ದುಬೈ: ಕ್ರಿಕೆಟ್ ರಂಗದಲ್ಲಿ ಅದ್ಭುತ ಸಾಧನೆ ಮಾಡಿರುವ ಭಾರತೀಯ ಕ್ರಿಕೆಟರ್, ಟೀಂ ಇಂಡಿಯಾ
ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪಂದ್ಯಗಳನ್ನಾಡಿದರೆ ಸಾಕು ಅವರಿಂದ ಒಂದಿಲ್ಲೊಂದು
ದಾಖಲೆ ಸೃಷ್ಟಿಯಾಗುತ್ತದೆ. ಹಾಗೆಯೇ ಫೈನಲ್ ಪಂದ್ಯದಲ್ಲೂ ಅವರೊಂದು ಸಾಧನೆ ಮಾಡಿ ಮತ್ತಷ್ಟು
ಉತ್ತುಂಗಕ್ಕೇರಿದ್ದಾರೆ.
ಏಷ್ಯಾಕಪ್ನ ಈ ಟೂರ್ನಿಯಲ್ಲಂತೂ ಧೋನಿ ಅದಾಗಲೇ ಎರಡು ಸಾಧನೆ ಮಾಡಿದ್ದರು. ಒಂದು, ಭಾರತೀಯ
ಕ್ರಿಕೆಟರ್ಗಳ ಪೈಕಿ ಅತ್ಯಂತ ಹೆಚ್ಚು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಆಟಗಾರರ
ಪಟ್ಟಿಯಲ್ಲಿ ಧೋನಿ ಎರಡನೇ ಸ್ಥಾನಕ್ಕೇರಿದರು. ಮತ್ತೊಂದು ಏಷ್ಯಾಕಪ್ನ ಅಫ್ಘಾನಿಸ್ತಾನ
ವಿರುದ್ಧದ ಪಂದ್ಯದಲ್ಲಿ ಕ್ಯಾಪ್ಟನ್ ಆಗುವ ಮೂಲಕ 200 ಪಂದ್ಯಗಳಲ್ಲಿ ನಾಯಕನಾದ ಕೀರ್ತಿಗೆ
ಪಾತ್ರರಾದರು. ಈಗ ಹೊಸದೊಂದು ದಾಖಲೆ ಸೃಷ್ಟಿಯಾಗಿದೆ.
ಅದೇನೆಂದರೆ, ಬಾಂಗ್ಲಾದೇಶ ಎದುರಿಗಿನ ಫೈನಲ್ ಪಂದ್ಯದಲ್ಲಿ ಧೋನಿ ಅವರು 800ನೇ ಸ್ಟಂಪ್
ಔಟ್ ಮಾಡಿದರು. ಈ ಮೂಲಕ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಂತ ಹೆಚ್ಚು ಸ್ಟಂಪ್ ಔಟ್
ಮಾಡಿದ ಏಷ್ಯಾದ ಮೊದಲ ಕ್ರಿಕೆಟರ್ ಎಂಬ ಖ್ಯಾತಿಗೆ ಭಾಜನರಾದರು. ಪಂದ್ಯದ 43ನೇ ಓವರ್ನಲ್ಲಿ
ಕುಲದೀಪ್ ಯಾದವ್ ಅವರ ಬೌಲಿಂಗ್ನಲ್ಲಿ ಮಶ್ರಫೆ ಮೊರ್ತಜಾ ಅವರ ಸ್ಟಂಪ್ ಎಗರಿಸುವ ಮೂಲಕ
ಅವರು ಈ ಸಾಧನೆ ಮಾಡಿದರು.
ಕ್ರಿಕೆಟ್ನ ಮೂರು ಪ್ರಕಾರಗಳಾದ ಟೆಸ್ಟ್, ಏಕದಿನ, ಟಿ20ಯ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ
ಅತಿ ಹೆಚ್ಚು ಸ್ಟಂಪ್ ಔಟ್ ಮಾಡಿದ ವಿಶ್ವದ ವಿಕೆಟ್ ಕೀಪರ್ಗಳ ಪಟ್ಟಿಯಲ್ಲಿ ಧೋನಿ ಈಗ
ಮೂರನೇ ಸ್ಥಾನದಲ್ಲಿದ್ದಾರೆ. 998 ಸ್ಟಂಪ್ ಎಗರಿಸಿ ದಕ್ಷಿಣ ಆಫ್ರಿಕಾದ ಮಾರ್ಕ್ ಬೌಚರ್
ಮೊದಲ ಸ್ಥಾನದಲ್ಲಿದ್ದರೆ, 905 ಸ್ಟಂಪ್ ಔಟ್ ಮಾಡುವ ಮೂಲಕ ಆಸ್ಟ್ರೇಲಿಯಾದ ವಿಕೆಟ್
ಕೀಪರ್ ಆ್ಯಡಮ್ ಗಿಲ್ಕ್ರಿಸ್ಟ್ ಎರಡನೇ ಸ್ಥಾನದಲ್ಲಿದ್ದಾರೆ.
ಸ್ಟಂಪ್ ಔಟ್ನಲ್ಲಿ ಧೋನಿ ಸಾಧನೆ
ಟೆಸ್ಟ್ – 294
ಏಕದಿನ – 419
ಟಿ20- 87

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ