ನವದೆಹಲಿ: ಇಂಗ್ಲೆಂಡ್ ತಂಡದ ಮಾಜಿ ನಾಯಕ ಆಲಿಸ್ಟರ್ ಕುಕ್ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಸೋಮವಾರ ವಿದಾಯ ಘೋಷಿಸಿದ್ದಾರೆ.
ಭಾರತದ ವಿರುದ್ಧ ನಡೆಯುತ್ತಿರುವ 5 ಟೆಸ್ಟ್ ಪಂದ್ಯದ ಸರಣಿಯಲ್ಲಿ ಆಂಗ್ಲ ಪಡೆ ಈಗಾಗಲೇ 3-1 ಅಂತರದಿಂದ ಸರಣಿ ಜಯಿಸಿದೆ. ಸೆಪ್ಟೆಂಬರ್ 9ರಿಂದ ಕೊನೆಯ ಟೆಸ್ಟ್ ಪಂದ್ಯ ಶುರುವಾಗಲಿದ್ದು, ಪಂದ್ಯದ ನಂತರ ಕುಕ್ ವಿದಾಯ ಹೇಳಲಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಟೆಸ್ಟ್ನಲ್ಲಿನ ಕಳಪೆ ಪ್ರದರ್ಶನದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಒಟ್ಟು 8 ಇನ್ನಿಂಗ್ಸ್ ಆಡಿರುವ ಕುಕ್ ಕೇವಲ 15.57ರ ಸರಾಸರಿಯಲ್ಲಿ 109 ರನ್ ಗಳಿಸಿದ್ದಾರೆ. ಸರಣಿಯಲ್ಲೇ 29 ರನ್ ಕುಕ್ ಅವರ ಅತ್ಯಧಿಕ ರನ್ ಆಗಿದೆ.
ಕುಕ್ ನಿವೃತ್ತಿ ಬಗ್ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಮಾಹಿತಿ ಖಚಿತ ಪಡಿಸಿದೆ. ಟೆಸ್ಟ್ ಮಾದರಿಯ ಪಂದ್ಯಗಳಲ್ಲಿ ಕುಕ್ ಉತ್ತಮ ಆಟಗಾರ ಎನಿಸಿಕೊಂಡಿದ್ದರು. ಅಲ್ಲದೆ, ಇವರನ್ನು ಟೀಂ ಇಂಡಿಯಾದ ಗೋಡೆ ಖ್ಯಾತಿಯ ರಾಹುಲ್ ಡ್ರಾವಿಡ್ ಅವರಿಗೆ ಹೋಲಿಸಲಾಗುತ್ತಿತ್ತು. ವಿಶ್ವ ದಾಖಲೆಯ 160 ಟೆಸ್ಟ್ ಪಂದ್ಯಗಳನ್ನು ಆಡಿರುವ ಕುಕ್, ಅತಿವೇಗದಲ್ಲಿ 10,000 ರನ್ ದಾಖಲಿಸಿದ ಟೆಸ್ಟ್ ಆಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಕಳೆದ ಕೆಲವು ತಿಂಗಳುಗಳ ಚಿಂತನೆ ಹಾಗೂ ವಿವೇಚನೆಯ ನಂತರ ನಾನು ಕ್ರಿಕೆಟ್ ವಿದಾಯ ಹೇಳಲು ನಿರ್ಧರಿಸಿದ್ದೇನೆ. ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿಯ ಕೊನೆಯಲ್ಲಿ ನಿವೃತ್ತಿ ಘೋಷಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಒಟ್ಟು 160 ಟೆಸ್ಟ್ ಆಡಿರುವ ಕುಕ್, 44.88ರ ಸರಾಸರಿಯಲ್ಲಿ 12,254 ರನ್ ಗಳಿಸಿದ್ದಾರೆ. ಇದರಲ್ಲಿ 32 ಶತಕ ಹಾಗೂ 56 ಅರ್ಧ ಶತಕಗಳು ಸೇರಿವೆ.(ಏಜೆನ್ಸೀಸ್)
🚨 BREAKING NEWS 🚨
Alastair Cook has announced his retirement from international cricket.
➡️ https://t.co/AvprHaFoI3, #ThankYouChef, pic.twitter.com/7rOErW7W2c,
— England Cricket (@englandcricket) September 3, 2018,

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ