ಮಿತಿಮೀರುತ್ತಿರುವ ಅನುತ್ಪಾದಕ ಆಸ್ತಿಗಳ (ಎನ್ಪಿಎ) ಪ್ರಮಾಣದ ಕುರಿತು ವಿವರವಾದ ಚಿತ್ರಣವನ್ನು ಕೇಂದ್ರ ಸರ್ಕಾರ ಮಂಗಳವಾರ ಬಹಿರಂಗಪಡಿಸಿದೆ. ಬ್ಯಾಂಕಿಂಗ್ ಕಾರ್ಯದರ್ಶಿ ರಾಜೀವ್ ಕುಮಾರ್, ‘ಕಳೆದ ತ್ರೖೆಮಾಸಿಕದಲ್ಲಿ ಎನ್ಪಿಎ ಪ್ರಮಾಣ ಇಳಿಕೆಯಾಗಿದ್ದು, 21,000 ಕೋಟಿ ರೂ. ಆಗಿದೆ. 2018-19ನೇ ಹಣಕಾಸು ಸಾಲಿನ ಮೊದಲ ತ್ರೖೆಮಾಸಿಕದಲ್ಲಿ ಬ್ಯಾಂಕ್ಗಳು 36,551 ಕೋಟಿ ರೂ. ಸಾಲ ಮರುಪಾವತಿ ಮಾಡಿವೆ. ಇನ್ನು ಹೆಚ್ಚು ವೇಗವಾಗಿ ಮರುಪಾವತಿ ಹಾಗೂ ವಸೂಲಾತಿ ಕ್ರಮಗಳು ಜರುಗಬೇಕಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಬ್ಯಾಂಕಿಂಗ್ ವ್ಯವಸ್ಥೆ ಶುದ್ಧೀಕರಣಕ್ಕೆ ಎನ್ಡಿಎ ಕ್ರಮಗಳು
# ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಪುನಶ್ಚೇತನಕ್ಕೆ ‘ಇಎಎಸ್ಇ’ ಅಜೆಂಡಾ
# 50 ಕೋಟಿ ರೂ. ಅಧಿಕ ಸಾಲ ಪಡೆದವರ ಪಾಸ್ಪೋರ್ಟ್ನ ಪೂರ್ಣ ಮಾಹಿತಿ ಸಂಗ್ರಹ
# ಬ್ಯಾಂಕ್ಗಳಿಗೆ ನೇಮಕಾತಿ ವೇಳೆ ಪಾರದರ್ಶಕತೆ
# ಮುದ್ರಾ ಯೋಜನೆ ಮತ್ತು ಇತರ ಸಣ್ಣ, ಮಧ್ಯಮ ಉದ್ದಿಮೆಗಳಿಗೆ ಸಾಲ ನೀಡುವ ಯೋಜನೆಗೆ ಫಿನ್ಟೆಕ್ ಉದ್ಯಮಿಮಿತ್ರ ಪೋರ್ಟಲ್
# ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ ಜಾರಿಗೆ.
ಎನ್ಡಿಎ ಸುಧಾರಣೆ ಕ್ರಮಗಳಿಗೆ ಸಿಕ್ಕ ಫಲ
# ಎನ್ಪಿಎ ಪ್ರಮಾಣ ಏರಿಕೆಗೆ ಕಡಿವಾಣ, 2019ರ ಮೊದಲ ತ್ರೖೆಮಾಸಿಕದಲ್ಲಿ ಅಂದಾಜು -ಠಿ; 21,000 ಕೋಟಿ ಇಳಿಕೆ.
# ಚಾಲ್ತಿ ಮತ್ತು ಉಳಿತಾಯ ಖಾತೆ ಅನುಪಾತ (ಸಿಎಎಸ್ಎ)ದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಪಾಲು 38.5% (2015ರ ಮಾರ್ಚ್ ) ನಿಂದ 38%ಗೆ (2018ರ ಜೂನ್)ಏರಿಕೆ.
# ವಿಶ್ವದಲ್ಲೇ ಅತಿ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆ (ಮೊದಲ ತ್ರೖೆಮಾಸಿಕದಲ್ಲಿ ಶೇ. 8.2)
# ವಿಶ್ವದ 6ನೇ ದೊಡ್ಡ ಆರ್ಥಿಕತೆ ಎಂಬ ಶ್ರೇಯ.
ಯುಪಿಎ ವರ್ಸಸ್ ಎನ್ಡಿಎ
ಹಿಂದೆ ಯುಪಿಎ ಸರ್ಕಾರ ಎನ್ಪಿಎ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮ ಮತ್ತು ಪ್ರಸ್ತುತ ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ಹೋಲಿಕೆ ಇಲ್ಲಿದೆ.
ಯುಪಿಎ: 1.ಫೋನ್ ಬ್ಯಾಂಕಿಂಗ್(ಫೋನ್ ಕರೆ ಮೂಲಕ ಸಾಲ) 2.ಹಂತವಾರು ಪ್ರವೇಶ ಕಾರ್ಯಾಚರಣೆ 3.ಸಾಲಕ್ಕೆ ನಿಗದಿಪಡಿಸಲಾದ ಮಾನದಂಡಗಳನ್ನು ಪೂರೈಸದವರಿಗೂ ಸಾಲ ಪಾವತಿ. 4.ಅಸಮರ್ಪಕ ನಿಗಾ 5.ಉದ್ದೇಶಿತ ಸುಸ್ತಿದಾರ/ ಆರ್ಥಿಕ ವಂಚನೆ ಯನ್ನು ಎನ್ಪಿಎ ಎಂದು ಪರಿಗಣನೆಯಿಲ್ಲ.
ಎನ್ಡಿಎ: 1. ವಾಣಿಜ್ಯ ಸಂಬಂಧಿತ ನಿರ್ಧಾರಗಳಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ. 2. 2.96 ಲಕ್ಷ ಬೋಗಸ್ ಕಂಪನಿಗಳ ಪತ್ತೆ, ವಿರುದ್ಧ ಕ್ರಮ. 3. ಮಾನದಂಡಗಳ ಕಟ್ಟುನಿಟ್ಟು ಅನುಸರಣೆ. 4. -ಠಿ; 250 ಕೋಟಿಗೂ ಅಧಿಕ ಮೊತ್ತದ ಸಾಲದ ಮೇಲೆ ವಿಶೇಷ ನಿಗಾ. 5. -ಠಿ; 50 ಕೋಟಿಗೂ ಅಧಿಕ ಮೊತ್ತದ ಮೇಲೆ ಎನ್ಪಿಎ ದೃಷ್ಟಿಯಲ್ಲೇ ನಿಗಾ
8 ಎನ್ಪಿಎ ಮಾರಾಟಕ್ಕೆ ಮುಂದಾದ ಎಸ್ಬಿಐ
ಸುಮಾರು 3,900 ಕೋಟಿ ರೂ. ಬಾಕಿ ಮೊತ್ತ ವಸೂಲಾತಿಗೆ 8 ಅನುತ್ಪಾದಕ ಆಸ್ತಿಗಳನ್ನು ಮಾರಾಟ ಮಾಡಲು ದೇಶದ ಅತಿದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಯ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ನಿರ್ಧರಿಸಿದೆ. ಹಣಕಾಸು ಸಂಸ್ಥೆಗಳು, ಸ್ವತ್ತು ಪುನರ್ನಿರ್ವಣ ಕಂಪನಿಗಳಿಗೆ ಬಿಡ್ ಸಲ್ಲಿಸಲು ಎಸ್ಬಿಐ ಆಹ್ವಾನ ನೀಡಿದೆ. ಪ್ರಸ್ತುತ ಮಾರಾಟಕ್ಕಿರುವ ಎನ್ಪಿಎಗಳಲ್ಲಿ ಅತಿ ಹೆಚ್ಚು ಬಾಕಿ ಉಳಿಸಿಕೊಂಡಿರುವುದು ಕೋಲ್ಕತ ಮೂಲದ ರೋಹಿತ್ ಫೆರ್ರೊ ಟೆಕ್ (1,320.37 ಕೋಟಿ ರೂ.), ಎರಡನೇ ಅತಿ ಹೆಚ್ಚು ಬಾಕಿ ಇರುವುದು ಇಂಡಿಯನ್ ಸ್ಟೀಲ್ ಕಾರ್ಪೆರೇಷನ್ ಲಿ.ನದ್ದು (928.97 ಕೋಟಿ ರೂ.) ಎಂದು ತಿಳಿದುಬಂದಿದೆ. ಸೆ.26ಕ್ಕೆ ಎನ್ಪಿಎಗಳ ಇ-ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ