡಾಲರ್ ಪೂರೈಕೆ ಕಡಿಮೆ ಮಾಡಲಾಗಿದೆ. ಹಾಗೆಯೇ ಬಡ್ಡಿದರವನ್ನು ಅಮೆರಿಕದಲ್ಲಿ ಏರಿಸಿದ್ದರೆ, ಯೂರೋಪಿಯನ್ ಸೆಂಟ್ರಲ್ ಬ್ಯಾಂಕ್ನಲ್ಲಿ ಇಳಿಸಲಾಗಿದೆ. ಇದರಿಂದ ಡಾಲರ್ನಲ್ಲಿ ಠೇವಣಿ ಹೆಚ್ಚಾಗುತ್ತಿದೆ. ಇವೆಲ್ಲದರ ಜತೆಗೆ ವಾಣಿಜ್ಯ ಹಾಗೂ ತೈಲ ಸಮರ ಕೂಡ ಪರಿಣಾಮ ಬೀರಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ