ದೋಹಾ: ಮಧ್ಯಪ್ರಾಚ್ಯದ ಮೊಟ್ಟಮೊದಲ ಐಎಎಎಫ್ ವಿಶ್ವ ಚಾಂಪಿಯನ್ಷಿಪ್ಗೆ ಆತಿಥ್ಯ ವಹಿಸಿಕೊಂಡಿರುವ ದೋಹಾ, ಪ್ರತಿಷ್ಠಿತ ಕೂಟಕ್ಕೆ ಸರಿಯಾಗಿ ಒಂದು ವರ್ಷವಿರುವ ಹಂತದಲ್ಲಿ ತನ್ನ ಕ್ರಾಂತಿಕಾರಕ ವ್ಯವಸ್ಥೆಗಳನ್ನು ವಿಶ್ವಕ್ಕೆ ಪರಿಚಯಿಸಿದೆ. ಖಲೀಫಾ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಗುಲಾಬಿ ಬಣ್ಣದ ಟ್ರ್ಯಾಕ್ಗಳನ್ನು ಹಾಕಲಾಗಿದ್ದರೆ, ಪೂರ್ಣ ಸ್ಟೇಡಿಯಂಗೆ ಹವಾನಿಯಂತ್ರಿತ ವ್ಯವಸ್ಥೆಯನ್ನು ಅಳವಡಿಸಿದೆ. ಹೊರಾಂಗಣ ಅಥ್ಲೆಟಿಕ್ಸ್ ಸ್ಟೇಡಿಯಂನಲ್ಲಿ ಎಸಿ ವ್ಯವಸ್ಥೆಯನ್ನು ಅಳವಡಿಸಿರುವುದು ಇದೇ ಮೊದಲು.
ಕತಾರ್ ದೇಶದ ರಾಜಧಾನಿಯಾಗಿರುವ ದೋಹಾದಲ್ಲಿ ಚಳಿಗಾಲದ ಅವಧಿಯಲ್ಲೂ ವಿಪರೀತ ಬಿಸಿಲಿರುತ್ತದೆ. 2019ರ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 6ರವರೆಗೆ ವಿಶ್ವ ಅಥ್ಲೆಟಿಕ್ಸ್ ನಡೆಯಲಿದ್ದು, ಈ ಹಂತದಲ್ಲಿ ಅಂದಾಜು 37 ಡಿಗ್ರಿ ಬಿಸಿಲು ಇರುತ್ತದೆ. ಆದರೆ, ಹವಾನಿಯಂತ್ರಿತ ವ್ಯವಸ್ಥೆಯಿಂದಾಗಿ ದೋಹಾ ಸ್ಟೇಡಿಯಂನ ಒಳಗಡೆ ಗರಿಷ್ಠ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.
48 ಸಾವಿರ ಪ್ರೇಕ್ಷಕ ಸಾಮರ್ಥ್ಯದ ಸ್ಟೇಡಿಯಂಗೆ ಎಸಿ ವ್ಯವಸ್ಥೆ ಹಾಕಿರುವ ಪರಿಣಾಮ ವಾತಾವರಣ ಹಾಗೂ ಗಾಳಿಯ ಮೇಲೆ ಮಾತ್ರವೇ ಆಗಲಿದೆ. ಇದರಿಂದ ಸ್ಪರ್ಧಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಂಘಟಕರು ಹೇಳಿದ್ದಾರೆ. ಆದರೆ, ಜಾವೆಲಿನ್ ಥ್ರೋ ಸ್ಪರ್ಧೆಯ ವೇಳೆ ಎಸಿ ವ್ಯವಸ್ಥೆ ಸ್ಥಗಿತಗೊಂಡಿರಲಿದೆ. -ಪಿಟಿಐ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ