ಅಡುಗೆಗೆ ಬಳಸುವ ಪುಡಿಉಪ್ಪಿನಲ್ಲಿ ಪ್ಲಾಸ್ಟಿಕ್ ಅಂಶ ಇರುವುದನ್ನು ಬಾಂಬೆ ಐಐಟಿಯ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಇಬ್ಬರು ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಐದು ಮಿಲಿಮೀಟರ್ಗಿಂತಲೂ ಚಿಕ್ಕ ಪ್ಲಾಸ್ಟಿಕ್ ಕಣಗಳು ಪುಡಿಯುಪ್ಪಿನಲ್ಲಿದ್ದು, ಈ ಕಣಗಳು ಸಮುದ್ರದಲ್ಲಿ ಕ್ರಮೇಣ ಕರಗುವಂತಹ ವಸ್ತುಗಳೇ ಆಗಿವೆ ಎಂದು ಸಂಶೋಧಕರು ಹೇಳಿದ್ದಾರೆ.ಐಐಟಿಯ ಪ್ರೊ. ಅಮೃತಾನ್ಶು ಶ್ರೀವಾಸ್ತವ ಮತ್ತು ಚಂದನ್ ಕೃಷ್ಣ ಸೇಠ್ ಈ ಅಧ್ಯಯನ ನಡೆಸಿದ್ದು, ಜನಪ್ರಿಯ ಬ್ರಾ್ಯಂಡ್ಗಳ ಪುಡಿಉಪ್ಪಿನ ಮಾದರಿ ಪರೀಕ್ಷಿಸಿದಾಗ 626 ಮೈಕ್ರೋಪ್ಲಾಸ್ಟಿಕ್ ಕಣಗಳು ಪತ್ತೆಯಾಗಿವೆ. ಇದರಲ್ಲಿ ಶೇ. 67ರಷ್ಟು ಪ್ಲಾಸ್ಟಿಕ್ ಅಂಶ ವಿಘಟಿತ ಸಣ್ಣ ಸಣ್ಣ ಚೂರುಗಳ ರೂಪದಲ್ಲೂ ಉಳಿದ ಶೇ. 37ರಷ್ಟು ತಂತುರಚನೆಯಲ್ಲೂ ಇದ್ದವು. ಒಂದು ಕಿಲೋ ಉಪ್ಪಿನಲ್ಲಿ 63.76 ಮೈಕ್ರೋಗ್ರಾಂ (0.063 ಮಿಲಿಗ್ರಾಂ) ಮೈಕ್ರೋಪ್ಲಾಸ್ಟಿಕ್ ಕಂಡುಬಂದವು. ಪ್ರತಿದಿನ ಒಬ್ಬ ವ್ಯಕ್ತಿ ಐದು ಗ್ರಾಂ ಪುಡಿ ಉಪು್ಪ ಬಳಸುತ್ತಾನೆಂದರೆ ಆತನ ಹೊಟ್ಟೆಗೆ 117 ಮೈಕ್ರೋಗ್ರಾಂ (0.117 ಮಿಲಿಗ್ರಾಂ) ಮೈಕ್ರೋಪ್ಲಾಸ್ಟಿಕ್ ಸೇರುತ್ತದೆ ಎಂದು ತಿಳಿಸಿದ್ದಾರೆ. ಈ ಅಧ್ಯಯನದ ‘ಕಂಟಾಮಿನೇಷನ್ ಆಫ್ ಇಂಡಿಯನ್ ಸೀ ಸಾಲ್ಟ್ ವಿತ್ ಮೈಕ್ರೋಪ್ಲಾಸ್ಟಿಕ್ ಆಂಡ್ ಎ ಪೊಟೆನ್ಷಿಯಲ್ ಪ್ರಿವೆನ್ಷನ್ ಸ್ಟ್ರ್ಯಾಟಿಜಿ’ ಪ್ರಬಂಧ ‘ಎನ್ವಿರಾನ್ಮೆಂಟಲ್ ಸೈನ್ಸ್ ಆಂಡ್ ಪಲ್ಯೂಷನ್ ರಿಸರ್ಚ್’ ಅಂತಾರಾಷ್ಟ್ರೀಯ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ