ದೇಶದ ದೂರಸಂಪರ್ಕ ವಲಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದಿಂದ ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿ-2018 (ಎನ್ಡಿಸಿಪಿ)ಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ದೂರಸಂಪರ್ಕ ಆಯೋಗಕ್ಕೆ ಡಿಜಿಟಲ್ ಸಂವಹನ ಆಯೋಗ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೂ ಒಪ್ಪಿಗೆ ನೀಡಲಾಗಿದೆ.
ಹೊಸ ನೀತಿಯಿಂದ ದೇಶದ ಸಂವಹನ ವ್ಯವಸ್ಥೆ ಸಶಕ್ತವಾಗಲಿದ್ದು, ಡಿಜಿಟಲ್ ಸಾರ್ವಭೌಮತ್ವ ವೃದ್ಧಿಸಲಿದೆ. ಸಾರ್ವಜನಿಕ, ಉದ್ದಿಮೆ ಮತ್ತು ಸಂಸ್ಥೆಗಳ ಆರ್ಥಿಕ ಮತ್ತು ಸಾಮಾಜಿಕ ಸಂವಹನಗಳು ಉತ್ತಮವಾಗಲಿವೆ. ಡಿಜಿಟಲ್ ಸಂವಹನದ ಮೂಲಸೌಕರ್ಯ ಮತ್ತು ಸೇವೆ ಕೈಗೆಟಕುವ ದರದಲ್ಲಿ ಜನರಿಗೆ ದೊರೆಯಲಿದೆ. ದೇಶದ ಜಿಡಿಪಿಗೆ ದೂರಸಂಪರ್ಕ ವಲಯದ ಕೊಡುಗೆ ಶೇ. 6 ಇದ್ದು ಹೊಸ ನೀತಿಯಿಂದ ಇದು ಶೇ. 8ಕ್ಕೆ ಏರಲಿದೆ ಎಂದು ಸರ್ಕಾರ ದೂರಸಂಪರ್ಕ ಸಚಿವಾಲಯ ತಿಳಿಸಿದೆ. -ಪಿಟಿಐ
ಹೊಸ ನೀತಿ ಗ್ರಾಹಕ ಕೇಂದ್ರೀಕೃತ ಮತ್ತು ಅಪ್ಲಿಕೇಷನ್ ಚಾಲಿತವಾಗಿದೆ. ದೇಶದ ಸಂವಹನ ವ್ಯವಸ್ಥೆ ಜಾಗತಿಕ ಮಟ್ಟಕ್ಕೆ ಏರಲಿದೆ. 5ಜಿ ಅಂತರ್ಜಾಲ ಸೇವೆ, ಯಂತ್ರದಿಂದ ಯಂತ್ರದ ಸಂವಹನಗಳಲ್ಲಿ ಕ್ರಾಂತಿಕಾರಕ ಬದಲಾವಣೆ ಆಗಲಿದೆ.
| ಮನೋಜ್ ಸಿನ್ಹಾ, ದೂರಸಂಪರ್ಕ ಸಚಿವ
ಟೆಲಿಕಾಂ ಹೊಸ ನೀತಿ ವಿಶೇಷ
ಉತ್ತಮ ಸಂಪರ್ಕ, ಸುರಕ್ಷಿತ ಭಾರತ
50 ಎಂಬಿಪಿಎಸ್ ವೇಗದಲ್ಲಿ ಸರ್ವರಿಗೂ ಬ್ರಾಂಡ್ಬ್ಯಾಂಡ್ ಸಂಪರ್ಕ
ಎಲ್ಲ ಗ್ರಾಪಂಗಳಿಗೆ 1 ಜಿಬಿಪಿಎಸ್ ಅಂತರ್ಜಾಲ
ಬ್ರಾಂಡ್ಬ್ಯಾಂಡ್ ಸಂಪರ್ಕವಿಲ್ಲದ ಎಲ್ಲ ಸ್ಥಳಗಳನ್ನು ಸಂರ್ಪಸುವ ಖಾತ್ರಿ
ಡಿಜಿಟಲ್ ಸಂವಹನ ವಲಯದಲ್ಲಿ -ಠಿ; 7.26 ಲಕ್ಷ ಕೋಟಿ ವಿದೇಶಿ ಹೂಡಿಕೆ ಆಕರ್ಷಿಸುವ ಉದ್ದೇಶ
2022ರ ಹೊತ್ತಿಗೆ 40 ಲಕ್ಷ ಉದ್ಯೋಗ ಸೃಷ್ಟಿ ಗುರಿ
ಜಿಎಸ್ಟಿ ನೆಟ್ವೆರ್ಕ್ ಪರಿಪೂರ್ಣವಾಗಿ ಸರ್ಕಾರಿ ಸಂಸ್ಥೆಯ ಒಡೆತನಕ್ಕೆ
ಜಾಗತಿಕ ಐಟಿಯು ಐಸಿಟಿ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತ 134ನೇ ಸ್ಥಾನದಲ್ಲಿದ್ದು, ಹೊಸ ನೀತಿಯಿಂದ ಭಾರತವು 50ನೇ ಸ್ಥಾನದೊಳಗೆ ಇರಲಿದೆ.
ಫ್ರಿಜ್, ಎಸಿ ಸಹಿತ 19 ಉತ್ಪನ್ನಗಳ ಮೇಲೆ ಆಮದು ಸುಂಕ ಏರಿಕೆ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ